ಸೇವಾ ಭದ್ರತೆಗೆ ಅತಿಥಿ ಉಪನ್ಯಾಸಕರ ಒತ್ತಾಯಿಸಿ ಮನವಿ
ಹಗರಿಬೊಮ್ಮನಹಳ್ಳಿ 09: ಪಟ್ಟಣದ ಜಿವಿಪಿಪಿ ಫಥಮ ದರ್ಜೆ ಕಾಲೇಜ್ನ ಅತಿಥಿ ಉಪನ್ಯಾಸಕರು ಗೌರವ ಧನ ಹೆಚ್ಚಿಸಿ, ಸೇವಾ ಭದ್ರತೆ ಒದಗಿಸಬೇಕೆಂದು ಮುಖ್ಯಮಂತ್ರಿಗಳಿಗೆ ಪ್ರಾಂಶುಪಾಲ ಸತೀಶ್ ಪಾಟಿಲ್ ಅವರ ಮೂಲಕ ಮನವಿ ಸಲ್ಲಿಸಿದರು.
ಈ ಸಂಧರ್ಭದಲ್ಲಿ ಅತಿಥಿ ಉಪನ್ಯಾಸಕರ ಸಂಘದ ತಾಲೂಕು ಅಧ್ಯಕ್ಷ ಎಂ.ಶಿವಮೂರ್ತಿ ಮಾತನಾಡಿ ಅತಿಥಿ ಉಪನ್ಯಾಸಕರಾಗಿ ಕಾರ್ಯ ನಿರ್ವಹಿಸುತ್ತಿರುವ ಉಪನ್ಯಾಸಕರಿಗೆ ಸೇವಾ ಬಧ್ರತೆ ಹಾಗೂ ವೇತನವನ್ನು ಹೆಚ್ಚಿಸಬೇಕು ಎಂದು ಆಗ್ರಹಿಸಿದರು, ನಾಳೆಯಿಂದ ಉಪನ್ಯಾಸಕರು ತರಗತಿಗಳನ್ನು ಬಹಿಷ್ಕರಿಸಿ ಅನಿರ್ದಿಷ್ಟಾವಧಿ ಮುಷ್ಕರ ಆರಂಬಿಸಲಾಗುವುದು, ಈ ಬಗ್ಗೆ ಪ್ರಾಂಶುಪಾಲರಾದ ಸತೀಶ್ ಪಾಟೀಲ ಅವರ ಮುಖಾಂತರ ಉನ್ನತ ಶಿಕ್ಷಣ ಸಚಿವರಿಗೆ ಹಾಗೂ ಮಾನ್ಯ ಮುಖ್ಯ ಮಂತ್ರಿಗಳಿಗೆ ಮನವಿ ಪತ್ರವನ್ನು ಸಲ್ಲಿಸಲಾಗಿದೆ ರಾಜ್ಯದಲ್ಲಿ 412 ಪ್ರಥಮ ದರ್ಜೆ ಕಾಲೇಜುಗಳಿದ್ದು ಸುಮಾರು 14ಸಾವಿರಕ್ಕೂ ಹೆಚ್ಚು ಉಪನ್ಯಾಸಕರು ಹಲವಾರು ವರ್ಷಗಳಿಂದ ಅಲ್ಪ ಗೌರವಧನ ಪಡೆದು ಉಪನ್ಯಾಸಕ ವೃತ್ತಿ ಮಾಡುತ್ತಾ ಸೇವೆ ಸಲ್ಲಿಸುತ್ತಿದ್ದಾರೆ, ಬೇರೆ ರಾಜ್ಯಗಳಲ್ಲಿ ಅತಿಥಿ ಉಪನ್ಯಾಸಕರಿಗೆ 30ರಿಂದ 40ಸಾವಿರ ಮಾಸಿಕ ವೇತನ ನೀಡುತ್ತಿದ್ದು ಇದೇ ಮಾದರಿಯಲ್ಲಿ ಕರ್ನಾಟಕ ರಾಜ್ಯದಲ್ಲಿಯೂ ವರ್ಷದ 12ತಿಂಗಳು ವೇತನ ನೀಡಬೇಕೆಂದು ಆಗ್ರಹಿಸಿದರು.
ಈ ಬಗ್ಗೆ ಹತ್ತಾರು ಬಾರಿ ಮೌಖಿಕ ಮತ್ತು ಮನವಿಗಳನ್ನು ನೀಡಿದ್ದು ಸರಕಾರ ಮಾತ್ರ ಉಪನ್ಯಾಸಕರ ಅಳಲಿಗೆ ಸ್ಪಂದಿಸದೆ ಮತ್ತು ಬೇಡಿಕೆಗಳನ್ನು ಈಡೇರಿಸುತ್ತಿಲ್ಲವೆಂದು ಅಸಾಹಕತೆ ತೋರಿದರು.ಈ ಹಿಂದೆ 10 ತಿಂಗಳ ಕಾಲ ಸೇವಾ ಅವಧಿ ನೀಡುತ್ತಿದ್ದು ಸದ್ಯ 3ತಿಂಗಳಿಗೆ ಸೀಮಿತಗೊಳಿಸಿದೆ ಮೊದಲಿನಂತೆ ಅತಿಥಿ ಉಪನ್ಯಾಸಕರನ್ನು ಆಯ್ಕೆ ಮಾಡಿಕೊಳ್ಳುವಂತೆ ಮನವಿ ಮಾಡಿದರು.
ಇಡೀ ವಿಶ್ವವೇ ಸಾಂಕ್ರಾಮಿಕ ರೋಗ ಕರೋನಾ ಅಲೆಗೆ ಸಿಕ್ಕು ಜನಜೀವನ ಅಸ್ತವ್ಯಸ್ಥವಾಗಿದ್ದು, ಇನ್ನು ಅತಿಥಿ ಉಪನ್ಯಾಸಕರು ಇದಕ್ಕೆ ಹೊರತಗಿಲ್ಲಾ, ಕರೋನಾ ಅಲೆಗೆ ಸಿಲುಕಿ ಜೀವನ ಕಷ್ಟಕರವಾಗಿದ್ದು ಸರಕಾರದ ಪರಿಹಾರ ಎದುರು ನೋಡುತ್ತಿದ್ದು, ನಮ್ಮನ್ನು ಕಡೆಗಣಿಸಿದ್ದು ಸಹಾಯ ಹಸ್ತ ನೀಡಬೇಕಿದ್ದ ಸರಕಾರವು ನಮ್ಮ ಭರವಸೆಯನ್ನು ಹುಸಿಗೊಳಿಸಿ ಜೀವನ ಇನ್ನು ಪಾತಾಳಕ್ಕೆ ತಳ್ಳಿದೆ ಎಂಬುದರಲ್ಲಿ ಅನುಮಾನವಿಲ್ಲದಂತಾಗಿದೆ ಎಂದು ದೂರಿದರು.
ಅನೇಕ ಉಪನ್ಯಾಸಕರು ಎಂಫಿಲ್, ಪಿಹೆಚ್ಡಿ ಪದವಿಗಳನ್ನು ಪಡೆದುಕೊಂಡಿದ್ದು ಅವರ ಪದವಿಗೆ ತಕ್ಕಂತೆ ಸಂಭಾವನೆ ದೊರೆಯುತ್ತಿಲ್ಲ, ತರಕಾರಿ, ಹಣ್ಣು ಮಾರಾಟ ಮಾಡುವುದು, ಕೂಲಿ ಕೆಲಸಕ್ಕೆ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಅತಿಥಿ ಉಪನ್ಯಾಸಕರ ಪ್ರಸ್ತು ಪರಿಸ್ಥಿತಿಯನ್ನು ವಿವರಿಸಿದರು.ಬೆಳಗಾವಿಯ ಚಳಿಗಾಲದ ಅಧಿವೇಶನದಲ್ಲಿ ಈ ವಿಷಯವನ್ನು ಚರ್ಚಿಸಿ ಹಲವಾರು ವರ್ಷಗಳ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಒತ್ತಾಯಿಸಿದರು.
ಈ ಸಂಧರ್ಭದಲ್ಲಿ ಹಿರಿಯ ಅತಿಥಿ ಉಪನ್ಯಾಸಕಡಾ. ಗುರುಪ್ರಸಾದ್, ಹೆಚ್.ಎಸ್.ನಾಗರಾಜ ಜೋಗಿನಕಟ್ಟೆ, ಕೆ.ರಂಗನಾಥ್, ರೆಹಮಾನ್, ಸೋಮೇಶ್ ಉಪ್ಪಾರ, ಬಸವರಾಜ, ಜಗದೀಶ, ಅಮೀರ್ ಖಾನ್, ಶಾಂತಕುಮಾರಿ, ವಿಜಯಲಕ್ಷ್ಮೀ, ಸವಿತಾ ಸೇರಿದಂತೆ ಉಪನ್ಯಾಸಕರು ಉಪಸ್ಥಿತರಿದ್ದರು.