ಹಗರಿಬೊಮ್ಮನಹಳ್ಳಿ

ಕುಡಿಯುವ ನೀರಿನ ಮಿನಿ ಟ್ಯಾಂಕ್ ನಿರ್ಮಾಣಕ್ಕೆ ಮನವಿ

ಕುಡಿಯುವ ನೀರಿನ ಮಿನಿ ಟ್ಯಾಂಕ್ ನಿರ್ಮಾಣಕ್ಕೆ ಮನವಿ



ಲೊಕದರ್ಶನ ವರದಿ 

ಹಗರಿಬೊಮ್ಮನಹಳ್ಳಿ 28: ತಾಲೂಕಿನ ರಾಮನಗರ ಶಾಲೆಯಲ್ಲಿ ಒದುತ್ತಿರುವ ವಿದ್ಯಾರ್ಥಿಗಳಿಗೆ ಕುಡಿಯುವ ನೀರಿ ಸಮಸ್ಯೆ ನೀಗಿಸುವಂತೆ ಶಾಲೆಯ ಎಸ್‌ಡಿಎಂಸಿ ಸಮಿತಿಯು ಪುರಸಭೆ ಮುಖ್ಯಾಧಿಕಾರಿ ಎಂ.ಕೆ.ಮುಗಳಿ ಅವರಿಗೆ ಮನವಿ ನೀಡಿದರು. 

ಈ ವೇಳೆ ಎಸ್‌ಡಿಎಂಸಿ ಅಧ್ಯಕ್ಷ ಶ್ಯಾಬುದ್ದೀನ್ ಮಾತನಾಡಿ ರಾಮನಗರದ ಸರಕಾರಿ ಶಾಲೆಯಲ್ಲಿ 300 ವಿದ್ಯಾರ್ಥಿಗಳಿದ್ದು, ಮಕ್ಕಳಿಗೆ ಕುಡಿಯುವ ನೀರಿನ ಸಮಸ್ಯೆ ದಿನೇ ದಿನೇ ಹೆಚ್ಚುತ್ತಿದೆ, ಪ್ರಸ್ತುತ ದಿನಗಳಲ್ಲಿ ಹವಾಮಾನ ವೈಪರಿತ್ಯದಿಂದ ಮಕ್ಕಳು ಅನಾರೋಗ್ಯಕ್ಕೀಡಾಗುತ್ತಿದ್ದು ಮಕ್ಕಳಿಗೆ ಫ್ಲೊರೈಡ್ ಮುಕ್ತ ನೀರು ದೊರೆಯಬೇಕಿದೆ, ಸದ್ಯ ಮಕ್ಕಳಿಗೆ ಮನೆಯಿಂದಲೇ ಕುಡಿಯುವ ನೀರು ತರಲು ಶಾಲೆಯಲ್ಲಿ ತಿಳಿಸಲಾಗಿದೆ ಶಾಲೆಯಲ್ಲಿರುವ ಶುಧ್ಧು ಕುಡಿಯುವ ನೀರಿನ ಘಟಕವು ಕಾರ್ಯ ನಿರ್ವಹಿಸಿದರೆ ಮಕ್ಕಳಿಗೆ ಸಹಾಯವಾಗುತ್ತದೆ, ಬಿಸಿಯೂಟ ತಯಾರಿಸಲು ಮೂರಾ​‍್ನಲ್ಕು ದಿನಗಳಿಗೊಮ್ಮೆ ಸಿಹಿ ನೀರು ಬಳಸಿದರೆ, ಉಳಿದಂತೆ ರಸ್ತೆಯ ಪಕ್ಕದಲ್ಲಿರುವ ಸಾರ್ವಜನಿಕ ನಳದಿಂದ ನೀರು ಹೊರುವ ಪರಿಸ್ಥಿತಿ ಇದೆ, ಕೆಲ ತಿಂಗಳುಗಳ ಹಿಂದೆ ಮನವಿಯನ್ನು ನೀಡಲಾಗಿದೆ ಅದಕ್ಕೂ ಯಾವುದೇ ಸ್ಪಂದನೆ ದೊರೆತಿಲ್ಲ ಹಾಗಾಗಿ ಮಕ್ಕಳ ಆರೋಗ್ಯದ ವಿಷವಾಗಿದೆ ಕೂಡಲೇ ಪುರಸಭೆ ಇತ್ತ ಚಿತ್ತ ಹರಿಸಿ ನೀರಿನ ಮಿನಿ ಟ್ಯಾಂಕ್ ನಿರ್ಮಿಸಲು ಮುಂದಾಗಬೇಕು ಎಂದರು. 

ಪುರಸಭೆ ಸದಸ್ಯ ಮರಿರಾಮಪ್ಪ ಮತನಾಡಿ ಮಕ್ಕಳಿಗೆ ಉತ್ತಮ ಪರಿಸರ, ಶಿಕ್ಷಕ ವರ್ಗ ಇದೆ ಆದರೆ ಮಕ್ಕಳು ಕುಡಿಯುವ ನೀರಿಗೆ ಪರದಾಡುವಂತಾಗಿದೆ, ಮಕ್ಕಳ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವುದಕ್ಕೂ ಮುನ್ನ ಶುಧ್ಧ ಕುಡಿಯುವ ನೀರನ್ನು ಸರಬರಾಜು ಮಾಡಬೇಕು, ಶಾಲೆಯಲ್ಲಿ ಒದುತ್ತಿರುವ ವಿದ್ಯಾರ್ಥಿಗಳ, ಪೋಷಕರ, ಸರ್ವಸದಸ್ಯರ, ಅಭಿವೃಧ್ಧಿ ಸಮಿತಿಯ, ಶಿಕ್ಷಕರ ಪರವಾಗಿ ನೀಡುತ್ತಿರುವ ಮನವಿಯನ್ನು ಶೀಘ್ರವೇ ಅಧಿಕಾರಿಗಳು ಪರಿಗಣಿಸುವಂತೆ ತಿಳಿಸಿದರು.  

ಈ ಸಂಧರ್ಭದಲ್ಲಿ ಶಾಲೆಯ ಮುಖ್ಯ ಶಿಕ್ಷಕಿ ಗೌರಮ್ಮ, ಎಸ್‌ಡಿಎಂಸಿ ಉಪಾಧ್ಯಕ್ಷೆ ಹನುಮಂತಮ್ಮ, ಸದಸ್ಯರಾದ ಗುರುಬಸವರಜ್, ಚನ್ನಕೇಶವ, ಹುಸೇನ್ ಬಾಷಾ, ಗಂಗಮ್ಮ, ಮಂಜುಳಾ,ವೀರಮ್ಮ, ಶಂಶಾದ್ ಬೇಗಂ, ಮಾದೇವಿ ಸೇರಿದಮತೆ ಪಾಲಕ ಪೋಷಕರು ಇದ್ದರು. 


ಸುದ್ದಿ ಓದಿ