ಅಂಗವಿಕಲರಿಗೆ ದ್ವಿ-ಚಕ್ರ ವಾಹನ ಚಾಲನಾ ಪರವಾನಿಗೆ ನೀಡಿ: ಸಚಿವ ಕತ್ತಿ
ಹುಕ್ಕೇರಿ 25: ತಾಲೂಕಿನ 34 ಅಂಗವಿಕಲರಿಗೆ ಉಚಿತ ದ್ವಿ ಚಕ್ರ ವಾಹನವನ್ನು ಆಹಾರ ಮತ್ತು ನಾಗರಿಕ ಪೆÇೀರೈಕೆ ಸಚಿವ ಉಮೇಶ ಕತ್ತಿ ವಿವರಿಸಿದರು. ತಾಲೂಕು ಪಂಚಾಯತ ಮತ್ತು ಜಿಲ್ಲಾ ಅಂಗವಿಕಲರ ಕಲ್ಯಾಣ ಇಲಾಖೆ ವತಿಯಿಂದ ಕೊಡಮಾಡುವ ಅಂಗವಿಕಲರಿಗೆ ಉಚಿತ ದ್ವಿ ಚಕ್ರ ವಾಹನಗಳನ್ನು ವಿತರಿಸಿ ಮಾತನಾಡಿದ ಉಮೇಶ ಕತ್ತಿ ಸರ್ಕಾರದಿಂದ ಕೋಡಮಾಡುವ ವಾಹನಗಳನ್ನು ಪಡೆದ ಅಂಗವಿಕಲರು ಸರಿಯಾಗಿ ತಮ್ಮ ದೈನಂದಿನ ಚಟುವಟಿಕೆಗಳಿಗೆ ಉಪಯೋಗಿಸ ಬೇಕು ಮತ್ತು ಇಲಾಖೆ ವತಿಯಿಂದ ವಾಹನ ಪಡೆದ ಫಲಾನುಭವಿಗಳಿಗೆ ಚಾಲನಾ ಪರವಾಣಿಗೆ ನೀಡಬೇಕು ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಅಂಗವಿಕಲರ ಕಲ್ಯಾಣ ಇಲಾಖೆ ಅಧಿಕಾರಿನಾಮದೇವ ಬೀಲಕಾರ, ತಾಲೂಕಾ ಪಂಚಾಯತ ಅದ್ಯಕ್ಷ ದಸ್ತಗೀರ ಬಸ್ಸಾಪೂರೆ, ಇಓಬಿಕೆ ಲಾಳಿ, ಚಂದ್ರಕಾಂತ ತಳವಾರ ಹಾಗೂ ಫಲಾನುಭವಿಗಳು ಉಪಸ್ಥಿತರಿದ್ದರು.