ಸ್ವಾಮಿ ವಿವೇಕಾನಂದ ವೃತದ ಹೆಸರ ನಾಮಕರಣ ಮಾಡುವಂತೆ ಆಗ್ರಹಿಸಿ ಮನವಿ
ಮಹಾಲಿಂಗಪುರ: ನಗರದ ಡಬಲ್ ರೋಡ್ ರಸ್ತೆಯ, ಕಾಯಿಪಲ್ಲೆ ಮಾರ್ಕೆಟ್ ಹತ್ತಿರ ಇರುವ ವೃತಕ್ಕೆ ಸ್ವಾಮಿ ವಿವೇಕಾನಂದ ವೃತ್ ಎಂದು ಅಧಿಕೃತವಾಗಿ ನಾಮಕರಣ ಮಾಡಬೇಕೆಂದು ಹಿಂದೂ ಸಂಘಟನೆಗಳ ಕಾರ್ಯಕರ್ತರು ಸೋಮವಾರ ಪುರಸಭೆ ಅಧಿಕಾರಿಯಾದ ಮಹಾಲಿಂಗ ಮುಗಳಕೊಡ ಅವರಿಗೆ ಮನವಿ ಸಲ್ಲಿಸಿದರು.
ತದನಂತರದಲ್ಲಿ ಹಿಂದೂ ಸಂಘಟನೆಯ ಮುಖಂಡ ಶಿವಾನಂದ ನೇಗಿನಾಳ,ಸಂತೋಷ ಹಜಾರೆ, ರಾಘು ಗರಗಟ್ಟಿ, ಈ ಸಂದರ್ಭದಲ್ಲಿ ಮಾತನಾಡಿದ ಅವರು ಈ ವೃತಕ್ಕೇ 22/05/2015 ರಂದು ಅಂದಿನ ಪುರಸಭೆ ಅಧ್ಯಕ್ಷ ಅರ್ಜುನಗೌಡ ಪಾಟೀಲ್ ಅವರ ಅಧ್ಯಕ್ಷತೆಯಲ್ಲಿ ಪುರಸಭೆ ಸರ್ವಾನುಮತದಿಂದ ಠರಾವು ಪಾಸು ಮಾಡಿ ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು.ವೃತ್ತಕ್ಕೆ ಸಂಬಂಧಿಸಿದಂತೆ ಹಲವು ಬಾರಿಗೆ ಮನವಿ ಸಲ್ಲಿಸಿದರು ಸಹ, ಪುರಸಭೆಯಿಂದ ಯಾವುದೇ ರೀತಿಯ ಸ್ಪಂದನೆಯಾಗಿಲ್ಲ.ಇನ್ಮುಂದೆ ಆದರೂ ಪುರಸಭೆಯಿಂದ ಅಧಿಕೃತವಾಗಿ ವೃತ್ತಕ್ಕೆ ಸ್ವಾಮಿ ವಿವೇಕಾನಂದ ವೃತ್ತ ಎಂದು ನಾಮಕರಣ ಮಾಡಬೇಕೆಂದು ಒತ್ತಾಯಿಸಿದರು.
ಮಾತನಾಡಿದ ಪುರಸಭೆ ಸದಸ್ಯರಾದ ರವಿ ಜವಳಗಿ,ಈ ವೃತದ ಕಾರ್ಯವನ್ನು ಅತೀ ಬೇಗನೆ ಮಾಡದೆ ಹೋದಲ್ಲಿ ಮುಂದಿನ ದಿನಗಳಲ್ಲಿ ಉಗ್ರವಾದ ಹೋರಾಟವನ್ನು ಮಾಡಬೇಕಾಗುತ್ತದೆ ಎಂದು ಹೇಳಿದರು.ಹಿಂದೂ ಸಂಘಟನೆ ಮುಖಂಡರಾದ ತಿಪ್ಪಣ್ಣ ಬಂಡಿವಡ್ಡರ,ವಿಜಯ ಸಬಾಕಾಳೆ,ವೀರಭದ್ರ ಮುಗಲ್ಯಾಳ,ರವಿ ಹುಣಸ್ಯಾಳ, ಶ್ರೀಶೈಲ ಮಠಪತಿ,ಸುವರ್ಣಾ ಆಸಂಗಿ,ಬೈರೇಶ ಆದ್ದೆಪ್ಪನವರ, ಬಸವರಾಜ ಮಡಿವಾಳ,ಅಭಿ ಲಮಾಣಿ,ವಿನಾಯಕ ಗುಂಜಗಾಂವಿ,ಸಚಿನ ವಂದಾಲ,ಮಾರುತಿ ಸುಣಧೋಳಿ, ಚೆನ್ನು ಆರೆಗಾರ,ದತ್ತಾ ಯರಗಟ್ಟಿಕರ,ಆನಂದ ಶಿರಗುಪ್ಪಿ, ಉದಯ ಪವಾರ,ಆನಂದ ಪವಾರ,ಕೃಷ್ಣ ಕಳ್ಳಿಮನಿ, ಯಲ್ಲಪ್ಪ ಬನ್ನೇನ್ನವರ,ರವಿ ಮುಂಡಗನೂರ್, ಆನಂದ್ ಬಂಡಿಗಿನಿ, ಶಿವಾನಂದ ಜಕಾತಿಮಠ,ಮಂಜು ಗೊಂಬಿ, ಮಂಜು ಸಿಂಪಿ, ಹರೀಶ ಮಂಟೂರ, ವಿಜಯ ಹಿರೇಮಠ, ಪವನ ಟಿರ್ಕಿ , ರಾಜೇಂದ್ರ ನಾವಿ, ಗಜು ರೇವಡಗಿ, ಚೇತನ ಬಂಡಿವಡ್ಡರ, ಶ್ರೀ ಬುದ್ನಿ, ನಾಗೇಶ ಹುಣಸ್ಯಾಳ, ರಾಜೇಶ ಪರಮಾನಟ್ಟಿ, ಈರಪ್ಪ ಹುಣಸ್ಯಾಳ, ಸಾಗರ ಪರಿಟ್, ವಿನೋದ ಹುನಸ್ಯಾಳ,ಮಹೇಶ ಬಂಡಿ,ಪ್ರಕಾಶ ಬೀಳಗಿ,ವಿಜಯ ವಜರಮಟ್ಟಿ, ಇನ್ನೂ ಹಲವಾರು ಹಿಂದೂ ಸಂಘಟನೆಯ ಕಾರ್ಯಕರ್ತರು ಭಾಗಿಯಾಗಿದ್ದರು.