ಮರು ಪಿಯೂ ಫಲಿತಾಂಶ ಸಲ್ಮಾನ ಉತ್ತಮ ಸಾಧನೆ
ಮಹಾಲಿಂಗಪುರ; ವಿದ್ಯಾರ್ಥಿಯೋರ್ವ 2020-21 ನೇ ಸಾಲಿನ ದ್ವಿತಿಯ ಪಿಯುಸಿ ಪರೀಕ್ಷೆಯಲ್ಲಿ 537 (ಶೇ.89.5) ತೇರ್ಗಡೆ ಹೊಂದಿ, ಅಸಮರ್ಪಕ ಅಂಕಗಳು ದೊರೆತಿರುವುದರಿಂದ ಫಲಿತಾಂಶವನ್ನು ತಿರಸ್ಕರಿಸಿ ಮರು ಲಿಖಿತ ಪರೀಕ್ಷೆ ಬರೆಯುವುದರೊಂದಿಗೆ 569 (ಶೇ.94.8) ಅಂಕಗಳಿಸುವ ಮೂಲಕ ವಿಶೇಷ ಸಾಧನೆಗೈದಿದ್ದಾನೆ.
ರಬಕವಿ ಬನಹಟ್ಟಿ ತಾಲೂಕಿನ ಚಿಮ್ಮಡ ಗ್ರಾಮದ ಸಲ್ಮಾನ ಇಲಾಹಿ ಜಮಖಂಡಿಯೇ ಈ ವಿಶೇಷ ಸಾಧನೆಗೈದ ವಿದ್ಯಾರ್ಥಿ. ಈತ ಬನಹಟ್ಟಿಯ ಎಸ್ಆರ್ಎ ಪದವಿಪೂರ್ವ ವಿದ್ಯಾಲಯದ ವಾಣಿಜ್ಯ ವಿಭಾಗದ ಆಂಗ್ಲ ಮಾದ್ಯಮದಲ್ಲಿ ವಿದ್ಯಾರ್ಜನೆ ಮಾಡಿರುವ ಸಲ್ಮಾನ ಬೆಳಿಗ್ಗೆ ದಿನಪತ್ರಿಕೆ ಹಂಚಿ, ಪತ್ರಿಕಾ ವರದಿಗಾರರಾಗಿರುವ ತಂದೆಯ ವ್ಯಾಪಾರದಲ್ಲಿಯೂ ಸಹಕರಿಸುತ್ತಾನೆ.
ಈ ವಿಧ್ಯಾರ್ಥಿ ಕಠಿಣ ಪರಿಶ್ರಮದೊಂದಿಗೆ ದ್ವಿತಿಯ ಪಿಯುಸಿ ಪರೀಕ್ಷೆ ಎದುರಿಸಲು ತಯಾರಿ ನಡೆಸುತ್ತಿರುವಾಗಲೇ ಬಂದೆರಗಿದ ಕೊರೋನಾ ಮಹಾಮಾರಿಯ ಎರಡನೇ ಅಲೆಯಿಂದಾಗಿ ಪದವಿಪೂರ್ವ ಶಿಕ್ಷಣ ಇಲಾಖೆ ಪರಿಕ್ಷೆಯನ್ನೇ ರದ್ದುಗೊಳಿಸಿ, ಎಲ್ಲ ವಿದ್ಯಾರ್ಥಿಗಳ ಹಿಂದಿನ ವರ್ಗಗಳಲ್ಲಿ ಪಡೆದ ಅಂಕಗಳ ಆಧಾರದ ಮೇಲೆ ತೇರ್ಗಡೆಗೊಳಿಸುವ ನಿರ್ಧಾರ ಪ್ರಕಟಿಸಿತು ಮತ್ತು ಫಲಿತಾಂಶ ತೃಪ್ತಿ ನೀಡದಿದ್ದರೆ ಅಂತಹವರು ಲಿಖಿತ ಪರೀಕ್ಷೆ ಬರೆಯುವ ಅವಕಾಶವನ್ನೂ ಸಹಿತ ನೀಡಿತ್ತು.
ಪದವಿಪೂರ್ವ ಶಿಕ್ಷಣ ಇಲಾಖೆ ನೀಡಿದ್ದ 600ಕ್ಕೆ 537 (ಶೇ.89.5) ಅಂಕಗಳಿಗೆ ತೃಪ್ತನಾಗದ ಸಲ್ಮಾನ ತನ್ನ ಫಲಿತಾಂಶವನ್ನು ತಿರಸ್ಖರಿಸಿ ಪರೀಕ್ಷೆ ಎದುರಿಸುವುದಾಗಿ ಇಲಾಖೆಗೆ ಮನವಿ ಮಾಡಿ, ಇದೇ ಅಗಷ್ಟ 22 ರಿಂದ ಸೆ.4 ರವರೆಗೆ ನಡೆದ ದ್ವಿತೀಯ ಪಿಯೂಸಿ ಚಾಲೆಂಜಿಂಗ್ ಪರೀಕ್ಷೆಯಲ್ಲಿ 569 (ಶೇ.94.8) ಅಂಕಗಳಿಸುವ ಮೂಲಕ ಗೆಲುವಿನ ನಗೆ ಬೀರಿದ್ದಾನೆ.
ನಾನು ಈಗ ಮರು ಪರೀಕ್ಷೆ ಬರೆದಿರುವ ಪ್ರಕಾರ ನನಗೆ ರಾಜ್ಯಶಾಸ್ತ್ರ, ಹಾಗೂ ಅರ್ಥಶಾಸ್ತ್ರ ವಿಷಯಗಳಲ್ಲಿ ಇನ್ನೂ ಹೆಚ್ಚಿನ ಅಂಕಗಳು ಬರಬೇಕಾಗಿದ್ದವು. ಈ ಆಶಾಭಾವನೆಯಲ್ಲಿ ಸಂಬಂಧಿಸಿದ ಅಧ್ಯಾಪಕರ ಮಾರ್ಗದರ್ಶನ ಪಡೆದು ಸದರಿ ವಿಷಯಗಳ ಮರು ಮೌಲ್ಯಮಾಪನ ಮಾಡಿಸುವುದಾಗಿ ತಿಳಿಸಿ, ಕಲಾ ವಿಭಾಗದಲ್ಲಿ ಪದವಿ ಪಡೆದು ಸ್ಪರ್ದಾತ್ಮಕ ಪರೀಕ್ಷೆಗಳಲ್ಲಿ ಭಾಗವಹಿಸಿ ಉನ್ನತ ಹುದ್ದೆ ಗಳಿಸುವ ಇಚ್ಛೆ ಇರುವುದಾಗಿಯೂ ಸಲ್ಮಾನ್ ತಿಳಿಸಿದ್ದಾನೆ.
ರಾಜ್ಯಾದ್ಯಂತ ಪ್ರಸಕ್ತ ಪಿಯೂ ಪರೀಕ್ಷೆ ಬರೆದಿರುವ ವಿದ್ಯಾರ್ಥಿಗಳಲ್ಲಿ ಶೇ. 71 ರಷ್ಟು ವಿದ್ಯಾರ್ಥಿಗಳು ಅನುತೀರ್ಣಗೊಂಡಿರುವ ಮಾಹಿತಿಯಿದ್ದು ನನ್ನ ಮಗ 32ರಷ್ಟು ಹೆಚ್ಚಿನ ಅಂಕಗಳನ್ನು ಪಡೆಯುವ ಮೂಲಕ ತೇರ್ಗಡೆ ಹೊಂದಿರುವುದು ನನಗೆ ಅತೀವ ಸಂತಸವಾಗಿದೆ. ಭವಿಷ್ಯದ ಅವನ ಕನಸಿಗೆ ಪರಿವಾರ ಎಲ್ಲ ತರಹದ ಸಹಕಾರ ನೀಡುತ್ತದೆ.
ತಂದೆ, ಇಲಾಹಿ ಜಮಖಂಡಿ ಚಿಮ್ಮಡ ಗ್ರಾಮದ ವರದಿಗಾರರು.