ಮಹಾಲಿಂಗ ಮಂಗಿಯವರ ಎರಡು ಕೃತಿಗಳ ಬಿಡುಗಡೆ
ಲೋಕದರ್ಶನ ವರದಿ
ಮೂಡಲಗಿ 07: ‘ಬದುಕಿನ ಕಷ್ಟ-ಕಾರ್ಪಣಯಗಳ ಅನುಭವಗಳನ್ನು ಸಾಹಿತಿ ಮಹಾಲಿಂಗ ಮಂಗಿ ಅವರು ತಮ್ಮ ಸಂಕಥನಗಳ ರೂಪದಲ್ಲಿ ಬಾಳ ದಾರಿಯಲ್ಲಿ ಮತ್ತು ಬಾಳ ಬಂಡಿ ಕೃತಿಯಲ್ಲಿ ನೈಜವಾಗಿ ಕಟ್ಟಿಕೊಟ್ಟಿದ್ದಾರೆ’ ಎಂದು ಸಾಹಿತಿ, ನಾಟಕಕಾರ ಪ್ರೊ. ಬಿ.ಆರ್.ಪೊಲೀಸ್ ಪಾಟೀಲ ಹೇಳಿದರು.
ತಾಲ್ಲೂಕಿನ ಕಲ್ಲೋಳಿಯ ರಾಮಲಿಂಗೇಶ್ವರ ಶಿಕ್ಷಣ ಸಂಸ್ಥೆಯ ಪ್ರಥಮ ದರ್ಜೆ ಮಹಾವಿದ್ಯಾಲಯದ ಕನ್ನಡ ವಿಭಾಗದ ಆತಿಥ್ಯದಲ್ಲಿ ಮಹಾಲಿಂಗ ಮಂಗಿ ಅವರ ಬಾಳದಾರಿಯಲ್ಲಿ ಹಾಗೂ ಬಾಳಬಂಡಿ ಸಂಕಥನಗಳ ಲೋಕಾರೆ್ಣಗೊಳಿಸಿ ಕೃತಿಗಳ ಬಗ್ಗೆ ಮಾತನಾಡಿದ ಅವರು ಮಂಗಿ ಅವರ ಅನುಭವಗಳೇ ಅವರಿಗೆ ವಿಶ್ವವಿದ್ಯಾಲಯವಾಗಿತ್ತು, ಅನುಭವಳಿಂದಲೇ ಅವರು ಕಲಿತ್ತಿರುವುದಾಗಿದೆ. ಕೃತಿಗಳಲ್ಲಿ ಕೇವಲ ಶಬ್ದಗಳಿಂದ ಕೂಡಿರಬಾರದು, ಬರವಣಿಗೆಯು ಓದುಗರಿಗೆ ದರ್ಶನವನ್ನು ನೀಡಬೇಕು. ಅಂತಹ ಅಂಶಗಳು ಮಹಾಲಿಂಗ ಮಂಗಿ ಅವರ ಕೃತಿಗಳ ಮೌಲ್ಯಗಳಾಗಿವೆ ಎಂದರು.
ನಾಡರೈತ, ಬಡಕಾರ್ಮಿಕ, ಕಣ್ಣಿರಿಡುವ ಶೂದ್ರ ಹೀಗೆ ಅವರ ದು:ಖಗಳಿಗೆ ಸ್ಪಂದನೆ ಇದೆ. ಬೇರೆಯವರ ಬದುಕನ್ನು ಸರಿಪಡಿಸುವ ಸಲುವಾಗಿ ತಮ್ಮ ಬದುಕನ್ನು ಸವಿಸಿರುವು ಮಹಾಲಿಂಗ ಮಂಗಿ ಅವರು ಎಲ್ಲರಿಗೂ ಮಾದರಿಯೆನಿಸುತ್ತಾರೆ.