ಬೆಳಗಾವಿ

ಹಿರಿಯ ನಾಗರಿಕರ ಗೌರವ ಮತ್ತು ಸೈಬರ್ ಅಪರಾಧ ತಡೆಗೆ ಜಾಗೃತಿ ಕಾರ್ಯಕ್ರಮ

ಹಿರಿಯ ನಾಗರಿಕರ ಗೌರವ ಮತ್ತು ಸೈಬರ್ ಅಪರಾಧ ತಡೆಗೆ ಜಾಗೃತಿ ಕಾರ್ಯಕ್ರಮ

ಲೋಕದರ್ಶನ ವರದಿ 

 ಮೂಡಲಗಿ 07: ಹಿರಿಯ ನಾಗರಿಕರಿಗೆ ಗೌರವ ನೀಡುವುದು ಇಂದಿನ ಯುವ ಜನರ ಜೀವನದ ಮುಖ್ಯ ಭಾಗವಾಗಿದ್ದು ಹೆಚ್ಚು ಓದಿರುವ ಸಮುದಾಯದಲ್ಲಿ ಹಿರಿಯ ನಾಗರಿಕರಿಗೆ ಮೌಲ್ಯ ನೀಡದೇ ಇರುವುದು ಇಂದಿನ ಸಮಾಜದ ಬಹುದೊಡ್ಡ ಸಮಸ್ಯೆಯಾಗಿದೆ. ನಮ್ಮ ತಂದೆ ತಾಯಿ ಮನೆಯ ಹಿರಿಯರು ನಮ್ಮ ಅಮೂಲ್ಯವಾದ ಆಸ್ತಿಗಳು ಅವರಿಗೆ ಗೌರವ ಕೊಡುವ ಸಂಸ್ಕೃತಿ ವಿದ್ಯಾರ್ಥಿಗಳು ಬೆಳಸಿಕೊಳ್ಳಬೇಕು ಇದರ ಜೊತೆಗೆ ತಂತ್ರಜ್ಞಾನ ಬೆಳದಂತೆ  ಮೊಬೈಲ್ ಸಾಧನ ನಮ್ಮ ಜೀವನದ ಮಹತ್ವದ ಭಾಗವಾಗಿದ್ದು ಇಂದು ಅತಿಹೆಚ್ಚು ಹಣಕಾಸಿನ ವ್ಯವಹಾರಗಳು ನಡೆಯುವ ಸಂದರ್ಭದಲ್ಲಿ ಸೈಬರ್ ಕ್ರೈಮಗಳು ಹೆಚ್ಚಾಗಿ ನಡೆಯುತ್ತಿದ್ದು ತಮ್ಮ ಜೀವನ ಕಾನೂನು ನಿಯಮದಲ್ಲಿ ಸಾಮಾಜಿಕ ಬದ್ದತೆಯಲ್ಲಿ ರೂಪಿಸಿಕೊಳ್ಳುವಂತೆ ಪದವಿ ಕಾಲೇಜಿನ ವಿದ್ಯಾರ್ಥಿಗಳಿಗೆ ಮೂಡಲಗಿಯ ಸಿವಿಲ್ ನ್ಯಾಯಾಧೀಶೆ ಸವಿತಾ ಮುಕ್ಕಲ್ ಕರೆನೀಡಿದರು.  


ಸುದ್ದಿ ಓದಿ