ಕರವೇ ಜಿಲ್ಲಾ ಪದಾಧಿಕಾರಿಗಳ ಮರು ನೇಮಕ, ಸದಸ್ಯತ್ವ ಅಭಿಯಾನ
ಬಳ್ಳಾರಿ 13: ಜಿಲ್ಲಾ ಪದಾಧಿಕಾರಿಗಳ ಮರು ನೇಮಕ ಹಾಗೂ ಸದಸ್ಯತ್ವ ಅಭಿಯಾನ ಮತ್ತು ನೂತನ ಕಾರ್ಯಕರ್ತರು ಸೇರೆ್ಡ ಕರ್ನಾಟಕ ರಕ್ಷಣಾ ವೇದಿಕೆ, ರಾಜ್ಯ ಉಪಾಧ್ಯಕ್ಷರಾದ ಚಾನಾಳ್ ಶೇಖರ್, ಬಳ್ಳಾರಿ ಜಿಲ್ಲಾಧ್ಯಕ್ಷರಾದ ಡಿ.ಕಗ್ಗಲ್ ಶಂಕರ್ ಇವರ ನೇತೃತ್ವದಲ್ಲಿ ನಡೆಯಿತು.
ಬಳ್ಳಾರಿ ಜಿಲ್ಲಾ ಗೌರವಾಧ್ಯಕ್ಷರಾಗಿ ಕಲ್ಲುಕಂಬ ಪಂಪಾಪತಿ, ಜಿಲ್ಲಾ ಉಪಾಧ್ಯಕ್ಷರಾಗಿ ಕೆ.ಎಂ.ಶಿವಕುಮಾರ್, ವೇಣಿವೀರಾಪುರ ಕಿಶೋರ್, ಹುಬ್ಬಳ್ಳಿ ರಾಜಣ್ಣ, ತೋಟದ ವಿರೇಶ್, ಸಂಡೂರು ತಾಲ್ಲೂಕು ಅಧ್ಯಕ್ಷರಾದ ಸತ್ಯನಾರಾಯಣ ಮಾಸ್ತಿ, ಕುರುಗೋಡು ತಾಲ್ಲೂಕು ಅಧ್ಯಕ್ಷರಾಗಿ ಗೆಣಿಕೆಹಾಳ್ ವಿರೇಶ್, ಮಹಿಳಾ ಘಟಕದ ಅಧ್ಯಕ್ಷರಾಗಿ ಶ್ರೀಮತಿ ಶಿವಮ್ಮ, ಉಪಾಧ್ಯಕ್ಷರಾದ ಭಾಗ್ಯಮ್ಮ ಇವರನ್ನು ನೇಮಕ ಮಾಡಲಾಯಿತು.
ಬಳ್ಳಾರಿ ಗ್ರಾಮಾಂತರ ವಿಧಾನಸಭಾ ಅಧ್ಯಕ್ಷರಾಗಿ ಕೆ. ಪೊಂಪನಗೌಡ, ಕುಡತಿನಿ ಹೋಬಳಿ ಅಧ್ಯಕ್ಷರಾಗಿ ಬಾವಿ ಶಿವಕುಮಾರ್, ಗ್ರಾಮಾಂತರ ಕ್ಷೇತ್ರ ಕಾರ್ಮಿಕ ಅಧ್ಯಕ್ಷರಾಗಿ ಪಿ.ಚಾಂದ್ಭಾಷ, ಬಳ್ಳಾರಿ ತಾಲ್ಲೂಕು ಉಪಾಧ್ಯಕ್ಷರಾಗಿ ಹರಗಿನಡೋಣಿ ಚಕ್ರವರ್ತಿ, ಕುರುಗೋಡು ತಾಲ್ಲೂಕು ಉಪಾಧ್ಯಕ್ಷರಾಗಿ ಗುತ್ತಿಗನೂರು ಮನುಗೌಡ, ಅಭಿಲಾಷ್ಗೌಡ, ಯುವ ಅಧ್ಯಕ್ಷರಾಗಿ ನಂದಿಶ್ಕುಮಾರ್, ಸಾಮಾಜಿಕ ಜಾಲತಾಣದ ಜಿಲ್ಲಾ ಸಂಚಾಲಕರಾಗಿ ಶ್ರೀಧರಶೆಟ್ಟಿ ನೇಮಕಗೊಂಡರು.
ಕುರುಗೋಡು ತಾಲೂಕು ಉಪಾಧ್ಯಕ್ಷರು ಸಿದ್ದಮ್ಮನಹಳ್ಳಿ ಬಸವರಾಜ, ಗ್ರಾಮಾಂತರ ಕಾರ್ಯದರ್ಶಿ ಡಿ.ಅಂಜಿನೇಯ್ಯ, ಕುರುಗೋಡು ತಾಲೂಕು ಪ್ರಧಾನ ಕಾರ್ಯದರ್ಶಿ ಮರಿಸ್ವಾಮಿ, ನಗರ ಘಟಕ ಅಧ್ಯಕ್ಷರು ಶಿವಕುಮಾರ್.ಕೆ, ಬಳ್ಳಾರಿ ಗ್ರಾಮಾಂತರ ವಿದ್ಯಾರ್ಥಿ ಘಟಕ ಅಧ್ಯಕ್ಷ ಶಿವಮೂರ್ತಿ, ಕೊಳಗಲ್ಲು ಗ್ರಾಮ ಶಾಖೆ ಅಧ್ಯಕ್ಷ ಎ.ಕೆ. ರಾಜಶೇಖರ್ ಮುಂತಾದವರು ಉಪಸ್ಥಿತರಿದ್ದರು.