ಮುದ್ದೆಬಿಹಾಲ್

ನನ್ನ ಆಡಳಿತದಲ್ಲಾದ ಅಭಿವೃದ್ಧಿ, ಸಾಧನೆಗಳ ಬಹಿರಂಗ ಚರ್ಚೆಗೆ ಸಿದ್ಧ

ನನ್ನ ಆಡಳಿತದಲ್ಲಾದ ಅಭಿವೃದ್ಧಿ, ಸಾಧನೆಗಳ ಬಹಿರಂಗ ಚರ್ಚೆಗೆ ಸಿದ್ಧ

ಸುದ್ದಿಗೋಷ್ಠಿಯಲ್ಲಿ ಎಎಸ್ ಪಾಟೀಲ(ನಡಹಳ್ಳಿ)ಯವರಿಗೆ ಮಾಜಿ ಸಚಿವ ಸಿಎಸ್‌ನಾಡಗೌಡ ಪರೋಕ್ಷ ಸವಾಲು 

ಮುದ್ದೇಬಿಹಾಳ: ಕೆಲವೇ ಕೆಲ ಸಿಸಿ ರಸ್ತೆಗಳನ್ನು ಮಾಡಿ ದೊಡ್ಡ ಅಭಿವೃದ್ಧಿ ಹರಿಕಾರರು ಎಂದು ಬಿಂಬಿಸಿಕೊಳ್ಳುವುದನ್ನು ಬಿಟ್ಟು ಕಳೆದ 25 ವರ್ಷಗಳ ನನ್ನ ಆಡಳಿತದಲ್ಲಾದ ಅಭಿವೃದ್ಧಿ ಪೂರಕ ಯೋಜನೆಗಳ ಸಾಧನೆಗಳನ್ನು ಸಾರ್ವಜನಿಕರ ಮುಂದೆ ಬಹಿರಂಗವಾಗಿ ಚರ್ಚಿಸಲು ಸದಾ ಸಿದ್ಧನಿದ್ಧು ತಯಾರಾಗಿ ಎಂದು ಮಾಜಿ ಸಚಿವ ಸಿಎಸ್‌ನಾಡಗೌಡ ಅವರು ಸ್ಥಳೀಯ ಶಾಸಕ ಎಎಸ್ ಪಾಟೀಲ(ನಡಹಳ್ಳಿ)ಯವರನ್ನು ಪರೋಕ್ಷವಾಗಿ ಸವಾಲೆಸೆದರು.  

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಹೋರಾಂಗಣದಲ್ಲಿ ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಮತಕ್ಷೇತ್ರದಲ್ಲಿ ಸಾಕಷ್ಟು ಬ್ರಷ್ಟಾಚಾರ ತಾಂಡವವಾಡುತ್ತಿದೆ. ಇದನ್ನು ಯಾರಾದರೂ ಪ್ರಶ್ನೇ ಮಾಡಿದರೇ ಸ್ಥಳಿಯ ಶಾಸಕರು ಪೊಲೀಸ್ ಇಲಾಖೆ ಅಧಿಕಾರಿಗಳನ್ನು ದುರುಪಯೋಗಪಡಿಸಿಕೊಳ್ಳುವ ಮೂಲಕ ಅವರ ಮೇಲೆ ಇಲ್ಲಸಲ್ಲದ ಸುಳ್ಳು ಪ್ರಕರಣಗಳನ್ನು ದಾಖಲಿಸುವ ಮೂಲಕ ಜೈಲಿಗೆ ಕಳಿಸುವ ಕೆಲಸ ನಿರಂತರವಾಗಿ ನಡೆಯುತ್ತಿದೆ. ಇದರಿಂದ ಇವರರೊಬ್ಬ ಕೊಲೆಗಡುಕ, ಹಾಗೂ ರೌಡಿ ಶಾಸಕ ಎಂದೇ ಕರೆಯಬಹುದಾಗಿದೆ. 

ನಮ್ಮ ಮತಕ್ಷೇತ್ರದಲ್ಲಿ ಇಂತಹ ಅನ್ಯಾಯ ನಡೆಯುತ್ತಿದೆ ಎಂದು ತಿಳಿದಾದರೂ ಯಾವೊಬ್ಬ ಶಾಸಕರನ್ನು ಹದ್ದುಬಸ್ತಿನಲ್ಲಿಡುವ ತಾಕತ್ತು ನಿಮ್ಮಲ್ಲಿ ಇಲ್ಲದಿದ್ದಾಗ ಕೇಂದ್ರ ಹಾಗೂ ರಾಜ್ಯ ಬಿಜೆಪಿ ಸರಕಾರ ಶಾಸಕರು ನಾವು ಜನವಿರೋಧಿಗಳು, ಭ್ರಷ್ಟಾಚಾರ ನಡೆಸುವುದೇ ನಮ್ಮ ಮುಖ್ಯ ಉದ್ದೇಶ ಎಂದು ನೇರವಾಗಿ ಒಪ್ಪಿಕೊಂಡು ಬಿಡಿ ಮತ್ಯಾಕೆ ಚುನಾವಣೆಗಳು ಬಂದಕೂಡಲೆ ಸೋಗುಹಾಕಿ ಜನರ ದಾರಿ ತಪ್ಪಿಸುವ ಕಾರ್ಯ ಮಾಡುತ್ತಿರಿ. 

ಸಧ್ಯ ಮತಕ್ಷೇತ್ರದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗಳನ್ನು ನಡೆಸಲಾಗುತ್ತಿದೆ ತಮಗೆ ಬೇಕಾದ ಗುತ್ತಿಗೆದಾರರೆ ಗುತ್ತಿಗೆ ಪಡೆಯಬೇಕು ಜೊತೆಗೆ ಎಲ್ಲ ಕಾಮಗಾರಿಗಳು ಅವೈಜ್ಞಾನಿಕದಿಂದ ಕೂಡಿವೆ ಅದರಲ್ಲಿ ಮುಖ್ಯವಾಗಿ ತಾಳಿಕೋಟಿ ಮುದ್ದೇಬಿಹಾಳ ಮುಖ್ಯ ರಸ್ತೆ ಬ್ರೀಜ್ ಒಡೆದ ಹಿನ್ನೇಲೆಯಲ್ಲಿ ಸುಮಾರು ಎರಡು ಕೋಡಿಗಳ ವೆಚ್ಚದಲ್ಲಿ ಡಾಂಬರೀಕರಣ ರಸ್ತೆ ನಿರ್ಮಾಣ ಮಾಡಲಾಯಿತು ಅದು ಕೂಡ ಕಳಪೆಯಾಗಿದೆ ಹೀಗೆ ಅನೇಕ ರಸ್ತೆ ಕಾಮಗಾರಿಗಳನ್ನು ನಡೆಸಲಾಗಿದೆ ಅವೇಲ್ಲವೂ ಕಳಪೆ ಮಟ್ಟದಲ್ಲಿ ನಿರ್ಮಿಸಲಾಗಿದೆ ಇದಕ್ಕೆಲ್ಲ ಯಾರು ಹೊಣೆ.? ಸರಕಾರದ ನಿಯಮಾನುಸಾರ ಆಯಾ ಕಾಮಗಾರಿಗಳ ಬಗ್ಗೆ ಸಂಪೂರ್ಣ ವಿವರಗಳನ್ನೋಳಗೊಂಡ ನಾಮಫಲಕಗಳನ್ನು ಅಳವಡಿಕೆ ಮಾಡಿಲ್ಲ. 

 ಮತಕ್ಷೇತ್ರದ ರೈತರ ಕೃಷಿ ಚಟುವಟಿಕೆಗೆ ಅತ್ಯವಶ್ಯಕವಾಗಿದ್ದ ಬೂದಿಹಾಳ ಪೀರಾಪೂರ ಏತನಿರಾವರಿ ಯೋಜನೆ ಹಾಗೂ ನಾಗರಬೆಟ್ಟ ಏತನೀರಾವರಿ ಯೋಜನೆ. ಕೃಷ್ಣಾ ನದಿ ತೀರ ಗ್ರಾಮಗಳ ಸಮಗ್ರ ಅಭಿವೃದ್ಧಿಗಾಗಿ ಚಿಮ್ಮಲಗಿ ಏತನೀರಾವರಿ ಯೋಜನೆ ಅನುಷ್ಠಾನ, ಮುದ್ದೇಬಿಹಾಳ ಪಟ್ಟಣದಲ್ಲಿ ಹುಡ್ಕೋ ಬಡಾವಣೆಯಲ್ಲಿರುವ ಹೈಕೋರ್ಟ ಮಾದರಿಯಲ್ಲಿ ಸುಸಜ್ಜಿತ ಕಟ್ಟಡಗೊಂಡ ತಾಲೂಕಾ ಕೋರ್ಟ ಕಟ್ಟಡ, ಹಿಂದುಳಿದ ಜನಾಂಗದ ಮಕ್ಕಳ ಉನ್ನತ ಶಿಕ್ಷಣಕ್ಕಾಗಿ ವಸತಿ ಸಹಿತ ಪದವಿ ಕಾಲೇಜು ನಿರ್ಮಾಣ, ಮಿನಿ ವಿಧಾನ ಸೌಧ. ತಾಲೂಕಾ ಸರಕಾರಿ ಆಸ್ಪತ್ರೆ, ಆಶ್ರಯ ಬಡಾವಣೆ, ಶುದ್ಧ ನೀರಿನ ಘಟಕಗಳ, ಬಸ್ ನಿಲ್ದಾಣ, ಮುಖ್ಯವಾಗಿ ತಂಗಡಗಿಯಿಂದ ತಾಳಿಕೋಟಿಯವರೆಗೂ ನಿರ್ಮಾಣಗೊಂಡ ರಾಜ್ಯ ಹೆದ್ದಾರಿ ಸೇರಿದಂತೆ ಹಲವು ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಂಡಿದ್ದೇನೆ. ನನ್ನ ಸಾಧನೆ ಏನು ಎನ್ನುವವರು ತಿಳಿದುಕೊಳ್ಳಿ. 

ಮಲ್ಲಿಕಾರ್ಜುನ ಖರ್ಗೆಯವರು  ಒಬ್ಬ ದಲಿತ ರಾಜಕಾರಿಣಿಯಾಗಿದ್ದಲ್ಲದೇ ಸರ್ವಧರ್ಮದವರನ್ನು ವಿಶ್ವಾವನ್ನು ಪಡೆದು  ಅವರು ತಮ್ಮ ರಾಜಕೀಯ ಜೀವನದಲ್ಲಿ ಅಧಿಕಾರದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುವ ಮೂಲಕ ಹೈದರಾಬಾದ ಕರ್ನಾಟಕ ವ್ಯಾಪ್ತಿಯ 371ಜೆ ಕಲಂ ಅನುಷ್ಠಾನಗೊಳಿಸುವ ಮುಖ್ಯರೂವಾರಿಯಾಗಿದ್ದರಲ್ಲದೇ ನೀರಾವರಿ ಮಂತ್ರಿಗಳಾಗಿದ್ದ ಸಂದರ್ಭದಲ್ಲಿ ನಮ್ಮ ಮತಕ್ಷೇತ್ರ ಮಾತ್ರವಲ್ಲದೇ ಬೇರೆ ಬೇರೆ ಕಡೆಗಳಲ್ಲಿ ಕೆರೆ ತುಂಬಿಸುವ ಯೋಜನೆಗೆ ಪ್ರಥಮ ಆಧ್ಯತೆ ನೀಡಿದ್ದ ದೇಶದ ಹಿರಿಯ ಅನುಭವಿ ಸಜ್ಜನ ರಾಜಕಾರಣಕ್ಕೆ ಹೆಸರಾದವರು. ಈ ಹಿಂದಿನ ಮುಖ್ಯಮಂತ್ರಿಯಾಗಿದ್ದ ಎಸ್ ಬಂಗಾರ​‍್ಪನವರ ಆಡಳಿತದಲ್ಲಿ ಕ್ಯಾಬಿನೇಟ್ ಮಂತ್ರಿಗಳಾಗಿದ್ದರು ತಾವು ರಾಜ್ಯ ಸಚಿವರಾಗಿದ್ದ ಸಂದರ್ಭದಲ್ಲಿ  ಆಲಮಟ್ಟಿ ಮತ್ತು ನಾರಾಯಣಪೂರ ಆಣೆಕಟ್ಟು ವಿಚಾರ ಬಂದಾಗ ಬಂಗಾರ​‍್ಪನವರ ಮೇಲೆ ಒತ್ತಡ ಹೇರಿ ಈ ಭಾಗದ ರೈತರಿಗೆ ಅತ್ಯವಶ್ಯವಾಗಿರುವ ಎಲ್ ಬಿ ಸಿ ಕಾಲುವೆ ಕಾಮಗಾರಿ ಅನುಷ್ಠಾನಗೊಳಿಸಿದ ಕೀರ್ತಿ ಮಲ್ಲಿಕಾರ್ಜುನ ಖರ್ಗೆಯವರಿಗೆ. ಧರ್ಮಸಿಂಗ್ರವರು, ಕೆ ಎಚ್ ಪಾಟೀಲರು, ಈ ನಮ್ಮ ಜೊತೆಗಿದ್ದಂತಹ ಬಿ ಎಸ್ ಪಾಟೀಲ(ಸಾಸನೂರ) ಹಾಗೂ ಹುನಗುಂದ ಶಾಸಕರಾಗಿದ್ದ ಎಸ್ ಆರ್ ಕಾಶಪ್ಪನವರಿಗೆ ಸಲ್ಲುತ್ತದೆ. ಬಳಿಕ 2013 ನಂತರ ಸಿದ್ರಾಮಯ್ಯನವರ ನೇತೃತ್ವದ ಕಾಂಗ್ರೇಸ್ ಸರಕಾರದಲ್ಲಿ ಎಂ ಬಿ ಪಾಟೀಲರು ಕೆರೆ ತುಂಬುವ ಯೋಜನೆ, ನಾರಾಯಣಪೂರ ಕಾಲುವೆಯ ಹಾಗೂ ಚಿಮ್ಮಲಗಿ ಏತನಿರಾವರಿ ಕಾಲುವೆಗಳ ದುರಸ್ಥಿ ಕಾಮಗಾಗಿ ಸಂಪೂರ್ಣ ಅನುಷ್ಠಾನಗೊಳಿಸುವಲ್ಲಿ ಯಶಸ್ವಿಯಾದರು. ಮಲ್ಲಿಕಾರ್ಜುನ ಖರ್ಗೆಯವರು  1968-69ರಲ್ಲಿ ತಮ್ಮ ರಾಜಕೀಯ ಜೀವನವನ್ನು ಪ್ರಾರಂಭಿಸಿದ್ದಲ್ಲದೇ 9 ಬಾರಿ ಶಾಸಕರಾಗಿ ಒಂದು ಬಾರಿ ಸಂಸದರಾಗಿ ಸಧ್ಯ ಚುನಾವಣೆಯ ಮೂಲಕ ಅಭುತಪೂರ್ವ ಜಯಸಾಧಿಸಿ ಸಧ್ಯ ಎಐಸಿಸಿ ಪಕ್ಷದ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಮಲ್ಲಿಕಾರ್ಜುನ ಖರ್ಗೆಯವರಿಗೆ ಮುದ್ದೇಬಿಹಾಳ ತಾಳಿಕೋಟಿ, ನಾಲತವಾಡ,ಗಳ ಕಾಂಗ್ರೆಸ್ ಪಕ್ಷದ ಮುಖಂಡ, ಹಾಗೂ ಕಾರ್ಯಕರ್ತರ ಪರವಾಗಿ ಅಭಿನಂದನೆ ಸಲ್ಲಿಸುತ್ತೇನೆ. ಈ ನಿಟ್ಟಿನಲ್ಲಿ ರಾಜಕಾರಣದಲ್ಲಿಯೇ ಅತ್ಯಂತ ಹಿರಿಯ ನಾಯಕರಾದ ಅವರ ರಾಜಕೀಯ ಆದರ್ಶ ಗುಣಗಳನ್ನು ಇಂದಿನ ಯುವ ಕಾರ್ಯಕರ್ತರು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಸ್ವಚ್ಛ ಹಾಗೂ ಸಾಮಾಜಿಕ ಚಿಂತನೆಯುಳ್ಳ ರಾಜಕಾರಣವನ್ನು ಮೈಗೂಡಿಸಿಕೊಳ್ಳಬೇಕು.  

ಜೊತೆಗೆ ಈ ದೇಶದಕ್ಕೆ ಸ್ವಾತಂತ್ರ್ಯ ತಂದುಕೊಡುವಲ್ಲಿ ಪ್ರಮುಖ ಪಾತ್ರವಹಿಸಿದ ಸೋನಿಯಾ ಗಾಂಧಿ, ಹಾಗೂ ರಾಹುಲ್ ಗಾಂಧಿಯವರ ಕುಟುಂಬ ಪಾತ್ರ ಬಹುಮುಖ್ಯವಾಗಿದೆ. ಯಾವತ್ತಿಗೂ ಕೂಡ ಅವರು ಅಧಿಕಾರದ ಆಸೆಗೆ ಬೀಳದೇ ಈ ದೇಶದ ಬಡವರ ದೀನದಲಿತ, ಶೋಷಿತವರ್ಗದವರ ಹಿಂದುಳಿದ ಜನಾಂಗದ ಅಭಿವೃದ್ಧಿಯ ಬಗ್ಗೆ ಚಿಂತನೆಯನ್ನು ಇಟ್ಟುಕೊಂಡು ಮುನ್ನಡೆದಿದ್ದಾರೆ. ದೇಶದೆಲ್ಲೆಡೆ ಕೇವಲ ಆಶ್ವಾನೆಗಳನ್ನು ನೀಡಿ, ಜಾತಿ ಧರ್ಮ,ಧರ್ಮಗಳಲ್ಲಿ ಕೋಮು ಭಾವನೆಗಳನ್ನು ಸೃಷ್ಟಿ ಅಶಾಂತಿಯನ್ನುಂಟು ಮಾಡಿ ಜನರಿಗೆ ತಪ್ಪು ದಾರಿ ತೋರಿಸುತ್ತಿರುವ ಕೇಂದ್ರ ಹಾಗೂ ರಾಜ್ಯದಲ್ಲಿನ ಬಿಜೆಪಿ ಸರಕಾರವನ್ನು ಕಿತ್ತೇಸೆಯಲು ತೀರ್ಮಾನಿಸಿದ್ದಾರೆ ಎಂದರು. 

ಕೃಷ್ಣಾ ನದಿ ತೀರದ ಗ್ರಾಮಗಳ ರಸ್ತೆ ಅಭಿವೃದ್ಧಿಗಾಗಿ ಬಿಡುಗಡೆಗೊಂಡ ಅನುದಾನವವನ್ನು ಬೇರೆಡೆಗೆ ವರ್ಗಾವಣೆ ಮಾಡಲಾಗಿದೆ ಇದರಿಂದ ಈ ಭಾಗದ ಜನರಿಗೆ ರೈತರಿಗೆ ಅನ್ಯಾಯವಾಗಿದೆ ಎಂದು ನೈಜ ವರದಿ ಮಾಡಿದ ವರದಿಗಾರರಿಗೆ ದೂರವಾಣಿ ಮೂಲಕ ಅವಾಚ್ಛ ಶಬ್ಧಗಳಿಂದ ನಿಂದಿಸಿ ಹೆದರಿಕೆ ಹಾಕುವ ಮೂಲಕ ಪತ್ರಿಕಾ ಸ್ವಾತಂತ್ರ್ಯವನ್ನು ಕಿತ್ತುಕೊಳ್ಳುವ ಕಾರ್ಯ ನಡೆದಿದೆ ಇದನ್ನು ನಾನು ಬಲವಾಗಿ ಖಂಡಿಸುತ್ತೇನೆ.ಇನ್ನುಮುಂದೆ ಎಲ್ಲವನ್ನು ಸಹಿಸಿಕೊಂಡು ಕುಳಿತುಕೊಳ್ಳುವ ಪ್ರಶ್ನೇಯೇ ಇಲ್ಲ ಈ ಬಗ್ಗೆ ಸಧ್ಯದಲ್ಲಿಯೇ ಪಕ್ಷಾತೀತವಾಗಿ ಜಾತ್ಯಾತೀತವಾಗಿ ದೊಡ್ಡ ಪ್ರಮಾಣದಲ್ಲಿ ಹೋರಾಟ ಮಾಡುವ ಮೂಲಕ ಜನರಿಗೆ ನಿಮ್ಮ ನಿಜವಾದ ಮುಖವಾಡ ಬಿಚ್ಚಿಡುತ್ತೇವೆ ಆಗ ಜನರೇ ತಮಗೆ ತಕ್ಕ ಪಾಠ ಕಲಿಸುತ್ತಾರೆ 

ಈ ವೇಳೆ ತಾಲೂಕಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗುರು ತಾರನಾಳ, ತಾಳಿಕೋಟಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೈಬೂಬ ಚೋರಗಸ್ತಿ, ಎಂ ಬಿ ನಾವದಗಿ, ಕಾಶೀಮ್ ಪಟೇಲ,(ಮೂಕಿಹಾಳ) ರಾಯಣಗೌಡ ತಾತರಡ್ಡಿ, ಪುರಸಭೆ ಅಧ್ಯಕ್ಷೆ ಪ್ರತಿಭಾ ಅಂಗಡಗೇರಿ, ಮುತ್ತಿನಶೇಟ್ಟಿ ಗೂಳಿ, ಶ್ರೀಶೈಲ ಮರೋಳ, ನಿವೃತ್ತ ಎಸ್ಪಿ ಎಸ್ ಆರ್ ಕಟ್ಟಿಮನಿ, ಸುರೇಶಗೌಡ ಪಾಟೀಲ,ಸಂಗನಗೌಡ ಅಸ್ಕಿ,  ರಾಜು ಕೊಂಗಿ, ಗೋಪಿ ಮಡಿವಾಳರ, ಬಾಪುರಾಯ ದೇಸಾಯಿ, ಮಲ್ಲಿಕಾರ್ಜುನ ನಾಡಗೌಡ, ಪೃಥ್ವಿ ನಾಡಗೌಡ, ರುದ್ರಗೌಡ ಅಂಗಡಗೇರಿ, ಪರುಶುರಾಮ ಹಂಗರಗಿ, ಬೀರ​‍್ಪ ಯರಝರಿ, ಹಣಮಂತ ಕುರಿ, ಸಾಬಣ್ಣ ವಾಲಿಕಾರ,ತಾಲೂಕಾ ಯೂವಥ ಕಾಂಗ್ರೇಸ್ ಅಧ್ಯಕ್ಷ ಮಹಮ್ಮದರಫಿಕ ಶಿರೋಳ, ವಾಯ್ ಎಚ್ ವಿಜಯಕರ, ಕಾಮರಾಜ ಬಿರಾದಾರ,ಮೈಬೂಬ ಗೊಳಸಂಗಿ, ಹುಸೇನ ಮುಲ್ಲಾ,ತಾಲೂಕಾ ಮಹಿಳಾಘಟಕದ ಅಧ್ಯಕ್ಷೆ ಶೋಭಾ ಶಳ್ಳಗಿ, ಕಮಲಾ ಭಜಂತ್ರಿ ಸೇರಿದಂತೆ ಹಲವರು ಇದ್ದರು.    

ಸುದ್ದಿ ಓದಿ