ಹಗರಿಬೊಮ್ಮನಹಳ್ಳಿ

ಸರಕಾರಿ ಜಾಗ ಒತ್ತುವರಿ ತೆರವುಗೊಳಿಸುವಂತೆ ಮನವಿ

ಸರಕಾರಿ ಜಾಗ ಒತ್ತುವರಿ ತೆರವುಗೊಳಿಸುವಂತೆ ಮನವಿ

ಲೋಕದರ್ಶನ ವರದಿ 

ಹಗರಿಬೊಮ್ಮನಹಳ್ಳಿ 21: ಹಗರಿಬೊಮ್ಮನಹಳ್ಳಿ ತಾಲೂಕಿನಲ್ಲಿರುವ ಸರಕಾರಿ ಜಮೀನು ಹಾಗೂ ಕೆರೆಗಳನ್ನು ಒತ್ತುವರಿಯಾಗಿದ್ದು ಕೂಡಲೇ ಅದನ್ನು ತೆರವುಗೊಳಿಸುವಂತೆ ರಾಯಣ್ಣ ಕುರಿ ಮತ್ತು ಉಣ್ಣೆ ಉತ್ಪಾದಕರ ಸಹಕಾರ ಸಂಘವು ಸೋಮವಾರ ತಹಶಿಲ್ದಾರ್ ಶರಣಮ್ಮ ಅವರಿಗೆ ಮನವಿ ನೀಡಿತು. 


ಈ ಸಂಧರ್ಭದಲ್ಲಿ ರಾಯಣ್ಣ ಕುರಿಗಾಹಿ ಸಂಘದ ನಿರ್ದೇಶಕ ಬ್ಯಾಟಿ ನಾಗರಾಜ ಮಾತನಾಡಿ ತಾಲೂಕಿನಲ್ಲಿ ಸರ್ಕಾರಿ ಜಮೀನು, ಗೋಮಾಳ, ಕೆರೆ ಒತ್ತುವರಿ ನಡೆದಿದ್ದು ಕುರಿ ಮತ್ತು ಜಾನುವಾರುಗಳಿಗೆ ಮೇವಿನ ಅಭಾವ ಸೃಷ್ಟಿಯಾಗಿದೆ ಹಾಗೂ ಅವುಗಳನ್ನು ಮೇಯಿಸಲು ಸ್ಥಳವಿಲ್ಲದಂತಾಗಿದೆ, ಸರಕಾರಿ ಜಮೀನುಗಳಲ್ಲಿ ಜಾನುವಾರಗಣನ್ನು ಮೇಯಿಸಲು ಹೋದರೆ ಸ್ಥಳ ಅಕ್ರಮಿತರಿಂದ ಅವಾಚ್ಯ ಶಬ್ದಗಳಿಂದ ನಿಂದನೆಗೊಳಗಗಬೇಕಾಗಿದೆ ಕೂಡಲೇ ಒತ್ತುವರಿಯಾಗಿರವ ಸ್ಥಳವನ್ನು ತೆರೆವುಗೊಳಿಸಿ ಜಾನುವಾರಗಳಿಗೆ ಮೇಯಲು ಹಾಗೂ ತಂಗಲು ಅನುವು ಮಾಡಿಕೊಡಬೇಕು ಎಂದರು.ಪಶು ಇಲಾಖೆ ಅಧಿಕಾರಿಗಳಿಗೂ ಮನವಿಯನ್ನು ನೀಡಲಾಗುವುದು ಎಂದು ತಿಳಿಸಿದರು. 

ಈ ಸಂಧರ್ಭದಲ್ಲಿ ನಿಕಟ ಪೂರ್ವ ಅಧ್ಯಕ್ಷ ಚನ್ನಬಸಪ್ಪ, ಪ್ರಧಾನ ಕಾರ್ಯದರ್ಶಿ ಮರುತಿ, ಪರಶುರಾಮ, ವೆಂಕಟೇಶ ಸೇರಿದಂತೆ ತಾಲೂಕಿನ ನಿರ್ದೇಶಕರುಗಳು, ಸದಸ್ಯರು ಇದ್ದರು. 


ಸುದ್ದಿ ಓದಿ