ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡಿ ; ಶಿವಲಿಂಗಪ್ಪ ಜುಟ್ನಟ್ಟಿ
ಮಹಾಲಿಂಗಪುರ 05:ಮಹಾಲಿಂಗಪುರದ ಸ್ಥಳೀಯ ವಾಸವಿ ಕಲ್ಯಾಣ ಮಂಟಪದಲ್ಲಿ ಏರ್ಪಟಟಿರುವ ಸನ್ 1987- 88 ನೇ ಸಾಲಿನ ಎಸ್ ಎಲ್ ಸಿ ವಿದ್ಯಾರ್ಥಿಗಳ ಸಂಭ್ರಮದ ಸ್ನೇಹ ಸಂಗಮ ಕಾರ್ಯಕ್ರಮದಲ್ಲಿ ಮಹಾಲಿಂಗಪುರದ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯ ಶಿಕ್ಷಕರಾದ ಶಿವಲಿಂಗಪ್ಪಾ ಜುಟ್ನಟ್ಟಿ ಅವರು ಕಾರ್ಯಕ್ರಮದ ವೇದಿಕೆ ಮೇಲಿರುವ ಅತಿಥಿಗಳಾದ ಚಿಮ್ಮಡ ವಿರಕ್ತ ಮಠದ ಮನಿಪ್ರ ಪ್ರಭು ಸ್ವಾಮೀಜಿಗಳು ಹಾಗೂ ರನ್ನ ಬೆಳಗಲಿಯ ಸಿದ್ದರಾಮ ಶಿವಯೋಗಿಗಳಿಗೆ ಮತ್ತು ರನ್ನ ಬೆಳಗಲಿಯ ವಿದ್ಯಾವರ್ಧಕ ಸಂಘದ ಪ್ರೌಢಶಾಲೆಯ ಕಾರ್ಯದರ್ಶಿಗಳಾದ ಪಂಡಿತ್ ಪೂಜಾರಿ ಅವರಿಗೆ ಮತ್ತು ಸ್ಥಳೀಯ ಕೆಎಲ್ಇ ಪ್ರೌಢಶಾಲೆಯ ರಾಷ್ಟ್ರ ಪ್ರಶಸ್ತಿ ವಿಜೇತರಾದ ಸಪನಾ ಅನಿಗೋಳ್ ಅವರಿಗೆ ಮತ್ತು ಮಹಾಲಿಂಗಪುರದ ಪತ್ರಕರ್ತರಾದ ಮಿರಾಸಾಬ್ ತಟಗಾರ ಅವರಿಗೆ ಕಾಟನ್ ಬಟ್ಟೆಯಿಂದ ಹೊಲೆದು ತಯಾರು ಮಾಡಿದ ಚೀಲಗಳನ್ನು ಕೊಟ್ಟು ಕಾಟನ್ ಬಟ್ಟೆಗಳು ಮತ್ತು ಚೀಲಗಳನ್ನು ಹೆಚ್ಚು ಬಳಕೆ ಮಾಡಿ ಮತ್ತು ಪರಿಸರಕ್ಕೆ ಹಾನಿಯಾಗದ ಅಂದರೆ ಬೇಗನೆ ವಿಲೇವಾರಿ ಯಾಗುವಂತಹ ವಸ್ತುಗಳನ್ನು ಬಳಸಿ ಪರಿಸರವನ್ನು ಪ್ಲಾಸ್ಟಿಕ್ ಮುಕ್ತವನ್ನಾಗಿಸೋಣ ಎಂದು ಹೇಳಿದರು.
ಈ ಸಂದರ್ಭದಲ್ಲಿ 1997- 98 ನೇ ಎಸ್ ಎಲ್ ಸಿ ಹಳೆ ವಿದ್ಯಾರ್ಥಿಗಳು ಪಾಲಕ ಬಂಧುಗಳು ಮತ್ತು ಊರಿನ ಹಿರಿಯರು ಇನ್ನಿತರರು ಹಲವಾರು ಸಂದರ್ಭದಲ್ಲಿ ಹಾಜರಿದ್ದರು.