ರಾಯಬಾಗ: ಶಿಕ್ಷಕ ಧರ್ಮರಾಜ ಕೋಳಿ ಸೇವಾ ನಿವೃತ್ತಿ; ಸತ್ಕಾರ
ರಾಯಬಾಗ 19 : ತಾಲೂಕಿನ ಹಿಡಕಲ ಗ್ರಾಮದ ಕವಿರತ್ನ ಕಾಳಿದಾಸ ಕನ್ನಡ ಮಾಧ್ಯಮ ಪ್ರಾಥಮಿಕ ಶಾಲೆಯ ಶಿಕ್ಷಕ ಧರ್ಮರಾಜ ಕೋಳಿ ಅವರು ಸೇವಾ ನಿವೃತ್ತಿ ಹೊಂದಿದ ಹಿನ್ನೆಲೆಯಲ್ಲಿ, ಶಾಲಾ ಶಿಕ್ಷಕರು ಹಾಗೂ ಗಣ್ಯರು ಕೋಳಿ ದಂಪತಿಯನ್ನು ಶನಿವಾರ ಸತ್ಕರಿಸಿದರು. ಸಮಾರಂಭದಲ್ಲಿ ಸಾಹಿತಿ ಟಿ.ಎಸ್. ವಂಟಗೂಡಿ, ಶಿಕ್ಷಕರಾದ ಎಂ.ಐ. ಪಾಟೀಲ, ಸಿ.ಎಸ್. ಮಾಂಗ, ಟಿ.ಆರ್. ಕೋಳಿ, ಬಿ.ಎಲ್. ಘಂಟಿ, ಗಜಾನಂದ ಕೊಕಟನೂರ, ಶ್ರೀಕಾಂತ ರಾಯಮಾನೆ, ಪ್ರಧಾನ ಗುರುಗಳಾದ ಬೀರ್ಪ ತಡಸಲೂರು, ಸಿದ್ದಮ್ಮ ತಡಸಲೂರು, ಲಕ್ಷ್ಮಿ ಮಾಂಗ, ವಿನಯ ತಡಸಲೂರು, ಅಪ್ಪಾಸಾಬ ಯಲಗುದ್ರಿ, ಸದಾಶಿವ ಬಾಗಿ, ಆರತಿ ಕಾಂಬಳೆ ಸೇರಿದಂತೆ ಹಲವರು ಉಪಸ್ಥಿತರಿದ್ದರು.