ಓದುವ ಮಗು ನಾಳಿನ ನಗು ಅನುಷ್ಠಾನಕ್ಕೆ ಕರೆ
ಮಹಾಲಿಂಗಪುರ07: ಸಮೀಪದ ಕೆಸರಗೊಪ್ಪ ಗ್ರಾಮದ ಮಾಯವ್ವ ವಿಠ್ಠಲ ಕಪರಟ್ಟಿ ಪ್ರಾಥಮಿಕ ಶಾಲೆಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಓದುವ ಮಗು ನಾಳೆಯ ನಗು ಎಂಬ ಕಾರ್ಯಕ್ರಮವನ್ನು ಸಿ ಆರ್ ಪಿ ಟಿ. ಎಂ. ನಾಯಕವಾಡಿ ಉದ್ಘಾಟಿಸಿ ಮಾತನಾಡುತ್ತಾ ಕೊರೋನಾ ಸಂಕಷ್ಟ ಸಮಯದಲ್ಲಿ ಮಕ್ಕಳು ಅನುಭವಿಸಿರುವ ಭೌತಿಕ ಶಿಕ್ಷಣದ ಕೊರತೆಯನ್ನು ತುಂಬುವ ಮೂಲಕ ಲೇಖನ ಚಿಹ್ನೆ ಬಳಸಿ ಸೂಕ್ತ ಏರಿಳಿತದೊಂದಿಗೆ ಸ್ಪಷ್ಟ ಓದು, ಸ್ಪಷ್ಟ ಬರಹದ ಸಾಮರ್ಥ್ಯವನ್ನು ಪ್ರತಿ ಮಗುವೂ ಗಳಿಸುವ ನಿಟ್ಟಿನಲ್ಲಿ ಹಮ್ಮಿಕೊಂಡ ತರಬೇತಿಯನ್ನು ಪ್ರತಿ ಶಿಕ್ಷಕರೂ ಸದುಪಯೋಗ ಮಾಡಿಕೊಂಡು ಸೂಕ್ತ ರೀತಿಯಲ್ಲಿ ಅನುಷ್ಠಾನಗೊಳಿಸಲು ತಿಳಿಸಿದರು.
ಸೈದಾಪುರ ವಲಯ ಶಾಲೆಯ ಮುಖ್ಯೋಪಾಧ್ಯಾಯರು ಮತ್ತು ಸಹ ಶಿಕ್ಷಕರು ಭಾಗವಹಿಸಿದ್ದರು. ಸಂಸ್ಥೆಯ ಅಧ್ಯಕ್ಷ ಜ್ಯೋತೆಪ್ಪ ಕಪರಟ್ಟಿ, ಮುಖ್ಯೋಪಾಧ್ಯಾಯರಾದ ಐ. ಎ. ಮುಜಾವರ, ಯು. ಬಿ. ಬೆನವಾಡಿ,ಕೆ. ಎಂ. ತುಂಗಳ, ಡಿ. ಎಚ್ .ಮುಜಾವರ, ವಿವೇಕಾನಂದ ಭಜಂತ್ರಿ, ಮೇಲಿನಮನಿ, ಹೊಸೂರ, ಆಶಾ ಹೊಸಕೋಟೆ, ಬಿ. ಕೆ. ಸಬರದ, ಎಸ್. ಎಲ್. ಸನದಿ, ಬಡಿಗೇರ ಇತರರು ಇದ್ದರು.