ಅಪೂರ್ಣಗೊಂಡ ವಿವಿಧ ಕಾಮಗಾರಿಗಳನ್ನು ಪೂರ್ಣಗೊಳಿಸಲು ಮನವಿ
ಮಹಾಲಿಂಗಪುರ 10: ನಗರದ ನಾಗರಿಕ ಹಿತರಕ್ಷಣಾ ಸಮಿತಿಯ ಎಲ್ಲ ಪದಾಧಿಕಾರಿಗಳು, ಸದಸ್ಯರು ಸೇರಿ ನಗರದ ವಿವಿಧ ಅಪೂರ್ಣಗೊಂಡ ಕೆಲಸ, ಕಾಮಗಾರಿಗಳ ಬಗ್ಗೆ ಪುರಸಭೆ ಮುಖ್ಯಾಧಿಕಾರಿ ಎಚ್ ಎಸ್ ಚಿತ್ತರಗಿ ಇವರಿಗೆ ಸಮಿತಿಯ ಅಧ್ಯಕ್ಷ ಶೇಖರ್ ಅಂಗಡಿ ಮನವಿ ಸಲ್ಲಿಸಿದರು.
ಪುರಸಭೆ ಹಾಗೂ ಆರ್ವಿ ಅಸೋಸಿಯೇಟ್ಸ್ ಆರ್ಕಿಟೆಕ್ಟ್ ಎಂಜಿನಿಯರಿಂಗ್ ಪ್ರೈವೇಟ್ ಲಿಮಿಟೆಡ್ ಚಿಕ್ಕೋಡಿ ಇವರಿಗೆ ಸಲ್ಲಿಸಿದ ಮನವಿಯ ವಿμÀಯ ಪ್ರಸ್ತಾಪಿಸುತ್ತ ಅವರು ಬೆಳಗಲಿ ಮಹಾದ್ವಾರದಿಂದ ಸಮೀರ್ವಾಡಿ ರೋಡ್ ಮಹಾದ್ವಾರದವರೆಗೆ ರಾಜ್ಯ ಹೆದ್ದಾರಿಯ ಮಧ್ಯ ಅಳವಡಿಸಿರುವ, ಅಲ್ಲಲ್ಲಿ ವಿದ್ಯುತ್ ದೀಪಗಳ ಕಂಬಗಳು ಹಾಳಾಗಿರುವ ಕಾರಣ, ವಿದ್ಯುತ್ ದೀಪಗಳೊಂದಿಗೆ ಮರು ಜೋಡಣೆ ಕಾರ್ಯ ಮಾಡಬೇಕು.
ಬುದ್ನಿ ಪಿಡಿಯ ಹೇಮರೆಡ್ಡಿ ಮಲ್ಲಮ್ಮ ವೃತ್ತ, ರಾಣಿ ಚೆನ್ನಮ್ಮ ವೃತ್ತ, ಗಾಂಧಿ ವೃತ್ತ, ಅಂಬೇಡ್ಕರ್ ವೃತ್ತ, ಬಸವೇಶ್ವರ ವೃತ್ತ ಹೀಗೆ ಪ್ರಮುಖ ಆರು ಸ್ಥಳಗಳಲ್ಲಿ ಶೀಘ್ರದಲ್ಲಿ ಸ್ವಯಂ ಚಾಲಿತ ಸಂಚಾರಿ ಮಾರ್ಗಸೂಚಿ ದೀಪಗಳನ್ನು ಅಳವಡಿಸಬೇಕು.
ಪುರಸಭೆ ಹದ್ದಿಯ ಪ್ರಮುಖ ಕಡೆಗಳಲ್ಲಿಯ ರಸ್ತೆಗಳ ಡಾಂಬರೀಕರಣ ಕಾಮಗಾರಿ ಭಾಗಶಃ ಮುಗಿದಿರುತ್ತವೆ. ಆದರೆ ಜವಳಿ ಬಜಾರ್ ಪ್ರಮುಖ ರಸ್ತೆಯ ತಾಳಿಕೋಟಿಯವರ ಅಂಗಡಿಯಿಂದ ಗಾಂಧಿ ಸರ್ಕಲ್ ವರೆಗೆ ಡಾಂಬರಿಕರಣ ಅರ್ಧಕ್ಕೆ ನಿಂತಿದ್ದು ಇದನ್ನು ಪೂರ್ಣಗೊಳಿಸಬೇಕು.
ಗೋಕಾಕ್ ರೋಡ್ ಅವರಾದಿ ಪೆಟ್ರೋಲ್ ಬಂಕ್ ಹತ್ತಿರ, ಚನ್ನಮ್ಮ ವೃತ್ತದಿಂದ ಗಾಂಧಿ ವೃತ್ತ ಮಧ್ಯದಲ್ಲಿ, ಅಂಬೇಡ್ಕರ್ ವೃತ್ತದಿಂದ ಬೆಳಗಲಿ ಅಗಸಿ ಮಧ್ಯದಲ್ಲಿ ರಸ್ತೆ ವಿಭಜಕಗಳನ್ನು ಒಡೆದು ಮಧ್ಯ ಮಾರ್ಗವನ್ನು ಮಾಡಿ ಪ್ರಯಾಣಿಕರಿಗೆ ಕೊಂಕನ ಸುತ್ತಿ ಮೈಲಾರಕ್ಕೆ ಬರುವುದು ತಪ್ಪುತ್ತದೆ.
ಸಂಘಟನೆಯ ಉಪಾಧ್ಯಕ್ಷರಾದ ಸಿದ್ದು ಶಿರೋಳ, ವೀರಭದ್ರಪ್ಪ ಮುಗಳ್ಯಾಳ, ಸಂಚಾಲಕ ಬಸವರಾಜ್ ಪರಿಟ್, ಹನುಮಂತ್ ಜಮಾದಾರ್ ಮತ್ತು ಶಂಕರ್ ಕೋಳಿಗುಡ್ಡ, ಮಹದೇವ್ ಪುಕಾಳೆ, ಮಹಾಲಿಂಗಪ್ಪ ಅನಂತಪುರ್ ಇನ್ನು ಮುಂತಾದವರಿದ್ದರು.