ಕೆಸರಗೋಪ್ಪ ಕಾಲೇಜಿನ ಮೈದಾನದಲ್ಲಿ ಗಣರಾಜ್ಯೋತ್ಸವ
ಮಹಾಲಿಂಗಪುರ 29: ಸಮೀಪದ ಕೆಸರಗೊಪ್ಪ ಗ್ರಾಮದ ಸರಕಾರಿ ಪದವಿ ಪೂರ್ವ ಕಾಲೇಜು ಮತ್ತು ಸರಕಾರಿ ಪ್ರೌಢಶಾಲೆಯ ಮೈದಾನದಲ್ಲಿ ಧ್ವಜ ಕಟ್ಟೆಯನ್ನು ಉದ್ಘಾಟಿಸುವುದರ ಮೂಲಕ 75ನೇ ಗಣರಾಜ್ಯೋತ್ಸವವನ್ನು ಆಚರಿಸಲಾಯಿತು.
ಗ್ರಾಮದ ಹಿರಿಯರು ಪಂಚಾಯತ ಅಧ್ಯಕ್ಷ ಸದಸ್ಯರು ಕಾಲೇಜಿನ ಸಿಬಿಸಿ ಅಧ್ಯಕ್ಷರು ಹಾಗೂ ಸದಸ್ಯರು ಮತ್ತು ಕಾಲೇಜಿನ ಪ್ರಾಚಾರ್ಯರು ಉಪನ್ಯಾಸಕರು ಮತ್ತು ಪ್ರೌಢಶಾಲೆಯ ಎಸ್ಡಿಎಂಸಿ ಅಧ್ಯಕ್ಷರು ಸದಸ್ಯರು ಹಾಗೂ ಮುಖ್ಯಗುರುಗಳು, ಶಿಕ್ಷಕರು ಇವರ ಸಮ್ಮುಖದಲ್ಲಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಹಾಗೂ ಮಹಾತ್ಮ ಗಾಂಧೀಜಿಯವರ ಭಾವಚಿತ್ರಕ್ಕೆ ಪೂಜಿ ಸಲ್ಲಿಸಿ 75 ನೇ ಗಣರಾಜ್ಯೋತ್ಸವವನ್ನು ಅತ್ಯಂತ ಯಶಸ್ವಿಯಾಗಿ ಆಚರಿಸಲಾಯಿತು.
ಪ್ರಾಚಾರ್ಯ ಜಿ ಬಿ ಸಜ್ಜನ್ ರವರು ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಸಂವಿಧಾನದ ಮೂಲಕ ಪ್ರತಿಯೊಬ್ಬ ವ್ಯಕ್ತಿಯ ಹಕ್ಕು ಮತ್ತು ಕರ್ತವ್ಯವನ್ನು ತಿಳಿಸಿ ಸಾಮಾನ್ಯನು ಅಸಾಮಾನ್ಯನಾಗಲು ಹೆದ್ದಾರಿ ತೋರಿಸಿದ್ದಾರೆ. ಸಂವಿಧಾನ ಶಿಲ್ಪಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಪರಿಶ್ರಮದ ಫಲವಾಗಿ ಭಾರತ ದೇಶ ಇಂದು ವಿಶ್ವದಲ್ಲಿಯೇ ಅತ್ಯಂತ ಶ್ರೇಷ್ಠ ಗಣತಂತ್ರ ದೇಶ ಎಂಬ ಹೆಗ್ಗಳಿಕೆಯನ್ನು ಪಡೆದುಕೊಂಡಿದೆ. ಆ ಗಣತಂತ್ರ ವ್ಯವಸ್ಥೆಯನ್ನು ಕಾಪಾಡಿಕೊಂಡು ಹೋಗುವ ಜವಾಬ್ದಾರಿ ಪ್ರತಿಯೊಬ್ಬ ಭಾರತೀಯ ಪ್ರಜೆಯದ್ದಾಗಿದೆ ಎಂದು ಹೇಳಿದರು.
ಪ್ರೌಢಶಾಲೆಯ ಮತ್ತು ಕಾಲೇಜಿನ ಹಲವಾರು ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಮಾಡಿದರು. ಕಾಲೇಜಿನ ಸಿಬಿಸಿ ಅಧ್ಯಕ್ಷ ಸಿದ್ದು ಸತ್ತಿಗೇರಿ, ಉಪಾಧ್ಯಕ್ಷ ಇಂದ್ರವ್ವ ಜಿಡ್ಡಿಮನಿ, ಪ್ರೌಢಶಾಲೆ ಎಸ್ಡಿಎಮ್ಸಿ ಅಧ್ಯಕ್ಷ ವಿಠ್ಠಲ ಬನಾಜ, ಸವಿತಾ ದೊಡಮನಿ, ತಿಪ್ಪವ್ವ ಬಾಡಗಿ ಪ್ರಾಚಾರ್ಯ ಜಿ ಬಿ ಸಜ್ಜನ್, ಮುಖ್ಯೋಪಾಧ್ಯಾಯ ಸಿ ವಿ ಚೌಧರಿ, ಊರಿನ ಹಿರಿಯರಾದ ಪರ್ಪ ಬ್ಯಾಕೋಡ, ಶ್ರೀಶೈಲಪ್ಪ ಉಳ್ಳಾಗಡ್ಡಿ, ಭೀಮಪ್ಪ ಸಸಾಲಟ್ಟಿ, ಶಿವಾನಂದ ಉಳ್ಳಾಗಡ್ಡಿ, ಚನ್ನು ದೇಸಾಯಿ, ಮಾರುತಿ ಕರೋಶಿ, ಭಗವಂತ ಸೋನಾರ್, ಬಸಪ್ಪ ಜಿಡ್ಡಿಮನಿ, ಶ್ರೀಶೈಲ್ ಕಾರಜೋಳ, ಧರೆಪ್ಪ ಬ್ಯಾಕೋಡ್, ಶ್ರೀಮಂತ ಕಾರಜೋಳ ಇನ್ನಿತರರು ಹಾಗೂ ಕಾಲೇಜು ಮತ್ತು ಪ್ರೌಢಶಾಲೆಯ ಎಲ್ಲಾ ಶಿಕ್ಷಕರು ಭಾಗಿಯಾಗಿದ್ದರು.