ಅನ್ಯಭಾಷೆ ನಾಮಫಲಕ ತೆರವುಗೊಳಿಸುವಂತೆ ಆಗ್ರಹಿಸಿ ಮನವಿ
ಬ್ಯಾಡಗಿ: ಪಟ್ಟಣದ ಎಪಿಎಂಸಿ ಸೇರಿದಂತೆ ಪ್ರಮುಖ ಬೀದಿಗಳಲ್ಲಿರುವ ಕನ್ನಡ ಭಾಷೆಯನ್ನು ಹೊರತುಪಡಿಸಿ ಅನ್ಯಭಾಷೆ ನಾಮಫಲಕ ತೆರವುಗೊಳಿಸುವಂತೆ ಆಗ್ರಹಿಸಿ ಕನರ್ಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಸೇನೆ ಬಣದ ಪದಾಧಿಕಾರಿಗಳು ತಹಸೀಲ್ದಾರ್ಗೆ ಮನವಿ ಸಲ್ಲಿಸಿ ಒತ್ತಾಯಿಸಿದರು.
ಈ ವೇಳೆ ಮಾತನಾಡಿದ ಕರವೇ ಜಿಲ್ಲಾಧ್ಯಕ್ಷ ರಾಮು ತಳವಾರ, ಅಂತರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಗಳಿಸಿರುವ ಮೆಣಸಿನಕಾಯಿ ಮಾರುಕಟ್ಟೆಯಲ್ಲಿ ಎಲ್ಲ ಅಂಗಡಿಗಳ ಮುಂದೆ ತೆಲುಗು, ತಮಿಳು ಸೇರಿದಂತೆ ಅನ್ಯಭಾಷೆಯ ನಾಮಫಲಕಗಳೇ ಹೆಚ್ಚಾಗಿ ರಾರಾಜಿಸುತ್ತಿವೆ ಕರ್ನಾಟಕದಲ್ಲಿ ಕನ್ನಡಕ್ಕೆ ಮೊದಲ ಆದತ್ಯೆ ನೀಡಬೇಕು ಆದ್ದರಿಂದ ಅನ್ಯಭಾಷೆಯ ನಾಮಫಲಕ ತೆರವುಗೊಳಿಸಿ ಕನ್ನಡ ಭಾಷೆಯಲ್ಲಿ ನಾಮ ಫಲಕವನ್ನು ಅಳವಡಿಸಲು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳುವಂತೆ ಆಗ್ರಹಿಸಿದರು.
ತಾಲೂಕಾಧ್ಯಕ್ಷ ಮಂಜುನಾಥ ದಾಸಪ್ಪನವರ ಮಾತನಾಡಿ, ಕೇವಲ ಎಪಿಎಂಸಿ ಅಲ್ಲದೇ ಪಟ್ಟಣದ ಹಲವು ಕಡೆಗಳಲ್ಲಿ ಅನ್ಯಭಾಷೆಯ ನಾಮಫಲಗಳು ಕಾಣ ಸಿಗುತ್ತವೆ, ಅಲ್ಲದೇ ಕೆಲ ಜನಪ್ರತಿನಿಧಿಗಳು ಸಹ ತಮ್ಮ ಶಿಕ್ಷಣ ಸಂಸ್ಥೆಗಳ ಹೊರಗಡೆ ಕನ್ನಡವನ್ನು ಕಡೆಗಣಿಸಿ ಇಂಗೀಷ್ ಭಾಷೆಗೆ ಒತ್ತು ನೀಡಿದ್ದಾರೆ ಎಂದು ಆರೋಪಿಸಿದರು.
ಆ.10ರೊಳಗೆ ತೆರವುಗೊಳ್ಳದಿದ್ದಲ್ಲಿ ಪ್ರತಿಭಟನೆ: ಬರುವ ಆ.10 ರೊಳಗಾಗಿ ಅನ್ಯಭಾಷೆಯ ಎಲ್ಲಾ ನಾಮಫಲಕಗಳನ್ನು ತೆರವುಗೊಳಿಸದಿದ್ದ ಲ್ಲಿ ಕರವೇ ಸದಸ್ಯರೇ ಖುದ್ದಾಗಿ ತೆರವುಗೊಳಿಸಿ ಪ್ರತಿಭಟನೆ ನಡೆಸಲಿದ್ದೇವೆ ಎಂದು ಎಚ್ಚರಿಸಿದರು. ಈ ವೇಳೆ ವಿರೇಶ ಹಡಪದ, ಚನ್ನಪ್ಪ ಕುರಿಗೇರ, ಶಿವಾನಂದ ಚಕ್ಕಳ್ಳಿ, ಸುಮಾ ಪುರದ, ನಿಂಗಪ್ಪ ಕಚವಿ, ಸುನಿತಾ ಬಡಿಗೇರ, ಲಲಿತಾ ಮತ್ತೂರ, ರೇಣುಕಾ ಕೊಪ್ಪದ, ಬಸವ ರಾಜ ಬಳಿಗಾರ ಸೇರಿದಂತೆ ಉಪಸ್ಥಿತರಿದ್ದರು.