ನ.18 ರಂದು ರಘುನಾಥ ಪ್ರಿಯ ಸಾಧು ಮಹಾರಾಜರ ರಥೋತ್ಸವ.
ಮಹಾಲಿಂಗಪುರ 17 : ಚಿಮ್ಮಡ ಗ್ರಾಮದ ರಘುನಾಥ ಪ್ರೀಯ ಸಾಧು ಮಹಾರಾಜರ ಜಾತ್ರಾ ಮಹೋತ್ಸವ ನ.18 ಶನಿವಾರದಿಂದ ಎರಡು ದಿನಗಳ ಕಾಲ ವಿಜ್ರಂಬನೆಯಿಂದ ಜರುಗಲಿದ್ದು ಜಾತ್ರೆಯ ನಿಮಿತ್ಯ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು, ಹಾಗೂ ರಥೋತ್ಸವ ನಡೆಯಲಿದೆ.
ಶನಿವಾರ ಮುಂಜಾನೆ 6 ಘಂ.ಗೆ ನಡೆಯುವ ವಿಶೇಷ ಪೂಜೆಯೊಂದಿಗೆ ಆರಂಭಗೊಳ್ಳಲಿರುವ ಜಾತ್ರಾ ಮಹೋತ್ಸವದಲ್ಲಿ ಮಠದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ, ಮದ್ಯಾಹ್ನ ಮಹಾ ಪ್ರಸಾದ ಸಂಜೆ 5 ಘಂ.ಗೆ ನಡೆಯುವ ರಥೋತ್ಸವವು ಗ್ರಾಮದ ಪ್ರಮುಖ ಬೀದಿಗಳ ಮೂಲಕ ಗ್ರಾಮದ ತುಂಬ ಸಂಚರಿಸಲಿದೆ.
ಮಹಾರಾಷ್ಟ್ರದ ಭಕ್ತವೃಂದದಿಂದ ಪಾರಾಯಣ ಭಕ್ತಿಗೀತೆಗಳ ಗಾಯನ ಕಾರ್ಯಕ್ರಮ ನಡೆಯಲಿದ್ದು, ರಾತ್ರಿ ಮಠದ ತೀರ್ಥ ಬಾವಿಯ ನೀರಿನಲ್ಲಿಯೂ ರಥ ಎಳೆಯುವ ಕಾರ್ಯಕ್ರಮ ಜರುಗಲಿದೆ ಎಂದು ಶ್ರೀ ಜನಾರ್ಧನ ಮಹಾರಾಜರು ತಿಳಿಸಿದ್ದಾರೆ.
ಸಾಂಸ್ಕ್ರತಿಕ ಉತ್ಸವ; ಅರುಣೋದಯ ಗ್ರಾಮಿನಾಭಿವೃದ್ದಿ ಸಂಸ್ಥೆಯ ದಶಮಾನೋತ್ಸವ ಹಾಗೂ ರಘುನಾಥ ಪ್ರೀಯ ಸಾಧು ಮಹಾರಾಜರ ಜಾತ್ರೆಯ ನಿಮಿತ್ಯ ಜನಪ್ರೀಯ ಕಿರುತೆರೆ ಹಾಗೂ ಯೂಟ್ಯುಬ್ ಸ್ಟಾರ ಕಲಾವಿದರಾದ ಮಾಳು ನಿಪನಾಳ, ಝೀ ಕನ್ನಡ ವಾಹಿನಿಯ ಕಲಾವಿದ ಅಪ್ಪಣ್ಣ ರಾಮದುರ್ಗ, ವಾಣಿ, ಸುಧಾರಾಣಿ, ಮಾಲಾಶ್ರೀ ಗೌನಾಳೆ ಹಾಗೂ ಮುಂಬೈ ಡಾನ್ಸ ಗ್ರುಪ್, ವಿಕೆ ಸ್ಟೈಲ್ ಡಾನ್ಸ ಗ್ರುಪ್, ಮತ್ತು ಶಿವಾ ಡಾನ್ಸ ಗ್ರುಪ್ನಿಂದ ಅರುಣೋದಯ ಸಂಸ್ಕೃತಿಕ ಉತ್ಸವ ಕಾರ್ಯಕ್ರಮ ನಡೆಯಲಿದೆ.
ಸಂಗೀತ ಸಂಜೆ ರಸಮಂಜರಿ ಕಾರ್ಯಕ್ರಮ; ಗ್ರಾಮದ ಬಸವೇಶ್ವರ ಯುವಕ ಮಂಡಳ ಹಾಗೂ ಗೆಳೆಯರ ಬಳಗ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ಜಾತ್ರೆ ಹಾಗೂ ಕನ್ನಡ ರಾಜ್ಯೋತ್ಸವದ ನಿಮಿತ್ತ ರಾಜ್ಯದ ಪ್ರಸಿದ್ದ ಕಿರುತೆರೆ, ಯೂಟ್ಯುಬ್ ಕಲಾವಿದರಾದ ಎ.ಆರ್. ಅಗಸಿಮನಿ, ಕಾಮಿಡಿ ಕಿಂಗ್ ಶಿವಪುತ್ರ, ಪರಸು ಕೋಲೂರ, ದಿನೇಶ ನಾಯಕ್, ಪ್ರೀತಿ ಹೊಸಪೇಟೆ, ಕಾವ್ಯಾಂಜಲಿ ಹೊಸಪೇಟೆ, ತೇಜು ತುಮಕೂರಸಂತ ಸಿಂಗರ ಬಾಗಲಕೋಟೆ, ಸತೀಶ ಹಾಗೂ ಆರ್ಕೆಸ್ಟ್ರಾ ತಂಡದಿಂದ ಸಂಗೀತ ರಸಮಂಜರಿ ಹಾಗೂ ನಗೆ ಚಟಾಕಿ ಕಾರ್ಯಕ್ರಮ ನಡೆಯಲಿದೆ.
ರವಿವಾರ ಮುಂಜಾನೆ 9 ಗಂಟೆಗೆ ಜೈ ಹನುಮಾನ ಶಾಲೆಯ ಆವರಣದಲ್ಲಿ ಹಾಗೂ ಕನ್ನಡ ಗಂಡು ಮಕ್ಕಳ ಶಾಲೆ ಹತ್ತಿರ ಓಟದ ಸ್ಪರ್ದೆ ಹಾಗೂ ಸಂಗ್ರಾಮ ಕಲ್ಲು ನೆಟ್ಟಗೆ ಎತ್ತುವ ಸ್ಪರ್ಧೆ ನಡೆಯಲಿದ್ದು ವಿಜೇತ ಐವರು ಸ್ಪರ್ದಿಗಳಿಗೆ ಆಕರ್ಷಕ ಬಹುಮಾನ ಆಯೋಜಿಸಲಾಗಿದೆ. ಈ ಎಲ್ಲ ಕಾರ್ಯಕ್ರಮಗಳ ಸಾನಿಧ್ಯವನ್ನು ಸ್ಥಳೀಯ ವಿರಕ್ತಮಠದ ಪ್ರಭು ಮಹಾಸ್ವಾಮಿಗಳು, ಜನಾರ್ಧನ ಮಹಾರಾಜರು ವಹಿಸಲಿದ್ದಾರೆ,
ಮುಖ್ಯ ಅಥಿತಿಗಳಾಗಿ ಶಾಸಕ ಸಿದ್ದು ಸವದಿ, ಕಾಂಗ್ರೆಸ್ ಧುರೀಣ ಸಿದ್ದು ಕೊಣ್ಣೂರ, ವೀಣಾ ಕಾಶಪ್ಪನವರ, ಡಾ; ಎ.ಆರ್. ಬೆಳಗಲಿ, ರಾಜೇಂದ್ರ ಭದ್ರಣ್ಣವರ, ರಾಮಣ್ಣ ಮುಗಳಖೋಡ, ರಾಮಪ್ಪಾ ಬಗನಾಳ, ಅಣ್ಣಪ್ಪ ಪಾಟೀಲ, ಬಿ.ಎಸ್. ಪಾಟೀಲ ಪಿಕೆಪಿಎಸ್ ಬ್ಯಾಂಕ್ ಅಧ್ಯಕ್ಷ ಶಂಕರ ಬಟಕುರ್ಕಿ, ಶ್ರೀಶೈಲ ಬ್ಯಾಕೋಡ ಸೇರಿದಂತೆ ಹಲವಾರು ಧುರೀಣರು ಆಗಮಿಸಲಿದ್ದಾರೆ.