ಅಂಕಸಾಪೂರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಎಸ್ಡಿಎಂಸಿ ಅಧ್ಯಕ್ಷರಾಗಿ ರವಿ ವಡ್ಡರ್ ಆಯ್ಕೆ
ರಾಣೆಬೆನ್ನೂರು, ಆ.5: ತಾಲೂಕಿನ ಅಂಕಸಾಪೂರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ 2026-27ನೇ ಸಾಲಿನ ಶಾಲಾ ಅಭಿವೃದ್ಧಿ ಮತ್ತು ಮೇಲ್ವಿಚಾರಣಾ ಸಮಿತಿ (ಎಸ್ಡಿಎಂಸಿ) ಅಧ್ಯಕ್ಷರು ಹಾಗೂ ಪದಾಧಿಕಾರಿಗಳ ಆಯ್ಕೆ ಸಭೆ ನಡೆಯಿತು.
ಸಭೆಯಲ್ಲಿ ಗ್ರಾಮದ ರವಿ ಯಲ್ಲಪ್ಪ ವಡ್ಡರ್ ಅವರನ್ನು ಸರ್ವಾನುಮತದಿಂದ ಎಸ್ಡಿಎಂಸಿ ಅಧ್ಯಕ್ಷರಾಗಿ ಆಯ್ಕೆ ಮಾಡಲಾಯಿತು. ಉಪಾಧ್ಯಕ್ಷರಾಗಿ ಶ್ರೀಧರ್ ನಾಗಪ್ಪ ನಡುವಿನಮನಿ ಹಾಗೂ ಗಿರಿಜಮ್ಮ ಕುಮಾರ ಪಾಟೀಲ ಆಯ್ಕೆಯಾದರು.
ಸಮಿತಿಯ ಸದಸ್ಯರಾಗಿ ಶಿವಯೋಗಿ ಪಾಟೀಲ, ನಿಂಗಪ್ಪ ಬಸಪ್ಪ ಕಾಮಜ್ಜಿ, ಶಿವಾನಂದ ಅಡವೇರ, ದುರುಗಪ್ಪ ಬಂಡಿವಡ್ಡರ್, ಬೀರ್ಪ ನಡುವಿನಮನಿ, ಶ್ರೀಕಾಂತ ನಡುವಿನಮನಿ, ನಾಗರಾಜ ಬೀರ್ಪ ನೂಕಾಪೂರ, ರೂಪಾ ನಡುವಿನಮನಿ, ಗೌರವಮ್ಮ ಎಸ್. ನಡುವಿನಮನಿ, ಸೌಭಾಗ್ಯ ಮರದಾನಪ್ಪನವರ್, ಲಕ್ಷ್ಮೀ ಟಿ. ದೊಡ್ಡಮನಿ, ಕೊಟ್ರಮ್ಮ ಪಾಟೀಲ, ಸಾವಿತ್ರಿ ಕರಡಿ, ಮಂಜುಳಾ ನಡುವಿನಮನಿ ಹಾಗೂ ನಿಂಗಮ್ಮ ಪೂರದ ಅವರು ಆಯ್ಕೆಯಾಗಿದ್ದಾರೆ.
ನೂತನ ಅಧ್ಯಕ್ಷರು ಹಾಗೂ ಪದಾಧಿಕಾರಿಗಳಿಗೆ ಗ್ರಾಮದ ಗಣ್ಯರು, ವಿವಿಧ ಸಂಘ-ಸಂಸ್ಥೆಗಳ ಮುಖಂಡರು ಹಾಗೂ ಸಾರ್ವಜನಿಕರು ಅಭಿನಂದನೆ ಸಲ್ಲಿಸಿ, ಶಾಲೆಯ ಅಭಿವೃದ್ಧಿಗೆ ಉತ್ತಮ ಕಾರ್ಯನಿರ್ವಹಣೆ ಮಾಡುವಂತೆ ಶುಭ ಹಾರೈಸಿದರು.