ಬಳ್ಳಾರಿ

ತುಂಗಭದ್ರ ಬಲದಂಡೆಯ ಮೇಲ್ಮಟ್ಟದ ಕಾಲುವೆಗೆ ನೀರು ಬಿಡುಗಡೆ

ತುಂಗಭದ್ರ ಬಲದಂಡೆಯ ಮೇಲ್ಮಟ್ಟದ ಕಾಲುವೆಗೆ ನೀರು ಬಿಡುಗಡೆ

ಬಳ್ಳಾರಿ 22: ತುಂಗಭದ್ರ ಜಲಾಶಯದಲ್ಲಿ 83.249 ಟಿ.ಎಂ.ಸಿ.ನೀರು ಶೇಖರಣೆಯಾಗಿದ್ದು, ಜಲಾಶಯಕ್ಕೆ 1,14,149 ಕ್ಯೂಸೆಕ್ಸ್‌ ನೀರು ಹರಿದು ಬರುತ್ತಿವೆ. ಇನ್ನು 02 ದಿನಗಳಲ್ಲಿ ಜಲಾಶಯವು ತುಂಬಲಿದೆ.  

ದಿನಾಂಕ 19ರಂದು ತುಂಗಭದ್ರ ಬಲದಂಡೆಯ ಕೆಳಮಟ್ಟದ ಕಾಲುವೆಗೆ ಮತ್ತು ಎಡದಂಡೆಯ ಮುಖ್ಯ ಕಾಲುವೆಗೆ ನೀರು ಬಿಡಲಾಗಿದೆ.  

ದಿನಾಂಕ 21ರಂದು ಸಂಜೆಯಿಂದ ತುಂಗಭದ್ರ ನದಿಗೆ ನೀರು ಬಿಡಲು ಆರಂಭಿಸಿರುತ್ತಾರೆ. ದಿನಾಂಕ 24ಕ್ಕೆ ತುಂಗಭದ್ರ ಜಲಾಶಯವು ತುಂಬಿ, ಎಲ್ಲಾ ಗೇಟುಗಳನ್ನು ಎತ್ತಿ ನದಿಗೆ ನೀರನ್ನು ಬಿಡಲಾಗುವುದು ಮತ್ತು ನದಿಯ ದಡದಲ್ಲಿ ವಾಸಿಸುವ ಎಲ್ಲಾ ರೈತಮಿತ್ರರು, ಸಾರ್ವಜನಿಕರು, ಸುರಕ್ಷಿತ ಸ್ಥಾನಗಳಿಗೆ ತಲುಪಲು ಸಿದ್ಧರಾಗಬೇಕೆಂದು ತುಂಗಭದ್ರ ಟಿ.ಬಿ.ಡ್ಯಾಂನ ಅಧಿಕಾರಿಗಳು ವಿನಂತಿಸುತ್ತಾರೆ.  

ಕರ್ನಾಟಕ ಮತ್ತು ಆಂಧ್ರ ಪ್ರದೇಶದ ಜಂಟಿ ಕಾಲಿವೆಯಾಗಿರುವ ತುಂಗಭದ್ರ ಬಲದಂಡೆಯ ಮೇಲ್ಮಟ್ಟದ ಕಾಲುವೆಗೆ ಈ ದಿನ ದಿನಾಂಕ 22ರಂದು ಬೆಳಿಗ್ಗೆ : 09:30 ಗಂಟೆಗೆ ತುಂಗಭದ್ರ ಮಂಡಳಿಯ ಮುಖ್ಯ ಕಾರ್ಯದರ್ಶಿಗಳಾದ ಓ.ಆರ್‌.ಕೆ.ರೆಡ್ಡಿ ಇವರು ಪೂಜೆ ಸಲ್ಲಿಸಿ ಕಾಲುವೆಗೆ ನೀರನ್ನು ಬಿಟ್ಟಿರುತ್ತಾರೆ.  

ತುಂಗಭದ್ರ ಮಂಡಳಿಯ ಸುಪ್ರಿಂಟೆಂಡೆಂಟ್ ಇಂಜಿನಿಯರ್ ಶ್ರೀಕಾಂತ್‌ರೆಡ್ಡಿ, ಎಕ್ಸಿಕ್ಯೂಟಿ ಇಂಜಿನಿಯರ್ ರವಿಚಂದ್ರ, ಸಬ್ ಡಿವಿಜನ್ ಅಧಿಕಾರಿಗಳಾದ ಗೋಪಿ ಹಾಗೂ ಗಣೇಶ್ ಮತ್ತು ಕೃಷ್ಣಮೂರ್ತಿ ಮತ್ತು ಸೆಕ್ಷನ್ ಆಫೀಸರ್ ರಾಘವೇಂದ್ರ ಇವರೆಲ್ಲರೊಂದಿಗೂ ತುಂಗಭದ್ರ ರೈತ ಸಂಘವು ಪೂಜೆಯಲ್ಲಿ ಭಾಗವಹಿಸಿರುತ್ತಾರೆ. 


ಸುದ್ದಿ ಓದಿ