ಲಸಿಕಾ ಕೇಂದ್ರದಲ್ಲಿ ರೆಡ್ಕ್ರಾಸ್ ಸಂಸ್ಥೆ ಸಿಬ್ಬಂದಿ ನೆರವು
ಬಳ್ಳಾರಿ 24: ನಗರದ ಜಿಲ್ಲಾ ಆಸ್ಪತ್ರೆಯ ಲಸಿಕಾ ಕೇಂದ್ರದಲ್ಲಿ ಕೋವಿಡ್-19 ಲಸಿಕೆ ನೀಡುವ ಪ್ರಕ್ರಿಯೆಯಲ್ಲಿ ಆರೋಗ್ಯ ಇಲಾಖೆಯೊಂದಿಗೆ ರೆಡ್ಕ್ರಾಸ್ ಸಂಸ್ಥೆಯ ಸಿಬ್ಬಂದಿ ನಿರಂತರವಾಗಿ ಕಾರ್ಯನಿರ್ವಹಿಸುವ ಮೂಲಕ ನೆರವಾಗುತ್ತಿದ್ದಾರೆ.ರೆಡ್ಕ್ರಾಸ್ ಸಂಸ್ಥೆಯ ಸವರ್್ ತಂಡದವರು ಮತ್ತು ಸ್ವಯಂ ಸೇವಕರು ಲಸಿಕೆ ನೊಂದಣಿ ಕಾರ್ಯ, ಡಾಟಾ ಎಂಟ್ರಿ, ಲಸಿಕೆ ಹಾಕಿಸುವ ವಿಧಾನದಲ್ಲಿ ಆರೋಗ್ಯ ಇಲಾಖೆಯ ಸಿಬ್ಬಂದಿಯ ಜೊತೆಗೆ ಕೆಲಸ ಮಾಡುತ್ತಿದ್ದಾರೆ. ಇವರ ಕೆಲಸವನ್ನು ಜಿಲ್ಲಾಧಿಕಾರಿಗಳು ಆರೋಗ್ಯ ಇಲಾಖೆ ಅಧಿಕಾರಿಗಳು ಪ್ರಶಂಸಿಸಿದ್ದಾರೆ.ರೆಡ್ಕ್ರಾಸ್ ಸಂಸ್ಥೆಯ ಸವರ್್ ತಂಡದ ಅಶೋಕ್ ಜೇನ್,ಭರತ್ ಜೇನ್,ಹರಿಶಂಕರ್ ಅಗರ್ವಾಲ್,ಬಾರಿಕರ ಗಣೇಶ್,ಆಶಿಸ್ ಅಗರ್ವಾಲ್,ಉಮಾ ಮಹೇಶ್ವರಿ,ತೇಜಸ್ ಅಗರ್ವಾಲ್ ಮತ್ತು ಇತರೆ ಸಿಬ್ಬಂದಿ ಕೆಲಸ ಮಾಡುತ್ತಿದ್ದಾರೆ