ಕಂಪ್ಲಿ

ನಾಡ ಕಛೇರಿಗೆ ಡಾಟಾ ಎಂಟ್ರಿ ಆಪರೇಟರ್‌ನ್ನು ನೇಮಿಸಲು ಮನವಿ

ನಾಡ ಕಛೇರಿಗೆ ಡಾಟಾ ಎಂಟ್ರಿ ಆಪರೇಟರ್‌ನ್ನು ನೇಮಿಸಲು ಮನವಿ

ಲೋಕದರ್ಶನ ವರದಿ 

 ಕಂಪ್ಲಿ 08: ಪಟ್ಟಣದ ಭೀಮ್ ಆರ್ಮಿ ಪದಾಧಿಕಾರಿಗಳು, ಇಲ್ಲಿನ ನಾಡ ಕಾರ್ಯಾಲಯದಲ್ಲಿ ಹೆಚ್ಚುವರಿಯಾಗಿ ಕಂಪ್ಯೂಟರ್ ಡಾಟಾ ಎಂಟ್ರಿ ಆಪರೇಟರ್‌ನ್ನು ನೇಮಿಸಬೇಕೆಂದು ಒತ್ತಾಯಿಸಿ, ತಹಸೀಲ್ದಾರ ಜೂಗುಲ ಮಂಜುನಾಯಕ ಅವರಿಗೆ ಮನವಿ ಬುಧವಾರ ಸಲ್ಲಿಸಿದರು. ಭೀಮ್ ಆರ್ಮಿ ಗೌರವ ಅಧ್ಯಕ್ಷ ಸಣಾಪುರ ಮರಿಸ್ವಾಮಿ ಮಾತನಾಡಿ, ಈ ಕಾರ್ಯಾಲಯದಲ್ಲಿ ಒಬ್ಬ ಡಾಟಾ ಎಂಟ್ರಿ ಆಪರೇಟರ್ ಇದ್ದಾರೆ. ಆದರೆ ಕಚೇರಿಗೆ ಜಾತಿ, ಆದಾಯ, ಎ,ಬಿ,ಸಿ ತಿದ್ದುಪಡಿ ಸೇರಿ ಕೆಲ ಅರ್ಜಿಗಳನ್ನು ಸಲ್ಲಿಸಲು ಅನೇಕ ಜನರು ಬರುತ್ತಾರೆ.

ಆದರೆ ಒಬ್ಬರಿಂದ ಎಲ್ಲ ಜನತೆಯ ಅರ್ಜಿ ಸ್ವೀಕರಿಸಲು ಅಡಚಣೆಯಾಗುತ್ತಿದ್ದು, ಹೆಚ್ಚುವರಿಯಾಗಿ ಡಾಟಾ ಎಂಟ್ರಿ ಆಪರೇಟರ್‌ನ್ನು ನೇಮಿಸಬೇಕು ಎಂದರು. ಭೀಮ್ ಆರ್ಮಿ ಅಧ್ಯಕ್ಷ ಎ.ಎಸ್‌.ಯಲ್ಲಪ್ಪ ಮಾತನಾಡಿ,  ಜನತೆ ಸಲ್ಲಿಸುವ ಪ್ರತಿ ಅರ್ಜಿಗೂ ಶುಲ್ಕದ ಪಟ್ಡಿಯನ್ನು ಕಚೇರಿಯಲ್ಲಿ ಅಳವಡಿಸಬೇಕು. ಬೇಗನೆ ಹೆಚ್ಚುವರಿ ಡಾಟಾ ಎಂಟ್ರಿ ಆಪರೇಟರ್‌ನ್ನು ನಿಯೋಜನೆ ಮಾಡಬೇಕು ಎಂದರು. ಪ್ರಮುಖರಾದ ಸಿಕ್ಲಿ ಬಸವರಾಜ, ಆರ್‌.ಎಂ.ಎಚ್‌.ಧನುಷ್, ಮೆಟ್ರಿ ಬಸವರಾಜ, ಎಚ್‌.ಹುಲಿಗೇಶ್, ಪ್ರವೀಣ, ಶಿವಕುಮಾರ್, ಬಸಮ್ಮ ಇತರಿದ್ದರು. 


ಸುದ್ದಿ ಓದಿ