ಬಳ್ಳಾರಿ

ವಿದ್ಯಾರ್ಥಿಗಳಿಗೆ ಮರು ಪರೀಕ್ಷೆ ಪರಿಹಾರವಲ್ಲ : ಎಐಡಿಎಸ್‌ಓ

ವಿದ್ಯಾರ್ಥಿಗಳಿಗೆ ಮರು ಪರೀಕ್ಷೆ ಪರಿಹಾರವಲ್ಲ : ಎಐಡಿಎಸ್‌ಓ

ಬಳ್ಳಾರಿ 14: ನೀಟ್‌-2024ರ ಫಲಿತಾಂಶದ ನಂತರ, ದೊಡ್ಡ ಮಟ್ಟದಲ್ಲಿ ಭ್ರಷ್ಟಾಚಾರ ನಡೆದಿದೆ ಎಂಬ ಕೂಗು ವಿದ್ಯಾರ್ಥಿಗಳು ಹಾಗೂ ಶಿಕ್ಷಣ ತಜ್ಞರಿಂದ ಕೇಳಿ ಬಂದಿದೆ. ಭ್ರಷ್ಟಾಚಾರ ಹಾಗೂ ಯಾಂರ್ಕ್ ಸುರಿಮಳೆಯ ಅಗಾಧತೆಯನ್ನು ಹೆಚ್ಚುವರಿ ಅಂಕ ನೀಡುವ ಸಮಜಾಯಿಷಿ ವಿವರಿಸಲು ಸಾಧ್ಯವಿಲ್ಲ. ಪಾಟ್ನಾ ಮತ್ತು ಇತರೆ ಪ್ರದೇಶಗಳಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆಯ ಆರೋಪಗಳು ಕೇಳಿ ಬಂದಿದೆ. ಈ ಕುರಿತು ಸರ್ಕಾರ ಅಥವಾ ಎನ್‌.ಟಿ.ಎ ಯು ಯಾವುದೇ ಗಂಭೀರ ತನಿಖೆ ಕೈಗೊಂಡಿಲ್ಲ. ಬದಲಿಗೆ, ಯಾವುದೇ ಭ್ರಷ್ಟಾಚಾರವು ನಡೆದಿಲ್ಲವೆಂದು ಕೇಂದ್ರ ಶಿಕ್ಷಣ ಮಂತ್ರಿಗಳಾದ ಧಮೇಂರ್ದ್ರ ಪ್ರಧಾನ ಅವರು ಕ್ಲೀನ್ ಚಿಟ್ ನೀಡಿದ್ದಾರೆ. ಅವರ ಹೇಳಿಕೆಯನ್ನು ನಾವು ಬಲವಾಗಿ ಖಂಡಿಸುತ್ತೇವೆ. ಸುಪ್ರೀಂಕೋರ್ಟಿನಲ್ಲಿ ಸಲ್ಲಿಸಿದ ಹಲವಾರು ಪಿಟಿಷನ್ ಗಳ ಒತ್ತಡದ ನಂತರವೇ ಎನ್‌.ಟಿ.ಎ ಮತ್ತು ಕೇಂದ್ರ ಸರ್ಕಾರಗಳು ಒಂದು ಸಮಿತಿಯನ್ನು ರಚಿಸಿದವು. 

ಈ ಚಳುವಳಿಯಲ್ಲಿ ನಿರತರಾಗಿರುವ ಎಲ್ಲ ವಿದ್ಯಾರ್ಥಿಗಳೊಂದಿಗೆ ಎಐಡಿಎಸ್‌ಓ ನಿಲ್ಲುತ್ತದೆ. ಮತ್ತು ಕೇವಲ 1563 ವಿದ್ಯಾರ್ಥಿಗಳ ಹೆಚ್ಚುವರಿ ಅಂಕಗಳನ್ನು ರದ್ದು ಮಾಡುವುದು ಮತ್ತು ಅವರಿಗೆ ಮರು-ಪರೀಕ್ಷೆ ನಡೆಸುವ ನಿರ್ಧಾರವನ್ನು ವಿದ್ಯಾರ್ಥಿ ಸಮೂಹವು ಒಪ್ಪುವುದಿಲ್ಲ. ಭ್ರಷ್ಟಾಚಾರವು ಕೇವಲ ವಿದ್ಯಾರ್ಥಿಗಳಿಗೆ ಹೆಚ್ಚುವರಿ ಅಂಕ ನೀಡಿರುವುದಕ್ಕೆ ಸೀಮಿತಗೊಂಡಿಲ್ಲ, ಇದರ ಬೇರುಗಳು ಇನ್ನೂ ಆಳವಾಗಿವೆ. ಈ ಹಿನ್ನೆಲೆಯಿಂದ, 1563 ವಿದ್ಯಾರ್ಥಿಗಳಿಗೆ ಮರು-ಪರೀಕ್ಷೆ ನಡೆಸುವುದು ಪರಿಹಾರವಲ್ಲ. ಈ ಎಲ್ಲ ಆರೋಪಗಳ ವಿರುದ್ಧ ಸಮರೋಪಾದಿಯಲ್ಲಿ ತನಿಖೆಯಾಗಬೇಕು. ಸಮರ​‍್ಕ ತನಿಖೆ ನಡೆಸದೆ ಕೌನ್ಸಿಲಿಂಗ್ ಪ್ರಕ್ರಿಯೆಯನ್ನು ಮುಂದುವರಿಸುವುದು ವಿದ್ಯಾರ್ಥಿಗಳ ಭವಿಷ್ಯವನ್ನು ಅತಂತ್ರಕ್ಕೆ ದೂಡುತ್ತದೆ ಎಂಬ ವಿಷಯವನ್ನು ಮರೆಯಬಾರದು. 


ಸುದ್ದಿ ಓದಿ