ಮುದ್ದೆಬಿಹಾಲ್

ಶೀಘ್ರ ಭೂಸ್ವಾಧೀನದ ಪರಿಹಾರ ಧನ ನೀಡಲು ಮನವಿ

ಶೀಘ್ರ ಭೂಸ್ವಾಧೀನದ ಪರಿಹಾರ ಧನ ನೀಡಲು ಮನವಿ

ಮುದ್ದೇಬಿಹಾಳ 21: ತಾಲೂಕಿನ ಸರೂರ ಗ್ರಾಮದ ಸರ್ವೇ ನಂ 244/9 ಜಮೀನದಲ್ಲಿ ಕೆಬಿಜೆಎನ್‍ಎಲ್ ನವರು ಭೂಸ್ವಾಧೀನ ಪಡಿಸಿಕೊಂಡು ಚಿಮ್ಮಲಗಿ ಏತ ನಿರಾವರಿಗೆ ಕಾಲುವೆ ನಿರ್ಮಾಣ ಮಾಡಿದ್ದರೂ ಇಲ್ಲಿಯ ತನಕ ಒಂದು ನೈಯಾಪೈಸೆ ಭೂಸ್ವಾಧೀನ ಪಡಿಸಿಕೊಂಡ ಬಗ್ಗೆ ಪರಿಹಾರ ನೀಡದೇ ಮೋಸಮಾಡಿದ್ದಾರೆ. ಕಾರಣ ನಮಗೆ ಭೂಪರಿಹಾರವನ್ನು ಆದಷ್ಟು ಬೇಗ ನೀಡುವಂತೆ ಆಗ್ರಹಿಸಿ ರೈತ ಭೀಮರಾಯ ಶಂಕ್ರಪ್ಪ ಇಟಗಿ ಹಾಗೂ ರೈತ ಮುಖಂಡರು ಗ್ರೇಡ್ 2 ತಹಶೀಲ್ದಾರ ಡಿ ಜಿ ಕಳ್ಳಿಮನಿಯವರ ಮೂಲಕ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರಿಗೆ ಬುಧವಾರ ಮನವಿ ಸಲ್ಲಿಸಿದರು.

2013ರಲ್ಲಿ ಆಲಮಟ್ಟಿ ಕೃಷ್ಣಾ ಭಾಗ್ಯ ಜಲ ನಿಗಮ ಮಂಡಳಿ ಭೂಸ್ವಾಧೀನಾಧಿಕಾರಿಗಳು ನಮ್ಮ ಸರ್ವೇ ನಂ 244/9ರ 2 ಎಕರೇ 12 ಗುಂಟೆ ಜಮೀನನನ್ನು ಭೂಸ್ವಾಧೀನ ಪಡೆದುಕೊಂಡು ಕೇವಲ 4-1 ನೋಟಿಸ್ ನೀಡಿ ಕೈತೊಳೆದುಕೊಂಡು ಬಳಿಕ ಇಲ್ಲಿಯ ತನಕ ಯಾವೊಂದು ನೋಟಿಸ್ ನೀಡದೇ ಭೂಮಿ ಕಳೆದುಕೊಂಡ ಕಾರಣ ಒಂದು ನೈಯಾಪೈಸೆ ಭೂ ಪರಿಹಾರ ನೀಡದೇ ಅನ್ಯಾಯ ಮಾಡಿದ್ದಾರೆ. ಈಗಾಗಲೇ ರೈತ ದಿ, ಶಂಕ್ರಪ್ಪ ಭೀಮಪ್ಪ ಇಟಗಿ ಅವರು ಸಾಕಷ್ಟು ಬಾರಿ ಆಲಮಟ್ಟಿಗೆ ತೆರಳಿ ಭೂಸ್ವಾಧೀನ ಅಧಿಕಾರಿಗಳಿಗೆ ನಮ್ಮ ಜಮೀನಿನ ಪರಿಹಾರ ನೀಡಬೇಕು ಎಂದು ಮನವಿ ಮಾಡಿಕೊಂಡರೂ ಬೇಜವಾಬ್ದಾರಿ ಉತ್ತರ ನೀಡಿ ವಾಪಸ್ ಮನೆಗೆ ಕಳುಹಿಸಿದ್ದಾರೆ. ಇದೇ ಕೊರಗಿನಿಂದ 25 ಮಾರ್ಚ 2021 ರಂದು ಶಕ್ರಪ್ಪ ಭೀಮಪ್ಪ ಇಟಗಿ ಅವರು ನಿಧನರಾದರು. ಅದಾದ ಬಳಿಕವೂ ಕಚೇರಿಗೆ ಅಲೆದು ಸುಸ್ತಾಗಿದೇ. ಅದರಂತೆ ಮತ್ತೊಮ್ಮೆ ಆಲಮಟ್ಟಿ ವಿಶೇಷ ಭೂಸ್ವಾಧೀನಾಧಿಕಾರಿ ಕಚೇರಿಯಲ್ಲಿನ ಸಾಗರ ಎನ್ನುವವರನ್ನು ಭೇಟಿ ಮಾಡಿ ನಮಗೆ ಪರಿಹಾರ ನೀಡಬೇಕು ಎಂದು ಒತ್ತಾಸಿಯಿಸಿದರೇ ನಿನ್ನ ಹೆಸರಲ್ಲಿರುವ ಹಣ ಬೇರೆಯವರು ತೆಗೆದುಕೊಂಡು ಹೋಗಿದ್ದಾರೆ ಅವರನ್ನೇ ಕೇಳು ಹೋಗು ಎಂದು ಬಾಯಿಗೆ ಬಂದಂತೆ ಬೈದು ಕಳಿಸಿದರು.

ನಮ್ಮ ಹೆಸರಲ್ಲಿರೋ ಹಣವನ್ನು ಬೇರೆಯವರು ಪಡೆಯಲು ಹೇಗೆ ಸಾಧ್ಯ ಒಂದು ವೇಳೆ ಹಾಗೇನಾದರೂ ಆಗಿದ್ದರೇ ಅಧಿಕಾರಿಗಳು ಶಾಮಿಲಾಗಿದ್ದಾರೇ ಎನ್ನುವ ಅನುಮಾನ ವ್ಯಕ್ತವಾಗುತ್ತಿದೆ. 

ಅದೇನೇ ಆಗಲಿ ನಮಗೆ ಬರಬೇಕಾದ ಭೂ ಪರಿಹಾರ ನಮಗೆ ಕೊಡಿಸಿದರೆ ಸಾಕು ಇಲ್ಲವೆಂದರೇ ಉಗ್ರ ಹೋರಾಟ ಅನಿವಾರ್ಯವಾಗಬಹುದು ಎಂದರು.

ಸುದ್ದಿ ಓದಿ