ಫ್ಲೈಒವರ್ ನಿರ್ಮಿಸುವಂತೆ ಮನವಿ
ಹಗರಿಬೊಮ್ಮನಹಳ್ಳಿ 16: ಪಟ್ಟಣದಲ್ಲಿ ದಿನನಿತ್ಯ ಹತ್ತಾರು ಗೂಡ್ಸ್ ರೈಲುಗಳು ಸಂಚರಿಸುತ್ತಿದ್ದು ಗಂಟೆಗಟ್ಟಲೆ ಟ್ರಾಫಿಕ್ ಉಲ್ಬಣಗೊಳ್ಳುತ್ತಿದೆ, ಹಾಗಾಗಿ ಸುಗಮ ಸಂಚಾರಕ್ಕೆ ಫೈಒವರ್ ನಿರ್ಮಿಸುವಂತೆ ರೈಲ್ವೇ ಹೋರಾಟ ಸಮಿತಿಯು ಮಹೇಶ್ವರ ಸ್ವಾಮಿಗಳ ನೇತೃತ್ವದಲ್ಲಿ ಹೊಸಪೇಟೆ ರೈಲ್ವೇ ಸ್ಟೇಷನ್ನಲ್ಲಿ ನೈಋತ್ಯ ರೈಲ್ವೇ ವಲಯದ ಪ್ರದಾನ ವ್ಯವಸ್ಥಾಪಕ ಸಂಜೀವ ಕಿಶೋರ್ ಅವರಿಗೆ ಮನವಿ ಸಲ್ಲಿಸಿದರು.
ಈ ಸಂಧರ್ಭದಲ್ಲಿ ಶ್ರೀಕ್ಷೇತ್ರ ನಂದಿಪುರದ ಮಹೇಶ್ವರ ಸ್ವಾಮಿಗಳು ಮಾತನಾಡಿ ಪಟ್ಟಣದಲ್ಲಿ ಸಂಚರಿಸುತ್ತಿರುವ ಗೂಡ್ಸ್ ರೈಲುಗಳಿಂದ ಟ್ರಾಫಿಕ್ ಹೆಚ್ಚಾಗಿದೆ, ಗಂಟೆಗಟ್ಟಲೆ ಟ್ರಾಫಿಕ್ ಸಮಸ್ಯೆ ಬಗೆಹರಿಯದಾಗಿದೆ, ಇನ್ನು ಶಾಲಾ ಸಮಯಕ್ಕೆ ಗೇಟ್ ಹಾಕಿದರೆ ಶಾಲೆಯ ಮಕ್ಕಳಿಗೆ ತುಂಬಾ ತೊಂದರೆಯಾಗುತ್ತಿದೆ. ಮೂಖ ಮುಖಿ ರೈಲುಗಳು ಕ್ರಾಸಿಂಗ್ ರೈಲ್ವೇ ಸ್ಟೇಷನ್ ಮುಂಬಾಗದಲ್ಲಿರುವುದರಿಂದ ಗಂಟೆಗಟ್ಟಲೆ ಕಾಯುವ ಪರಿಸ್ಥಿತಿ ಎದುರಾಗಿದೆ ಕೂಡಲೇ ಫ್ಲೈಒವರ್ ನಿರ್ಮಣ ಮಾಡಬೇಕು, ನಿಲ್ದಾಣ ನವೀಕರಿಸುವುದರ ಜೊತೆ ಯಂಶವಂತಪುರ-ಬಿಜಾಪುರ ರೈಲು ಮೊದಲಿನ ವೇಳೆಗೆ ಬದಲಿಸುವಂತೆ ಮನವಿ ಮಾಡಿದರು.
ಮನವಿ ಪತ್ರವನ್ನು ಸ್ವೀಕರಿಸಿದ ನೈಋತ್ಯ ರೈಲ್ವೇ ವಲಯದ ಪ್ರಧಾನ ವ್ಯೆವಸ್ಥಾಪಕ ಸಂಜೀವ ಕಿಶೋರ ಮಾತನಾಡಿ ಸಮಸ್ಯೆಗೆ ಕೂಡಲೇ ಪರಿಹಾರ ಕಂಡುಕೊಂಡು ಸ್ಪಂದಿಸುವುದಾಗಿ ಭರವಸೆಯನ್ನು ನೀಡಿದರು.
ಈ ಸಂಧರ್ಭದಲ್ಲಿ ಹೊಸಳ್ಳಿಯ ಶ್ರೀ ಅಜಾತ ಶಂಭುಲಿಂಗ ಶಿವಾಚಾರ್ಯ, ಸಂಚಿ ಶಿವಕುಮಾರ್, ಈ.ಭರತ್, ಅಟೋ ಸಂಘದ ವೇಂಕಟೇಶ್, ಕೈಲಾಸ್, ವಿಠೋಬ, ಕೊಟ್ರೇಶ್, ಕರಿಬಸವರಾಜ, ನಂದೀಶ ಸೇರಿದಂತೆ ರೈಲ್ವೇ ಹೋರಾಟ ಸಮಿತಿ ಪದಾಧಿಕರಿಗಳು ಸದಸ್ಯರು ಬಾಗವಹಿಸಿದ್ದರು.