ರೇಷನ್ ಕಾರ್ಡ್ ಗೋಳು ಕೇಳುವವರ್ಯಾರು?
ಒಂದು ವರ್ಷದಿಂದ ವಿತರಣೆಯಾಗದ ಪಡಿತರ ಕಾರ್ಡ್: ವಿತರಣೆ ಆರಂಭ ಮಾಡಿ ಬಡವರಿಗೆ ಅನ್ನಭಾಗ್ಯ ನೀಡಿ
ವರದಿ : ಹನಮಂತ ನಾವಿ
ಮಹಾಲಿಂಗಪುರ 09 : ಕಳೆದ ಒಂದು ವರ್ಷದಿಂದ ರೇಷನ್ ಕಾರ್ಡ್ ವಿತರಣೆ ಮಾಡದೇ ಬಡವರ ಬಾಯಿಗೆ ಲಾಡು ಕೊಟ್ಟಿರುವ ಸರ್ಕಾರ ನಿಜವಾದ ಬಡವರ ಪರ ನಿಲ್ಲುವು ಪ್ರಾಮಾಣಿಕ ಪ್ರಯತ್ನ ಮಾಡಬೇಕು ತಕ್ಷಣ ರೇಷನ್ ಕಾರ್ಡ್ ವಿತರಣೆ ಆರಂಭ ಮಾಡಬೇಕು ಸರ್ಕಾರ.
ಯಾವುದೇ ವ್ಯಕ್ತಿಯಾದರೂ ಆತ ಒಂದು ದೇಶದ ಪ್ರಜೆ ಎಂದು ನಿರೂಪಿಸಿಕೊಳ್ಳಲು ಕೆಲವೊಂದು ದಾಖಲೆಗಳನ್ನು ಹೊಂದಿರಬೇಕಾಗುತ್ತದೆ. ನಮ್ಮ ದೇಶದಲ್ಲಿ ಆಧಾರ್ ಕಾರ್ಡ್, ಪಾನ್ ಕಾರ್ಡ್, ಚಾಲನಾ ಪರವಾನಿಗೆ, ಪಾಸ್ಪೋರ್ಟ್ ಹೀಗೆ ಹಲವು ರೀತಿಯ ದಾಖಲೆಗಳನ್ನು ಇಟ್ಟುಕೊಂಡಿರಬೇಕಾಗುತ್ತದೆ.ಇವುಗಳ ಸಾಲಿಗೆ ಪಡಿತರ ಚೀಟಿಯೂ ಸೇರುತ್ತದೆ. ಪಡಿತರ ಚೀಟಿಯು ಇದೀಗ ಕೇವಲ ದಾಖಲೆ ಪಾತ್ರವಾಗಿ ಉಳಿದಿಲ್ಲ ಸರ್ಕಾರದ ಹಲವು ಯೋಜನೆಗಳಿಗೆ ಮಾನದಂಡವಾಗಿಯೂ ಬಳಕೆಯಾಗುತ್ತಿದೆ.ಇಂದು ಪಡಿತರ ಚೀಟಿಯೂ ಬಹಳ ಪ್ರಮುಖ ಸ್ಥಾನವನ್ನು ಪಡೆದುಕೊಂಡಿದೆ. ಇದೀಗ ರಾಜ್ಯ ಸರ್ಕಾರ ಹೊಸ ಪಡಿತರ ಚೀಟಿ ನೀಡುವುದು ಯಾವಾಗ್ ಎಂದು ಜನ ಬಕ ಪಕ್ಷಿಯಂತೆ ಕಾಯುತ್ತಾ ಕುಳಿತ್ತಿದ್ದಾರೆ.
ರಾಜ್ಯ ಸರ್ಕಾರಕ್ಕೆ ಹೊಸ ರೇಷನ್ ಕಾರ್ಡ್ ವಿತರಣೆ ದೊಡ್ಡ ತಲೆ ನೋವಾಗಿದೆ. ಒಂದು ಕಡೆ ಹೊಸ ರೇಷನ್ ಕಾರ್ಡ್ ವಿತರಣೆ ಮಾಡಿ ಎಂದು ಫಲಾನುಭವಿಗಳು ಆಗ್ರಹಿಸುತ್ತಿದ್ದರೆ, ಇನ್ನೊಂದು ಕಡೆ ಅನರ್ಹರು ಕೂಡ ಪಡಿತರ ಚೀಟಿ ಪಡೆದುಕೊಂಡು ಇಷ್ಟು ದಿನ ಅದರ ಪ್ರಯೋಜನ ಪಡೆದಿದ್ದಾರೆ ಅಂತವರನ್ನು ಗುರುತಿಸಿ ಆವರ ಕಾರ್ಡ್ ರದ್ದು ಮಾಡುವುದು ಕೂಡ ಸರ್ಕಾರಕ್ಕೆ ದೊಡ್ಡ ತಲೆ ನೋವು ಆಗಿದೆ.ಈಗಾಗಲೇ ರೇಷನ್ ಕಾರ್ಡ್ ರದ್ದು ಕಾರ್ಯ ಆರಂಭವಾಗಿದ್ದು. ಲಕ್ಷಾಂತರ ಕಾರ್ಡ್ ರದ್ದು ಪಡಿಸಲಾಗಿದೆ,ಇದೀಗ ಹೊಸ ರೇಷನ್ ಕಾರ್ಡ್ ಅರ್ಜಿಗಳನ್ನು ಪರೀಶೀಲಿಸಿ ಸದ್ಯದಲ್ಲೇ ವಿತರಣೆ ಮಾಡಲಾಗುವುದು ಎಂದು ಆಹಾರ ಸಚಿವ ಕೆ ಹೆಚ್ ಮುನಿಯಪ್ಪ ತಿಳಿಸಿದ್ದಾರೆ.
ಹೊಸ ಕಾರ್ಡ್ : ಬಡವರಿಗೆ ನ್ಯಾಯ ಸಿಗುವುದು ಯಾವಾಗ ?ಎಲ್ಲ ಸರ್ಕಾರಗಳು ಬಡವರ ಹೆಸರಲ್ಲಿ ಗಂಟೆ ಗಟ್ಟಲೆ ಭಾಷಣ ಮಾಡಿ ವೋಟ್ ಪಡೆದು ಅಧಿಕಾರ ಹಿಡಿದು ಕುಳಿತುಕೊಂಡಿವೆ, ಆದರೆ ಯಾವುದೇ ಸರ್ಕಾರ ಬಡವರ ಬಗ್ಗೆ ನಿಜವಾದ ಕಾಳಜಿ ತೋರಿಸುತ್ತಿಲ್ಲ, ಆದರೆ ಭಾರತ್ ಬಡತನ ಕಡಿಮೆ ಆಗಿದೆ ಎಂದು ಬೊಬ್ಬೆ ಹೊಡೆಯುತ್ತಿವೆ ಆದರೆ ನಿಜವಾದ ಸ್ಥಿತಿನೇ ಬೇರೆ ಇದೇ ಇನ್ನು ಬಡವನು ಬಡವನಾಗಿಯೇ ಉಳಿದಿದ್ದಾನೆ. ಹೊಸ ಹೊಸ ಉದ್ದಿಮೆಗಳು ಹುಟ್ಟಬೇಕು ದುಡುಯುವ ಕೈಗಳಿಗೆ ಉದ್ಯೋಗ ಒದಗಿಸದ ಹೊರತು ಯಾವ ಬಡವನು ಶ್ರೀಮಂತನಾಗಲು ಸಾಧ್ಯವಿಲ್ಲ. ಆದ್ದರಿಂದ ನಿಜವಾದ ಫಲಾನುಭವಿಗಳನ್ನು ಗುರ್ತಿಸಿ ಅವರಿಗೆ ಮೊದಲು ಎರಡು ಹೊತ್ತು ಊಟ ಸಿಗುವ ಹಾಗೆ ರೇಷನ್ ಕಾರ್ಡ್ ಕೊಡುವ ಕಾರ್ಯ ತಕ್ಷಣ ಆರಂಭ ಮಾಡಬೇಕು.ಎಂದು ರಾಜ್ಯದ ಜನರ ಒಕ್ಕೊರಲಿನ ಬೇಡಿಕೆಯಾಗಿದೆ.
ಆಹಾರ ಸಚಿವರ ಹೇಳಿಕೆ : ಇತೀಚೆಗೆ ನಡೆದ ಬಜೆಟ್ ಅಧಿವೇಶನದಲ್ಲಿ ಆಹಾರ ಸಚಿವ ಕೆ ಹೆಚ್ ಮುನಿಯಪ್ಪ ಮಾತನಾಡಿ ರಾಜ್ಯದಲ್ಲಿ ಪಡಿತರ ಚೀಟಿಗಾಗಿ ಸಲ್ಲಿಸಿರುವ ಅರ್ಜಿಗಳನ್ನು ಇದೇ ಮಾರ್ಚ್ 31 ರೊಳಗಾಗಿ ಪರೀಶೀಲನೆ ನಡೆಸಿ ಏಪ್ರಿಲ್ 1 (ಮೂರ್ಖರ ದಿನ )ರಿಂದ ವಿತರಣೆ ಮಾಡುತ್ತೇವೆ ಎಂದು ಹೇಳಿದ್ದಾರೆ. ವಿಧಾನ ಸಭೆಯಲ್ಲಿ ಮಾತನಾಡಿ ವಿಧಾನ ಸಭೆ ಚುನಾವಣೆ ಬಂತು ಎಂದು ಹಿಂದಿನ ಸರ್ಕಾರ ಸುಮಾರು 2.95 ಲಕ್ಷ ಕಾರ್ಡಗಳನ್ನು ವಿತರಿಸದೆ ಬಾಕಿ ಉಳಿಸಿಕೊಂಡಿತ್ತು. ಆ ಕಾರ್ಡಗಳನ್ನು ಮತ್ತೆ ಪರೀಶೀಲನೆ ಮಾಡಿ ಎಪಿಎಲ್ ಯಾವುದು ಬಿಪಿಎಲ್ ಯಾವುದು ಎಂದು ಪರೀಶೀಲನೆ ನಡೆಸಿ ಬಂದ ತಕ್ಷಣ ವಿತರಣೆ ಮಾಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳುತ್ತೇವೆ ಎಂದು ಹೇಳಿದ್ದಾರೆ.
ಮೆಡಿಕಲ್ ಪೆಸಿಲಿಟಿಗಾಗಿ ಯಾರು ಅರ್ಜಿ ಕೊಟ್ಟಿದ್ದಾರೆ ಅಂತವರಿಗೆ ತಕ್ಷಣ ಕಾರ್ಡ್ ವಿತರಿಸಲು ಸೂಚಿಸಿದ್ದೇವೆ. ಉಳಿದ ಎಲ್ಲ ಕಾರ್ಡಗಳನ್ನು ಮುಂದಿನ ಮಾರ್ಚ್ 31 ರೊಳಗೆ ಪರೀಶೀಲನೆ ಮಾಡಿ ವಿತರಿಸುವ ತೀರ್ಮಾನ ಕೈಗೊಂಡಿದ್ದೇವೆ. ಜೊತೆಗೆ ಆದೇಶವನ್ನು ಕೊಟ್ಟಿದ್ದೇವೆ ಎಂದು ಹೇಳಿದಾರೆ.
ಸಧ್ಯ ಸರ್ಕಾರ ಈ ಬಗ್ಗೆ ಚಕಾರ ಎತ್ತಿಲ್ಲ ಯಾಕೆಂದ್ರೆ ಕಳೆದ್ ಒಂದು ವರ್ಷದಿಂದ್ ಲಕ್ಷಾಂತರ ಅರ್ಜಿಗಳು ಸರ್ಕಾರದ ಬಳಿ ಸಲಿಕೆಯಾಗಿದ್ದು, ಇವುಗಳ ಪರೀಶೀಲಿಸಿ ಅರ್ಹ ಅಭ್ಯರ್ಥಿಗಳಿಗೆ ರೇಷನ್ ಕಾರ್ಡ್ ವಿತರಣೆ ಆರಂಭ ಮಾಡಿ ಬಡವರ ಬಗ್ಗೆ ಕಾಳಜಿ ತೋರಿ ಪುಣ್ಯ ಕಟ್ಟಿಕೊಳ್ಳಬೇಕು.
ಸರ್ಕಾರ ಹೋಸ ರೇಷನಗಳ ಪಾಲೀಸಿ ಮೇಟರ ಬಂದ ಮಾಡಿದೆ ಆದ ಕಾರಣ ಬಹಳ ದಿನಗಳಿಂದ ಹೊಸ ರೇಷನ ಕಾರ್ಡಗಳು ಜನರಿಗೆ ಸಿಗುತ್ತಿಲ್ಲ ಸರ್ಕಾರ ಆದಷ್ಟು ಬೇಗ ಚಾಲು ಮಾಡಿದರೆ,ಎಲ್ಲರಿಗೂ ಅನುಕೂಲವಾಗುತ್ತದೆ. ಈಗ ಬರೀ ರೇಷನ ಕಾರ್ಡ ತಿದ್ದು ಪಡಿ ಮಾತ್ರ ಚಾಲ್ತಿಯಲ್ಲಿದೆ.
ಗೀರೀಶ ಸ್ವಾಥಿ,
ತಹಶಿಲ್ದಾರ ರಬಕವಿ-ಬನಹಟ್ಟಿ
ಕಳೆದು ಒಂದು ವರ್ಷಕಿಂತಲೂ ಹೆಚ್ಚುದಿನಗಳು ಕಳೆದರು ಬಡವರಿಗೆ ಹೊಸ ರೇಷನ ಕಾರ್ಡ ಸಿಗುತ್ತಿಲ್ಲ, ಯಾವಾಗಕೇಳಿದರು ಸೈಟ ಚಾಲುಇಲ್ಲ, ಈಗ ಬರುತ್ತೆ ಆಗ ಬರುತ್ತೆ, ಎಂದು ಹೇಳುತ್ತಲೆ ಇದ್ದಾರೆ. ಆಧರೆ ನಮ್ಮ ಅಂಗಡಿಗಳಿಗೆ ಬಡಜನರು ಬರುತ್ತಲೆ ಇದ್ದಾರೆ. ರೇಷನ ಕಾರ್ಡ ಸೈಟ್ ಚಾಲು ಇಲ್ಲದಿರುವಾಗ ನಾವೇನು ಮಾಡೋದು ಸರ್. ಜನ ನಮ್ಮನ್ನು ಬಯ್ಯುತ್ತಲೆ ಹೋಗುತ್ತಿದ್ದಾರೆ. ಬಡವರ ಕಷ್ಟ ಕೇಳರಾ್ಯರು.
ಮುನ್ನಾ, ಮಾಲೀಕರು ಝರಾಕ್ಸ ಅಂಗಡಿ, ರೇಷನ ಕಾರ್ಡ ಆನ್ ಲೈನ ಸೇಂಟರ ಮಹಾಲಿಂಗಪುರ.
ಈ ವಿಷಯ ನನಗೂ ತಿಳಿದಿದೆ, ಕಾರಣ ಈ ವಿಷಯಕ್ಕೆ ಸಂಬಂದಿಸಿದ ಹಾಗೆ ಮೇಲಾಧಿಕಾರಿಗಳ ಜೋತೆ ಮತ್ತು ಸರ್ಕಾರ ಮಟ್ಟದಲ್ಲಿ ಆದಷ್ಟು ಬೇಗ ರೇಷನ ಕಾರ್ಡ ವಿತರಣೆಯಾಗ ಬೇಕು ಎನ್ನುವ ನಿಟ್ಟಿನಲ್ಲಿ ಇಲಾಖೆಗಳಿಗೆ ಲೇಟರ ಕಳಿಸಲಾಗಿದೆ. ಆದಷ್ಟು ಬೇಗ ಹೋಸ ರೇಷನ ಕಾರ್ಡ ಚಾಲು ಮಾಡಿಸಲು ಪ್ರಯತ್ನ ಮಾಡುತ್ತೇನೆ.
ಸಿದ್ದು ಕೊಣ್ಣೂರ.ಕಾಂಗ್ರೆಸ್ ಮುಖಂಡ ಮಹಾಲಿಂಗಪುರ.
ಮೊನ್ನೆ ಅಧಿವೇಷನಲ್ಲಿಯೇ ಒಂದು ತಿಂಗಳ ಒಳಗೆ ಹೊಸ ರೇಷನ ಕಾರ್ಡ ಕೊಡುವುದಾಗಿ ಹೇಳಿದ್ದಾರೆ. ಯಾವುದನ್ನು ಕೊಡುತ್ತಿಲ್ಲ, ಸರಿಯಾದ ವ್ಯೆವಸ್ಥೆಯಿಲ್ಲ, ಅನುದಾನ ಇಲ್ಲ, ಸರ್ಕಾರದಲ್ಲಿ ದುಡ್ಡು ಇಲ್ಲ, ಕಾಂಟ್ರೇಕ್ಟರ ಬಿಲ್ ನೀಡುತ್ತಿಲ್ಲ, ಒಟ್ಟಿನಲ್ಲಿ ಈ ಸರ್ಕಾರದ ಆಡಳಿತ ಸರಿಯಿಲ್ಲ, ಆದಷ್ಟು ಬೇಗ ಹೊಸ ರೇಷನ ಕಾರ್ಡಗಳನ್ನು ನೀಡಲು ಪ್ರಾರಂಭಿಸುವಂತೆ ಇನ್ನೋಮ್ಮೆ ಸರ್ಕಾರದ ಮೇಲೆ ಒತ್ತಡ ಹೇರುತ್ತೇನೆ.
ಸಿದ್ದು ಕ ಸವದಿ. ಶಾಸಕರು.ತೇರದಾಳ ಮತ ಕ್ಷೇತ್ರ.