ಬಳ್ಳಾರಿ

ಹಸನ್‌-ಹುಸೇನ್ ದರ್ಗವನ್ನು ತೆರವಗೊಳಿಸಿದಿರಲು ಜಿಲ್ಲಾಧಿಕಾರಿಗೆ ಮನವಿ

ಹಸನ್‌-ಹುಸೇನ್ ದರ್ಗವನ್ನು ತೆರವಗೊಳಿಸಿದಿರಲು ಜಿಲ್ಲಾಧಿಕಾರಿಗೆ ಮನವಿ

ಬಳ್ಳಾರಿ 03: ನಗರದ ವಾರ್ಡ್‌ ನಂ. 36 ಹದಂಬಾವಿ ಪ್ರದೇಶದಲ್ಲಿರುವ ಹಸೇನ್‌-ಹುಸೇನ್ ಮಖಾನ್ ದರ್ಗಾವನ್ನ ತೆರವುಗೊಳಿಸದಿರಲು ಅಲ್ಲಿ ವಾಸ ಮಾಡುವಂತ ನಿವಾಸಿಗಳು ಎಲ್ಲರೂ ಸೇರಿ ಜಿಲ್ಲಾಧಿಕಾರಿಗೆ ಮನವಿ ಪತ್ರ ಸಲ್ಲಿಸಿದರು. ಹಾಗೂ ನಗರದ 36ನೇ ವಾರ್ಡ್‌ ಹವಂಬಾವಿ ಪ್ರದೇಶದ ಕಾಲುವೆಯ ಮೇಲೆ ಕಳೆದ 25 ವರ್ಷಗಳ ಹಿಂದೆ  ಹನುಮಂತಪ್ಪರವರ ಜಮೀನು ಪಕ್ಕದಲ್ಲಿರುವ ಪರಂಬೋಕು ನಿವೇಶನದಲ್ಲಿ  ಹಸೇನ್‌-ಹುಸೇನ್ ಮಖಾನ್ ದರ್ಗಾದಲ್ಲಿ ಹನುಮಂತಪ್ಪನವರ ಕೋರಿಕೆಯಂತೆ ನಿರ್ಮಿಸಲಾಗಿರುತ್ತದೆ.  

ಅದರಂತೆ ಪವಂಬಾವಿ ಪ್ರದೇಶದ ಸಾರ್ವಜನಿಕರು ಪಟ್ಟಿ ಹಾಕಿ ದರ್ಗಾವನ್ನು ನಿರ್ಮಿಸಿಕೊಂಡಿರುತ್ತೇವೆ. ಸದರಿ ದರ್ಗಾಕ್ಕೆ ಪ್ರತಿ ದಿನ  400-500 ಜನ ಭಕ್ತರು ಹಾಗೂ ಪ್ರತಿ ಗುರುವಾರದಂದು 600-800 ಜನ ಭಕ್ತರು ಸೇರಿ ದರ್ಗಾಕ್ಕೆ ಪೂಜೆಯನ್ನು ಸಲ್ಲಿಸುತ್ತಿದ್ದಾರೆ. ಮುಂದುವರೆದು ಇತ್ತೀಚಿಗೆ 2015-16 ರಲ್ಲಿ  ಹನುಮಂತಪ್ಪನವರು ತಮ್ಮ ಜಮೀನನ್ನು ಗುರುಶಾಂತಪ್ಪ, ಬಳ್ಳಾರಿ  ಇವರಿಗೆ ಮಾರಾಟ ಮಾಡಿರುತ್ತಾರೆ. ಸದರಿ ದರ್ಗಾಕ್ಕೆ ಹನುಮಂತಪ್ಪರವರು ಬದುಕಿರುವವರಗೆ ಸದರಿ ಗುರುಶಾಂತಪ್ಪ ರವರು ದರ್ಗಾಕ್ಕೆ ಯಾವುದೇ ತೊಂದರೆಕೊಟ್ಟಿರುವುದಿಲ್ಲ. ಇತ್ತೀಚಿಗೆ ಹನುಮಂತಪ್ಪನವರು ದೈವಧೀನರಾಗಿರುವುದರಿಂದ ಈಗ ಗುರುಶಾಂತಪ್ಪರವರು ತಮ್ಮ ಜಮೀನು ಅಭಿವೃದ್ಧಿಗೆ ತೊಂದರೆಯಾಗುತ್ತದೆಂದು ದರ್ಗಾವನ್ನು ತೆರವುಗೊಳಿಸಲು ಒತ್ತಾಯಿಸುತ್ತಿದ್ದಾರೆ. ಈ  ದರ್ಗಾವು ಪರಂಬೋಕು ಜಾಗದಲ್ಲಿದ್ದು, 2013ರಂದು ದರ್ಗಾದ ಅಭಿವೃದ್ಧಿ ಕಾಮಗಾರಿ ಅದಕ್ಕೂ ಸಹ  ಗುರುಶಾಂತಪ್ಪರವರು ಧನ ಸಹಾಯ ಮಾಡಿರುತ್ತಾರೆ. ಹಾಗೂ ದರ್ಗಾವು ಕಾಲುವೆಯ ಪಕ್ಕದಲ್ಲಿರುತ್ತದೆ. ಕಾಲುವೆ ಮೇಲೆ ಅನೇಕ ಮನೆಗಳು ದೇವಸ್ಥಾನಗಳು ಇರುತ್ತವೆ.  

ಆದರೆ ಈ ಮಸೀದಿಯನ್ನು ಮಾತ್ರ  ಗುರುಶಾಂತಪ್ಪ ಮತ್ತು ಹೆಚ್‌.ಎಲ್‌.ಸಿ ಅಧಿಕಾರಿಗಳು ಸೇರಿ ಈ ಮಸೂದೆಯನ್ನು ಮಾತ್ರ ತೆರವುಗೊಳಿಸುವಂತೆ ಒತ್ತಾಯಿಸುತ್ತಿದ್ದಾರೆ. ಏಕೆಂದರೆ ಗುರುಶಾಂತಪ್ಪರವರು ಈಗಾಗಲೇ ಕಾಲುವೆಯ ಮೇಲೆ ಎರಡೆರಡು ಕಾಂಪೌಂಡ್‌ಗಳನ್ನು ನಿರ್ಮಿಸಿರುತ್ತಾರೆ ಮತ್ತು ಈ ಮಸೀದಿಯ ಜಾಗವನ್ನು ತಮ್ಮ ವಶಕ್ಕೆ  ಮಾಡಬಹುದೆಂದು ನಮಗೆ ತಿಳಿದಿದ್ದು, ಈಗಾಗಲೇ ಅನೇಕ ಅಧಿಕಾರಿಗಳಿಂದ ಮತ್ತು ಅವರ ಪರವಾಗಿ ಬೇರೆ ಬೇರೆ ಜನರು ಬಂದು ಮಸೀದಿಯ ಜಾಗವನ್ನು ಖಾಲಿ ಮಾಡಲು ಒತ್ತಾಯಿಸುತ್ತಿದ್ದಾರೆ.  

ಮುಂದುವರೆದು ಕಾಲುವೆಯ ಮೇಲೆ ಬರುವ ಎಲ್ಲಾ ಮನೆಗಳು ಮತ್ತು ದೇವಸ್ಥಾನಗಳನ್ನು ತೆರವುಗೊಳಿಸಿದರೆ ನಮ್ಮ ಮಸೀದಿಯನ್ನು ತೆರವಗೂಳಿಸಲು ನಮಗೆ ಯಾವುದೇ ಅಭ್ಯಂತರ ಇರುವುದಿಲ್ಲ. ಹಾಗೂ ಅವಂಬಾವಿಯಲ್ಲಿರುವ ಹಸನ್ ಹುಸೇನ್ ಮಖಾನ್ ದರ್ಗವನ್ನು ತೆಲುಗು ಕಳಿಸದಂತೆ ಜಾಮೀನುದಾರರಾದ ಗುರು ಶಾಂತಪ್ಪ ರವರಿಗೆ ಮತ್ತು ಎಚ್ ಎಲ್ ಸಿ ಕಾಲ್ವೆಯ ಅಧಿಕಾರಿಗಳಿಗೆ ಸೂಚಿಸಬೇಕೆಂದು ನಿವಾಸಿಗಳು ಮತ್ತು ಜನರು ಭಕ್ತಾದಿಗಳ ದರ್ಗಾದ ಮುಖ್ಯಸ್ಥರುಗಳು ಕೋರಿಕೆಯನ್ನು ತೀರಿಸಬೇಕೆಂದು ಜಿಲ್ಲಾಧಿಕಾರಿಗೆ ಮನವಿ ಪತ್ರ ಸಲ್ಲಿಸಿದರು.  

ಈ ಸಂದರ್ಭದಲ್ಲಿ ಜಿ ಹನುಮಂತ, ಮಹೇಶ, ಟಿ ನಾಗರಾಜ, ಪಿ ನಬಿರಾಸುಲ್ಲಾ, ರಮೇಶ, ರಾಮಾಂಜನೇಯ, ಕೃಷ್ಣ,ಜಗನ್ನಾಥ,ರಾಜ, ರವಿ, ಲಕ್ಷ್ಮಯ್ಯ, ಹೊನ್ನೂರು ಸ್ವಾಮಿ, ಬಸವರಾಜ, ಉಪೇಂದ್ರ, ವೀರೇಶ, ಇತರರು ಆಗಮಿಸಿದ್ದರು. 


ಸುದ್ದಿ ಓದಿ