ಮುದ್ದೆಬಿಹಾಲ್

ಕಬ್ಬಿಗೆ ಎಫ್‌.ಆರ್‌.ಪಿ ದರ ಘೋಷಣೆ ಮಾಡುವಂತೆ ಆಗ್ರಹ ರೈತರಿಂದ ಮನವಿ

ಕಬ್ಬಿಗೆ ಎಫ್‌.ಆರ್‌.ಪಿ ದರ ಘೋಷಣೆ ಮಾಡುವಂತೆ ಆಗ್ರಹ ರೈತರಿಂದ ಮನವಿ

ಮುದ್ದೇಬಿಹಾಳ : ಕಬ್ಬಿನ ಎಫ್‌.ಆರ್‌.ಪಿ ದರವನ್ನು ಘೋಷಣೆ ಮಾಡಬೇಕು,ಅತೀವೃಷ್ಟಿಯಿಂದ ಹಾನಿಯಾದ ಬೆಳೆಗಳಿಗೆ ಸೂಕ್ತ ಪರಿಹಾರ ಒದಗಿಸಬೇಕು ಎಂಬುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ರೈತರು ತಹಸೀಲ್ದಾರ್ ಬಿ.ಎಸ್‌.ಕಡಕಭಾವಿ ಅವರಿಗೆ  ಸೋಮವಾರ  ಮನವಿ ಪತ್ರ ಸಲ್ಲಿಸಿದರು. 

ಪಟ್ಟಣದ ತಹಸೀಲ್ದಾರ್ ಕಚೇರಿಗೆ ಆಗಮಿಸಿದ್ದ  ಕರ್ನಾಟಕ ರಾಜ್ಯ ರೈತ ಸಂಘದ ಹಸಿರು ಸೇನೆ ಪದಾಧಿಕಾರಿಗಳು ತಹಸೀಲ್ದಾರ್‌ಗೆ ಮನವಿ ಪತ್ರ ಸಲ್ಲಿಸಿದರು.ಈ ಸಂದರ್ಭದಲ್ಲಿ ಮಾತನಾಡಿದ ರೈತ ಮುಖಂಡ ವೈ.ಎಲ್‌.ಬಿರಾದಾರ,ಹುಸೇನ್ ಮುಲ್ಲಾ,ಸಂಗಣ್ಣ ಬಾಗೇವಾಡಿ ಮೊದಲಾದವರು, ಈಗಾಗಲೇ ಬೆಳಗಾವಿ ಜಿಲ್ಲೆಯ ಸಕ್ಕರೆ ಕಾರ್ಖಾನೆಗಳಿಗೆ ಅಲ್ಲಿನ ಜಿಲ್ಲಾಧಿಕಾರಿ ಅವರು ಸನ್ 2022-23ನೇ ಸಾಲಿನ ಕಬ್ಬು ನುರಿಸುವ ಹಂಗಾಮಿಗೆ ಸಂಬಂಧಿಸಿದಂತೆ ಎಫ್‌.ಆರ್‌.ಪಿ ದರವನ್ನು ನಿಗದಿಗೊಳಿಸಿ ಆದೇಶಿಸಿದ್ದಾರೆ.ಆದರೆ ವಿಜಯಪುರ-ಬಾಗಲಕೋಟೆ ಜಿಲ್ಲೆಯ ಸಕ್ಕರೆ ಕಾರ್ಖಾನೆಗಳ ಪ್ರಸಕ್ತ ಸಾಲಿನ ದರವನ್ನು ನಿಗದಿಗೊಳಿಸಲು ವಿಳಂಬ ಮಾಡಲಾಗುತ್ತಿದೆ.ಕೇಳಿದರೆ ಕಳೆದ 2021-22ನೇ ಸಾಲಿನ ದರವನ್ನೇ ರೈತರಿಗೆ ತೋರಿಸುತ್ತಿದ್ದಾರೆ.ಇದರಿಂದ ರೈತರಿಗೆ ಅನ್ಯಾಯವಾಗಲಿದೆ ಎಂದು ಹೇಳಿದರು. 

ಬಾಲಾಜಿ ಶುಗರ​‍್ಸ‌ ಮತ್ತು ಪ್ಯಾರಿ ಶುಗರ​‍್ಸ‌ನಿಂದ ಕಬ್ಬು ಕಟಾವು ಸಮಯಕ್ಕೆ ಸರಿಯಾಗಿ ಮಾಡುವಂತೆ ಸೂಚಿಸಬೇಕು.ಮೊದಲು ಸ್ಥಳೀಯ ರೈತರ ಕಬ್ಬು ಕಟಾವಿಗೆ ಆದ್ಯತೆ ನೀಡಬೇಕು.ಕಬ್ಬು ಕಟಾವು ಆದ ನಂತರ ರೈತರಿಗೆ 15 ದಿನಗಳಲ್ಲಿ ಖಾತೆಗೆ ಹಣ ಜಮಾ ಮಾಡಬೇಕು.ರೈತರಿಗೆ ಶುಗರ​‍್ಸ‌ ಫ್ಯಾಕ್ಟರಿಯಿಂದ ಬೀಜ ಗೊಬ್ಬರ ಕೊಡಲಾಗುತ್ತಿದ್ದು ಅದಕ್ಕೆ ವಿಧಿಸುತ್ತಿರುವ ಬಡ್ಡಿಯನ್ನು ರದ್ದುಗೊಳಿಸಬೇಕು.ಬೆಳೆ ಹಾನಿಯಾದ ರೈತರಿಗೆ ಪರಿಹಾರ ಕೊಡಬೇಕು.ಅತೀವೃಷ್ಟಿಯಿಂದ ಹಾಗೂ ಕೋರಿ ಹುಳುವಿನ ಬಾಧೆಯಿಂದ ತೊಂದರೆಗೀಡಾದ ರೈತರಿಗೆ ಪರಿಹಾರ ನೀಡಬೇಕು ಎಂದು ಮನವಿ ಮಾಡಿದರು. 

ಇದಕ್ಕೆ ಉತ್ತರಿಸಿದ ತಹಸೀಲ್ದಾರ್ ಬಿ.ಎಸ್‌.ಕಡಕಭಾವಿ ನಿಮ್ಮ ಈ ಹಿಂದೆ ಕೊಟ್ಟಿರುವ ಮನವಿಗೆ ಸಂಬಂಧಿಸಿದಂತೆ ಮೇಲಾಧಿಕಾರಿಗಳಿಗೆ ಪತ್ರ ಬರೆದಿದ್ದೇವೆ.ಅಲ್ಲದೇ ನಿಮಗೆ ಕಾರ್ಖಾನೆಗಳು ಕೊಡುವ ಕಬ್ಬಿನ ದರದ ಕುರಿತು ಮಾಹಿತಿ ರೈತ ಮುಖಂಡರಿಗೆ ನೀಡಿದ್ದೇವೆ ಎಂದು ತಿಳಿಸಿದರು. 

ಆದರೆ ಇದಕ್ಕೆ ಒಪ್ಪದ ರೈತರು, ಪ್ರಸಕ್ತ ಸಾಲಿನ ದರದ ಕುರಿತು ಮಾಹಿತಿ ನೀಡಿ,ರೈತರು,ಕಾರ್ಖಾನೆ ಮುಖ್ಯಸ್ಥರ ಸಭೆ ಕರೆಯಿರಿ ಎಂದು ಆಗ್ರಹಿಸಿದರು.ಇಲ್ಲದಿದ್ದರೆ ಉಗ್ರ ಹೋರಾಟ ನಡೆಸುವುದಾಗಿ ತಿಳಿಸಿದರು.ಈ ಸಂದರ್ಭದಲ್ಲಿ ಈರಣಗೌಡ ಬಿರಾದಾರ,ಗುರುಸಂಗಪ್ಪ ಹಂಡರಗಲ್,ಇಬ್ರಾಹಿಮ್ ನಾಯ್ಕೋಡಿ,ಶಿವಣ್ಣ ನಾಯ್ಕೋಡಿ,ನಾಗಪ್ಪ ಜಟ್ಟಗಿ,ಶರಣಬಸಪ್ಪ ವಾಲೀಕಾರ,ಭೀಮಣ್ಣ ಬಾಗೇವಾಡಿ,ಬಸನಗೌಡ ಬ್ಯಾಲ್ಯಾಳ,ವೀರೇಶ ಗಣಾಚಾರಿ,ಮುತ್ತಣ್ಣ ಗಂಗೂರ,ಯಲ್ಲಪ್ಪ ಮೇಟಿ,ಆರ್‌.ಎಂ.ಗೊಳಸಂಗಿ,ಲಕ್ಷ್ಮಣ ತೊಂಡಿಕಟ್ಟಿ ಮೊದಲಾದವರು ಇದ್ದರು. 

ರೈತರೊಂದಿಗೆ ತಹಸೀಲ್ದಾರ್ ವಾಗ್ವಾದ: ಕಳೆದ ಸೆ.26 ರಂದು ಈ ಬಗ್ಗೆ ಕ್ರಮ ಜರುಗಿಸುವಂತೆ ,ರೈತರ ಸಭೆ ನಡೆಸುವಂತೆ ಮನವಿ ಸಲ್ಲಿಸಿದ್ದರೂ ಯಾವುದೇ ಕ್ರಮ ಜರುಗಿಸಿಲ್ಲ.ಈಗ ಕಬ್ಬು ಕಟಾವು ಮಾಡುವ ಕಾರ್ಯ ಶುರುವಾಗುತ್ತಿದ್ದು ರೈತರ ಬೇಡಿಕೆಗಳ ಬಗ್ಗೆ ತಹಸೀಲ್ದಾರ್‌ರು ಸಮರ​‍್ಕ ಸ್ಪಂದನೆ ನೀಡುತ್ತಿಲ್ಲ ಎಂದು ರೈತ ಸಂಘದ ಪದಾಧಿಕಾರಿಗಳು ಬಹಿರಂಗವಾಗಿಯೇ ಅಸಮಾಧಾನ ತೋಡಿಕೊಂಡರು.ಈ ವೇಳೆ ಬೇರೆ ಕೆಲಸಕ್ಕೆ ನಿರ್ಗಮಿಸುತ್ತಿದ್ದ ತಹಸೀಲ್ದಾರ್ ಕಡಕಭಾವಿ ರೈತ ಸಂಘದ ಪದಾಧಿಕಾರಿಗಳನ್ನು ತಮ್ಮ ಚೇಂಬರ್‌ಗೆ ಕರೆಯಿಸಿಕೊಂಡು ಚರ್ಚೆ ಶುರು ಮಾಡಿದರು.ಈ ವೇಳೆ ರೈತ ಸಂಘದ ಪದಾಧಿಕಾರಿಗಳಿಗೆ ತಹಸೀಲ್ದಾರ್‌ರು ಬುದ್ದಿವಾದ ಹೇಳಲು ಮುಂದಾದರು.ಆದರೆ ಇದಕ್ಕೆ ಸೊಪ್ಪು ಹಾಕದ ರೈತ ಸಂಘದ ಪದಾಧಿಕಾರಿಗಳು, ಮೊದಲೇ ರೈತರು ತೊಂದರೆಯಲ್ಲಿದ್ದಾರೆ.ಕಬ್ಬಿಗೆ ನ್ಯಾಯ ಬದ್ಧವಾಗಿ ಸಿಗಬೇಕಾದ ದರವನ್ನು ಘೋಷಣೆ ಮಾಡದೇ ಸುಮ್ಮನಿರುವುದೇತಕ್ಕೆ,ಅತೀವೃಷ್ಠಿಯಿಂದ ಹಾಳಾದ ಎಷ್ಟು  ರೈತರಿಗೆ ಪರಿಹಾರ ಕೊಡಲಾಗಿದೆ.ಸರ್ವೆ ಮಾಡಿ ಪರಿಹಾರ ದೊರಕಿಸಿಕೊಟ್ಟೀದ್ದೀರಾ ಎಂದು ಪ್ರಶ್ನಿಸಿದರು.ಬಳಿಕ ಈ ಬಗ್ಗೆ ಬೇಡಿಕೆಯಲ್ಲಿನ ಅಂಶಗಳನ್ನು ಪರೀಶೀಲನೆ ನಡೆಸಿ ಮೇಲಾಧಿಕಾರಿಗಳಿಗೆ ಪತ್ರ ಬರೆಯುವುದಾಗಿ ತಹಸೀಲ್ದಾರ್ ತಿಳಿಸಿದರು.ಒಂದು ಹಂತದಲ್ಲಿ ರೈತರ ಜೊತೆಗೆ ತಹಸೀಲ್ದಾರ್‌ರೇ ಸಹನೆ ಕಳೆದುಕೊಂಡಂತೆ ವರ್ತಿಸಿದ್ದೂ ಕಂಡು ಬಂದಿತು. 

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ರೈತ ಸಂಘಟನೆಯ ಮುಖಂಡರಾದ ವೈ.ಎಲ್‌.ಬಿರಾದಾರ,ಸಂಗಣ್ಣ ಬಾಗೇವಾಡಿ,ಹುಸೇನ್ ಮುಲ್ಲಾ ಮೊದಲಾದವರು, ನಾವು ರೈತರ ಸಮಸ್ಯೆಗಳನ್ನು ಅಧಿಕಾರಿಗಳ ಗಮನಕ್ಕೆ ತರಲು ಹೋದರೆ ತಹಸೀಲ್ದಾರ್‌ರು ದರಿ​‍್ದಂದ ನಡೆದುಕೊಳ್ಳುತ್ತಿದ್ದಾರೆ.ಸಹಾನುಭೂತಿಯಿಂದ ತಹಸೀಲ್ದಾರ್‌ರು ನಡೆದುಕೊಳ್ಳದಿರುವುದು ಖಂಡನೀಯ ಎಂದರು. 

ಸುದ್ದಿ ಓದಿ