ಶ್ರೀ ಗವಿಸಿದ್ದೇಶ್ವರ ದೇವಸ್ಥಾನ ಜೀರ್ಣೋದ್ಧಾರಕ್ಕೆ ಮನವಿ

ಶ್ರೀ ಗವಿಸಿದ್ದೇಶ್ವರ ದೇವಸ್ಥಾನ ಜೀರ್ಣೋದ್ಧಾರಕ್ಕೆ ಮನವಿ

ಬ್ಯಾಡಗಿ 27 : ತಾಲೂಕಿನ ಶಿಡೇನರೂ ಹಾಗೂ ಬಿದರಕಟ್ಟ ಕಾಯ್ದಿರಿಸಿದ ಅರಣ್ಯ ಪ್ರದೇಶದಲ್ಲಿ ಇರುವ ಶ್ರೀ ಗವಿಸಿದ್ದೇಶ್ವರ ದೇವಸ್ಥಾನಕ್ಕೆ ಹೋಗಲು ಸರಿಯಾದ ದಾರಿ ವ್ಯವಸ್ಥೆ ಮತ್ತು ವಿದ್ಯುತ್ ವ್ಯವಸ್ಥೆ ಇಲ್ಲ, ದೇವಸ್ಥಾನ ಶಿಥಿಲಗೊಂಡು ಬೀಳುವ ಅಂಚಿನಲ್ಲಿದೆ, ಕಾರಣ ತಾವು ಅರಣ್ಯ ನಿಗಮದ ಅಧ್ಯಕ್ಷರಾಗಿದ್ದು ದೇವಸ್ಥಾನಕ್ಕೆ ದೈವಿ ವನ ಎಂಬ ಅಭಿವೃದ್ಧಿ ಯೋಜನೆಯಡಿ ಯೊಳಗೆ ಅಭಿವೃದ್ಧಿ ಪಡಿಸಬೇಕು ಎಂದು ಶಿಡೇನರೂ ಗ್ರಾಮದ ಜನರು ಮನವಿ ಪತ್ರ ಸಲ್ಲಿಸಿದರು. ಇಂದು ತಾಲೂಕಿನಲ್ಲಿ  ಮಳೆಗೆ ಹಾನಿಯಾದ ಮನೆಗಳನ್ನು ವಿವಿಧ ಗ್ರಾಮಗಳಿಗೆ ವೀಕ್ಷಿಸಲು ತೆರಳಿದ ಸಂದರ್ಭದಲ್ಲಿ ಶಿಡೇನರೂ ಗ್ರಾಮಸ್ಥರು ಹಾಗೂ  ಗ್ರಾಮ ಪಂಚಾಯತಿ ಸದಸ್ಯರು ಶಾಸಕರನ್ನು ಸನ್ಮಾನಿಸಿ ತಮ್ಮ ಮನವಿ ಪತ್ರವನ್ನು ಸಲ್ಲಿಸಿದರು. 

ತಾಲೂಕು ಅಧ್ಯಕ್ಷ ದಾನಪ್ಪ ಚೂರಿ.ಪ್ರಧಾನ ಕಾರ್ಯದರ್ಶಿ ರಮೇಶ್ ಸುತ್ತ ಕೋಟೆ, ಶಿವನಗೌಡ ಪಾಟೀಲ, ಮಾರುತಿ ಅಚ್ಚಿಗೇರಿ, ಎಚ್ ಡಿ ಗಡೀಗೊಳ, ಭುಜಲಿಂಗಪ್ಪ ಯೋಗಿಕೊಪ್ಪ, ಕಿರಣ ಗಡೀಗೊಳ, ಬಸವರಾಜ ಹುಲ್ಲತ್ತಿ, ವೀರನಗೌಡ ಮಲ್ಲಾಡದ, ರುದ್ರ​‍್ಪ ಹಲಗೇರಿ ಹಾಗೂ ಊರಿನ ಪ್ರಮುಖರು ಗ್ರಾಮಪಂಚಾಯಿತಿ ಸದಸ್ಯರು, ನಾಗರಿಕರು ಉಪಸ್ಥಿತರಿದ್ದರು. 


ಸುದ್ದಿ ಓದಿ