ಸರ್ವಸ್ವವನ್ನು ತ್ಯಾಗ ಮಾಡಿ ಸ್ವತಂತ್ರ ದೊರಕಿಸಿದ ನಾಯಕರನ್ನು ನೆನೆಯಿರಿ: ಮುಗಳಿ
ಲೋಕದರ್ಶನ ವರದಿ
ಹಗರಿಬೊಮ್ಮನಹಳ್ಳಿ 16: ದೇಶವನ್ನು ಪರಕೀಯರ ಕಪಿಮುಷ್ಠಿಯ ಹಿಡಿತದಿಂದ ಹೊರಬರಲು ಮಹಾನ್ ನಾಯಕರು ತಮ್ಮ ಸರ್ವಸ್ವವನ್ನು ತ್ಯಾಗ ಮಾಡಿ ಸ್ವತಂತ್ರ ದೊರಕಿಸಿಕೊಟ್ಟಿದ್ದಾರೆ, ಅಂತಹ ಮಹಾನ್ ನಾಯಕರನ್ನು ಪ್ರತಿಯೊಬ್ಬ ಭಾರತೀಯ ನೆನೆಯಬೇಕು ಎಂದು ಪುರಸಭೆ ಮುಖ್ಯಾಧಿಕಾರಿ ಎಂ.ಕೆ.ಮುಗಳಿ ಹೇಳಿದರು.
ಹಳೇ ಹಗರಿಬೊಮ್ಮನಹಳ್ಳಿಯ ಗ್ರಂಥಾಲಯದಲ್ಲಿ ಏರ್ಪಡಿಸಿದ್ದ 76ನೇ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು. ನಮಗೆ ಸ್ವತಂತ್ರ ಸುಮ್ಮನೇ ದೊರೆತಿಲ್ಲ ಇದಕ್ಕೆ ಮಹಾತ್ಮರು ಹುತಾತ್ಮರಾಗಿದ್ದಾರೆ, ಪರಕೀಯರಿಂದ ದೇಶವನ್ನು ರಕ್ಷಿಸುವಲ್ಲಿ ಸಹಸ್ರಾರು ಕಷ್ಟಗಳನ್ನು ಎದುರಿಸಿದ್ದಾರೆ, ಇಂದು ಪ್ರತಿಯೊಬ್ಬ ನಾಗರೀಕರು ದೇಶದ ಆಸ್ಮಿತೆಯನ್ನು ಕಾಪಾಡುವಲ್ಲಿ ಮುಂದಾಗಬೇಕು ದೇಶವನ್ನು ಸ್ವಚ್ಛ ಸುಂದರವಾಗಿಡಲು ನಾವೆಲ್ಲರೂ ಒಗ್ಗಟ್ಟಾಗಿ ಶ್ರಮಿಸಬೇಕು ಇಲ್ಲದಿದ್ದರೆ ಸ್ವತಂತ್ರ ತಂದು ಕೊಟ್ಟ ನಾಯಕರಿಗೆ ಅಗೌರವ ತೋರಿದಂತಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಪುರಸಭೆ ವ್ಯೆವಸ್ಥಾಪಕ ಚಂದ್ರಶೇಖರ್, ಮಾರೆಪ್ಪ, ಸದಸ್ಯರಾದ ಅಂಬಳಿ ಮಂಗಳ, ಹೆಚ್.ಎಂ.ಚನ್ನಮ್ಮ, ದಿಪಕ್ ಕಠಾರೆ, ಗ್ರಂಥಾಲಯದ ಮೇಲ್ವಿಚಾರಕಿ ಶಿವಲೀಲಾ, ಪುರಸಭೆ ನಾಮನಿರ್ದೇಶಿತ ಸದಸ್ಯ ಚಿತವಾಡ್ಗಿ ಪ್ರಕಾಶ್, ಪತ್ರಕರ್ತ ವಿರೇಶ್ ಮಜ್ಗಿ, ಅಂಬಳಿ ರಂವಿಂದ್ರ ಗೌಡ ಸೇರಿದಂತೆ ಇನ್ನಿತರರು ಇದ್ದರು