ಸೌಂದತ್ತಿ

ಲಿಂ. ಗುರುಸಿದ್ದೇಶ್ವರಶ್ರೀ, ಅಂದಾನೇಶ್ವರ ಶ್ರೀಗಳ ಪುಣ್ಯಾರಾಧನೆ

ಲಿಂ. ಗುರುಸಿದ್ದೇಶ್ವರಶ್ರೀ, ಅಂದಾನೇಶ್ವರ ಶ್ರೀಗಳ ಪುಣ್ಯಾರಾಧನೆ

ಸವದತ್ತಿ 23: ಅನಾದಿ ಕಾಲದಿಂದಲೂ ಮಠ ಮಾನ್ಯಗಳಲ್ಲಿನ ಪರಂಪರೆಯು ಸಾಮಾಜಿಕ ಮತ್ತು ಧಾರ್ಮಿಕ ಚಿಂತನೆಗಳಿಗೆ ಪೂರಕವಾಗಿ ಸಮಾಜಕ್ಕೆ ಒಳಿತನ್ನು ಮಾಡುತ್ತಾ ಬಂದಿದ್ದು, ಅಂದಿನ ಮಠಾಧೀಶರು ತಮ್ಮ ಶಕ್ತಿಯಿಂದ ಮಠಗಳಿಗೆ ಆಗಮಿಸುವ ಭಕ್ತರನ್ನು ರಕ್ಷಿಸುವ ಕಾರ್ಯ ಮಾಡುತ್ತಿದ್ದರು ಎಂದು ಗೊರವನಕೊಳ್ಳದ ಶಿವಾನಂದ ಮಹಾಸ್ವಾಮೀಜಿ ಹೇಳಿದರು. 

ಪಟ್ಟಣದ ಬಂಡಿ ಓಣಿಯ ಬೆಟಸೂರಮಠದ ಲಿಂ. ಗುರುಸಿದ್ದೇಶ್ವರ ಮಹಾಸ್ವಾಮೀಜಿ ಮತ್ತು ಲಿಂ. ಅಂದಾನೇಶ್ವರ ಮಹಾಸ್ವಾಮೀಜಿಯವರ ಉಭಯ ಪಟ್ಟಾಧ್ಯಕ್ಷರುಗಳ ಪುಣ್ಯಾರಾಧನೆ ಕಾರ್ಯಕ್ರಮದ ಸಾನ್ನಿಧ್ಯವಹಿಸಿ ಅವರು ಮಾತನಾಡಿದರು. 

ಭಕ್ತರ ಇಚ್ಚಾಶಕ್ತಿಯಿಂದ ಮಠಗಳಲ್ಲಿ ನಡೆಯುತ್ತಿರುವ ಪ್ರತಿಯೊಂದು ಕಾರ್ಯಕ್ರಮಗಳು ನಮ್ಮ ಸಂಸ್ಕೃತಿಯನ್ನು ಬಿಂಬಿಸುವದರ ಜೊತೆಗೆ ಸಮಾಜದಲ್ಲಿ ಶಾಂತಿಯ ಸಂದೇಶವನ್ನು ಸಾರುತ್ತಿವೆ ಎಂದರು. 

ರಾಜಾರಾಮ ಮಠದ ಗಂಗಾಧರ ದೀಕ್ಷಿತರು ಹಾಗೂ ಇನಾಂಹೊಂಗಲದ ಅಭಿನವ ಸಿದ್ದಲಿಂಗಸ್ವಾಮೀಜಿಯವರು ಸಾನ್ನಿಧ್ಯವಹಿಸಿ ಮಾತನಾಡಿ, ಬೆಟಸೂರಮಠದಲ್ಲಿ ಅಜ್ಜಯ್ಯಸ್ವಾಮೀಜಿಯವರು ಪ್ರತಿ ವರ್ಷ ಹಮ್ಮಿಕೊಂಡು ಬರುತ್ತಿರುವ ಪುಣ್ಯಾರಾಧನೆ ಕಾರ್ಯಕ್ರಮಗಳು ಜನರಲ್ಲಿ ಧಾರ್ಮಿಕ ಭಾವನೆಗಳನ್ನು ಮೂಡಿಸುತ್ತಿವೆ ಎಂದರು. 

ಬೆಟಸೂರಮಠದ ಅಜ್ಜಯ್ಯಸ್ವಾಮೀಜಿ ನೇತೃತ್ವವಹಿಸಿದ್ದರು. 

ಮಲ್ಲಿಕಾರ್ಜುನ ಶಿಂತ್ರಿ ಪ್ರಾರ್ಥಿಸಿದರು. ಅದೃಶ್ಯಪ್ಪ ಗರಗದ ಬಾಬಾ ಮಹಾರಾಜ ಹಾಗೂ ವಿ.ಆರ್‌.ರಾಠೋಡ ಇವರು ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು. 


ಸುದ್ದಿ ಓದಿ