ನೀರು ಹರಿಸಿ ರೈತರಿಂದ ಮನವಿ
ಸಿರುಗುಪ್ಪ02: ತಾಲೂಕಿನ ಬಾಗೇವಾಡಿ ಕಾಲುವೆ ವ್ಯಾಪ್ತಿಯ ತೆಕ್ಕಲಕೋಟೆ, ಉಪ್ಪಾರ ಹೊಸಳ್ಳಿ, ಬಲಕುಂದಿ, ಹಳೆಕೋಟೆ, ಬೂದುಗುಪ್ಪ ಇತರ ಗ್ರಾಮದ ರೈತರು ತಮ್ಮ ಬೆಳೆ ಉಳಿಸಿಕೊಳ್ಳಲು ನೀರು ಕಾಲುವೆಗೆ ಸಮರ್ಪಕವಾಗಿ ಹರಿಸಬೇಕು ಎಂದು ಒತ್ತಾಯಿಸಿ ತಾಲೂಕ ಕಚೇರಿಗೆ ತೆರಳಿ ತಹಶೀಲ್ದಾರ್ ಎನ್ ಆರ್ ಮಂಜುನಾಥ ಸ್ವಾಮಿ ಅವರನ್ನು ರೈತ ಮುಖಂಡ ಬಿ ಮಲ್ಲಿಕಾರ್ಜುನ ಅವರು ಚರ್ಚಿಸಿದರು ತಹಸಿಲ್ದಾರರು ಮಾತನಾಡಿ ನೀರಾವರಿ ಇಲಾಖೆಯ ಅಧಿಕಾರಿಗಳೊಂದಿಗೆ ಈ ಬಗ್ಗೆ ಚರ್ಚಿಸಿ ನೀರು ಹರಿಸಲು ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗುವುದೆಂದು ಹೇಳಿದರು.
ನೀರಾವರಿ ಇಲಾಖೆಯ ಜೆ ಇ ತಿಪ್ಪೇಸ್ವಾಮಿ,ಸಹಾಯಕ ಕೃಷಿ ನಿರ್ದೇಶಕ ಎಸ್ ಬಿ ಪಾಟೀಲ್, ಮೊಹಮ್ಮದ್ ನೌಶಾದ್ ಅಲಿ ಸೇರಿದಂತೆ ವಿವಿಧ ಗ್ರಾಮಗಳ ರೈತರು ಇದ್ದರು