ರಾಯಬಾಗ

ಹಿರಿಯ ನಾಗರಿಕರು ಸೌಲಭ್ಯ ಪಡೆಯಲಿ

ಹಿರಿಯ ನಾಗರಿಕರು ಸೌಲಭ್ಯ ಪಡೆಯಲಿ


ರಾಯಬಾಗ 01: ಹಿರಿಯ ನಾಗರಿಕರಿಗಾಗಿ ಸರ್ಕಾರ ಜಾರಿಗೊಳಿಸಿರುವ ಕಾನೂನು ಹಾಗೂ ವಿವಿಧ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಂಡು ಗೌರವಯುತ ಜೀವನ ನಡೆಸಬೇಕು ಎಂದು 2ನೇ ಹೆಚ್ಚುವರಿ ದಿವಾಣಿ ನ್ಯಾಯಾಧೀಶ ಸುಖೇಂದ್ರ ಪಿ.ಎಂ. ಹೇಳಿದರು. ಪಟ್ಟಣದ ತಹಸೀಲ್ದಾರ ಕಾರ್ಯಾಲಯದ ಸಭಾಂಗಣದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ ಹಾಗೂ ತಾಲೂಕು ಆಡಳಿತದ ವತಿಯಿಂದ ಗುರುವಾರ ಆಯೋಜಿಸಿದ್ದ ಹಿರಿಯ ನಾಗರಿಕರ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಸಮಾಜ ಹಾಗೂ ಕುಟುಂಬದವರು ಹಿರಿಯ ನಾಗರಿಕರನ್ನು ಗೌರವದಿಂದ ಕಾಣಬೇಕು ಎಂದರು. 1ನೇ ಹೆಚ್ಚುವರಿ ದಿವಾಣಿ ನ್ಯಾಯಾಧೀಶೆ ನಿವೇದಿತಾ ಬನ್ನಾಳ, ತಹಸೀಲ್ದಾರ ಮಹಾದೇವ ಸನಮುರಿ, ವಕೀಲರ ಸಂಘದ ಅಧ್ಯಕ್ಷ ಕೆ.ಆರ್‌. ಕೋಟಿವಾಲೆ, ಉಪಾಧ್ಯಕ್ಷ ಕೆ.ಎಲ್‌. ಕೆರೂರೆ, ವಿ.ಎಂ. ಗಲಗಲಿ, ಬಿ.ಕೆ. ಶಿಂಗಾಡಿ ಸೇರಿದಂತೆ ಹಿರಿಯ ನಾಗರಿಕರು ಹಾಗೂ ತಹಸೀಲ್ದಾರ ಕಾರ್ಯಾಲಯದ ಸಿಬ್ಬಂದಿ ಉಪಸ್ಥಿತರಿದ್ದರು. 


ಸುದ್ದಿ ಓದಿ