ಮಹಲಿಂಗಪುರ

ರೇಣುಕಾಚಾರ್ಯ ಜಯಂತ್ಯುತ್ಸವ

ರೇಣುಕಾಚಾರ್ಯ ಜಯಂತ್ಯುತ್ಸವ

ಮಹಾಲಿಂಗಪುರ 19: ರೇಣುಕಾಚಾರ್ಯ ಜಯಂತ್ಯುತ್ಸವದ ಪ್ರಯುಕ್ತ ಮಾ.21 ರ ಬೆಳಗ್ಗೆ 8 ಗಂಟೆಗೆ ಸಕಲ ವಾದ್ಯ ಮೇಳ ಹಾಗೂ ಕುಂಭಮೇಳದೊಂದಿಗೆ ಮಹಾಲಿಂಗೇಶ್ವರ ದೇವಸ್ಥಾನದಿಂದ ಬಸವೇಶ್ವರ ವೃತ್ತದವರೆಗೆ ರೇಣುಕಾಚಾರ್ಯರ ಮೂರ್ತಿಯ ಭವ್ಯ ಮೆರವಣಿಗೆ ನಡೆಯಲಿದೆ ನಂತರ  ಮಹಾಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ  ಜಗದ್ಗುರು ರೇಣುಕಾಚಾರ್ಯರ ಜಯಂತ್ಯುತ್ಸವ ಸಮಾರಂಭ ನಡೆಯಲಿದೆ ಎಂದು ವೀರಶೈವ ಜಂಗಮ ಸಮಾಜದ ಅಧ್ಯಕ್ಷ ಗುರುಪಾದಯ್ಯ ಚಟ್ಟಿಮಠ ತಿಳಿಸಿದರು. 

ಜಿಪಂ ಮಾಜಿ ಸದಸ್ಯ ಮಹಾಂತೇಶ ಹಿಟ್ಟಿನಮಠ ಅವರ ನಿವಾಸದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಹಾಲಿಂಗೇಶ್ವರ ಶಿವಯೋಗಿ ರಾಜೇಂದ್ರ ಮಹಾಸ್ವಾಮಿಗಳು ಸಾನಿಧ್ಯ ವಹಿಸುವರು, ಜಿಪಂ ಮಾಜಿ ಸದಸ್ಯ ಮಹಾಂತೇಶ ಹಿಟ್ಟಿನಮಠ ಅಧ್ಯಕ್ಷತೆ ವಹಿಸಿ, ಶಾಸಕ ಮತ್ತು ಕೆಎಚ್ ಡಿಸಿ ನಿಗಮದ ಅಧ್ಯಕ್ಷ ಸಿದ್ದು ಸವದಿಯವರು ಉದ್ಘಾಟಿಸುವರು. ಪ್ರಭುಲಿಂಗೇಶ್ವರ ಸಕ್ಕರೆ ಕಾರ್ಖಾನೆಯ ಅಧ್ಯಕ್ಷ ಜಗದೀಶ ಗುಡಗುಂಟಿಮಠ, ಪುರಸಭಾ ಅಧ್ಯಕ್ಷೆ ಸ್ನೇಹಲ್ ಅಂಗಡಿ, ಧರ್ಮದರ್ಶಿ ಸುವರ್ಣತಾಯಿ ಹೊಸಮಠ, ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಬಸನಗೌಡ ಪಾಟೀಲ, ಶ್ರೀಶೈಲಪ್ಪ ಉಳ್ಳೇಗಡ್ಡಿ, ಮಹಾಲಿಂಗಪ್ಪ ಜಕ್ಕನ್ನವರ, ಮಹಾಲಿಂಗಪ್ಪ ಲಾತೂರ, ಸಂಗಪ್ಪ ಹಲ್ಲಿ, ಸಜನಸಾಬ ಪೆಂಡಾರಿ ಅತಿಥಿಗಳಾಗಿ ಭಾಗವಹಿಸುವರು ಎಂದರು. 

ಗುರುಲಿಂಗಯ್ಯ ಮಠಪತಿ, ಈರಯ್ಯ ಹಿಟ್ಟಿನಮಠ, ಈರಣ್ಣ ಚಟ್ಟಿಮಠ, ಬಸಯ್ಯ ಚಟ್ಟಿಮಠ, ಮಹಾಲಿಂಗಯ್ಯ ಮಠ,ವಿರೂಪಾಕ್ಷಯ್ಯ ಪಂಚಕಟ್ಟಿಮಠ, ಸದಾಶಿವ ಹಿರೇಮಠ, ಚನ್ನಯ್ಯ ಮಸಗುಪ್ಪಿಮಠ, ವಿನೋದ ಕಡಪಟ್ಟಿ, ಮಹಾಂತೇಶ ಮಣ್ಣಯ್ಯನವರಮಠ, ಬಸವರಾಜ ಅಯ್ಯನಗೌಡ್ರ ಇತರರು ಇದ್ದರು. 

ಸುದ್ದಿ ಓದಿ