ಸಿಂಧಗಿ

ಶಾಸಕ ಮನಗೂಳಿ ಆರೋಗ್ಯದಲ್ಲಿ ಚೇತರಿಕೆ: ಬಿರಾದಾರ.

ಶಾಸಕ ಮನಗೂಳಿ ಆರೋಗ್ಯದಲ್ಲಿ ಚೇತರಿಕೆ: ಬಿರಾದಾರ.

ಸಿಂದಗಿ 25: ಉಸಿರಾಟದ ತೊಂದರೆಯಿಂದ ಬೆಂಗಳೂರಿನ ಅಪೋಲೋ ಆಸ್ಪತ್ರೆಗೆ ದಾಖಲಾಗಿದ್ದ ಸಿಂದಗಿ ಮತಕ್ಷೇತ್ರದ ಶಾಸಕ ಎಮ್.ಸಿ. ಮನಗೂಳಿ ಆರೋಗ್ಯದಲ್ಲಿ ಚೇತರಿಕೆ ಕಾಣುತ್ತಿದ್ದು, ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ. ತಾಲೂಕಿನ ಜನತೆ ಯಾವುದೇ ಭಯ ಪಡುವ ಅಗತ್ಯತೆ ಇಲ್ಲ ಎಂದು ತಾಲೂಕು ಶಿಕ್ಷಣ ಪ್ರಸಾರಕ ಮಂಡಳಿ ನಿರ್ದೇಶಕ ಶಿವಪ್ಪಗೌಡ ಬಿರಾದಾರ ಅವರು ತಿಳಿಸಿದ್ದಾರೆ.

ಈ ಕುರಿತು ಪತ್ರಕರ್ತರೊಂದಿಗೆ ದೂರವಾಣಿ ಮೂಲಕ ಮಾತನಾಡಿ, ಶಾಸಕರು ಅನಾರೋಗ್ಯದ ನಿಮಿತ್ತ ಬೆಂಗಳೂರಿನ ಅಪೋಲೋ ಆಸ್ಪತ್ರೆಯಲ್ಲಿ ದಾಖಲಾಗಿರುವ ಹಿನ್ನಲೆಯಲ್ಲಿ ಆಸ್ಪತ್ರೆಗೆ ಭೇಟಿ ನೀಡಿ ಶಾಸಕರ ಆರೋಗ್ಯ ವಿಚಾರಿಸಿದರು.  ತಾಲೂಕಿನ ಜನತೆಯ ಶುಭಾಶೀರ್ವಾದ ಮತ್ತು ದೇವರ ದಯೆಯಿಂದ ಶಾಸಕರು ಗುಣಮುಖರಾಗುತ್ತಿದ್ದಾರೆ ಇನ್ನೂ ಕೆಲವು ದಿನಗಳ ನಂತರ ಮತ್ತೆ ಜನಸೇವೆಗೆ ಮುಂದಾಗಲಿದ್ದಾರೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸುದ್ದಿ ಓದಿ