ಬಳ್ಳಾರಿ

25ನೇ ಕಾರ್ಗಿಲ್ ವಿಜಯ್ ದಿವಸ್ ಅಂಗವಾಗಿ ರಾಷ್ಟ್ರದೇವೋಭವ ಕಾರ್ಯಕ್ರಮ

25ನೇ ಕಾರ್ಗಿಲ್ ವಿಜಯ್ ದಿವಸ್ ಅಂಗವಾಗಿ ರಾಷ್ಟ್ರದೇವೋಭವ ಕಾರ್ಯಕ್ರಮ

ಬಳ್ಳಾರಿ 26 : ಕಲಾಸಂಗಮ ಸಾಂಸ್ಕೃತಿಕ ಸಂಸ್ಥೆಯ ದಶಮಾನೋತ್ಸವ ಸಂಭ್ರಮ ಹಾಗೂ 25ನೇ ಕಾರ್ಗಿಲ್ ವಿಜಯ್ ದಿವಸ್ ಅಂಗವಾಗಿ ರಾಷ್ಟ್ರದೇವೋಭವ ಕಾರ್ಯಕ್ರಮವನ್ನು ಶೆಟ್ರ ಗುರುಶಾಂತಪ್ಪ ಸಂಯುಕ್ತ ಪದವಿಪೂರ್ವ ಕಾಲೇಜಿನಲ್ಲಿ ಅರ್ಥಪೂರ್ಣವಾಗಿ ಆಚರಿಸಲಾಯಿತು. ಶಾಲಾ ವಿದ್ಯಾರ್ಥಿಗಳಿಂದ ದೇಶಭಕ್ತಿ ಗೀತೆಗಾಯನ, ತಾಂಡವ ನೃತ್ಯ ಕಲಾ ಟ್ರಸ್ಟ್‌ ವತಿಯಿಂದ ದೇಶಭಕ್ತಿ ಸಮೂಹ ನೃತ್ಯಗಳು ಮೂಡಿಬಂದವು. ಈ ಕಾರ್ಯಕ್ರಮದಲ್ಲಿ ದೇಶಕ್ಕಾಗಿ ಸೇವೆ ಸಲ್ಲಿಸಿದ ಮಾಜಿ ಯೋಧರಿಗೆ ರಾಷ್ಟ್ರದೇವೋಭವ ಗೌರವ ಪುರಸ್ಕಾರ ನೀಡಿ ಗೌರವಿಸಲಾಯಿತು. ಜೊತೆಗೆ ಕಲಾಸಂಗಮದ ಪ್ರತಿಷ್ಠಿತ ಜನಕ (ಜನರ ನಡುವಿನ ಕಣ್ಮಣಿ) ಪ್ರಶಸ್ತಿಯನ್ನು ಆಂಧ್ರ​‍್ರದೇಶದ ಕರ್ನೂಲು ಜಿಲ್ಲೆ ದೇವನಕೊಂಡ ಮಂಡಲ ಬಂಟುಪಲ್ಲಿ ಗ್ರಾಮದ ಗೋರಕ್ಷಕ ಶ್ರೀ ಚಾಂದ್‌ಬಾಷ ಇವರಿಗೆ ಪ್ರದಾನ ಮಾಡಲಾಯಿತು.  

ಚಾಂದ್‌ಬಾಷ ರವರು 450ಕ್ಕೂ ಹೆಚ್ಚು ದೇಶೀ ಗೋವುಗಳನ್ನು ರಕ್ಷಿಸುತ್ತಾ, ಗೋವುಗಳ ಉತ್ಪನ್ನಗಳನ್ನು ಸ್ವಾಸ್ಥ್ಯ ಸಮಾಜಕ್ಕೆ ನೀಡುತ್ತಿದ್ದಾರೆ. ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ವೀರಶೈವ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಅಲ್ಲಂ ಗುರುಬಸವರಾಜ್ ಉದ್ಘಾಟಿಸಿ ಮಾತನಾಡುತ್ತಾ, ವೀರ ಯೋಧರ ಸೇವೆಯನ್ನು ಸ್ಮರಿಸುವುದು ನಮ್ಮೆಲ್ಲರ ಸೌಭಾಗ್ಯ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಮತ್ತೋರ್ವ ಅತಿರ್ಥಿಗಳಾಗಿ ಗಣಪಾಲ್ ಐನಾಥರೆಡ್ಡಿ ಮಾತನಾಡುತ್ತಾ, ಕಾರ್ಗಿಲ್ ವಿಜಯ್ ದಿವಸ್ ಅಂಗವಾಗಿ ಸತತ 10 ವರ್ಷಗಳಿಂದ ರಾಷ್ಟ್ರದೇವೋಭವ ಕಾರ್ಯಕ್ರಮವನ್ನು ಕಲಾಸಂಗಮ ಆಚರಿಸುತ್ತಿರುವುದು ಶ್ಲಾಘನೀಯ, ಜೊತೆಗೆ ಮಾಜಿ ಸೈನಿಕರನ್ನು ಗೌರವಿಸಿರುವುದು ಅರ್ಥಪೂರ್ಣವಾಗಿದೆ ಎಂದರು. ಕಾರ್ಗಿಲ್ ಯುದ್ಧದಲ್ಲಿ ಭಾಗಿಯಾಗಿದ್ದ ಸುಬೇದಾರ್ ಮೇಜರ್ ಲಕ್ಷ್ಮಣ್ ಮಾತನಾಡುತ್ತಾ ಕಾರ್ಗಿಲ್ ಯುದ್ಧದ ರೋಚಕ ಸಂಗತಿಗಳನ್ನು ಮತ್ತು ಅಂದಿನ ಯುದ್ಧದ ಪರಿಸ್ಥಿತಿಯನ್ನು ಹಾಗೂ ಆಪರೇಷನ್ ವಿಜಯ್ ಬಗ್ಗೆ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ಮನ ಮುಟ್ಟುವಂತೆ ವಿವರಿಸಿದರು.  

ಮಾಜಿ ಯೋಧರ ಸಂಘದ ಜಿಲ್ಲಾಧ್ಯಕ್ಷರಾದ ವೆಂಕಟಕೃಷ್ಣಾ ಚೌಧರಿ, ಬಳ್ಳಾರಿ ಜಿಲ್ಲಾ ಕಲಾವಿದರ ಸಂಘದ ಅಧ್ಯಕ್ಷರಾದ ಯಲ್ಲನಗೌಡ ಶಂಕರಬಂಡೆ, ಶೆಟ್ರ ಗುರುಶಾಂತಪ್ಪ ಸಂಯುಕ್ತ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಶರಣ ಬಸವರಾಜ್, ಪ್ರೌಢಶಾಲೆಯ ಮುಖ್ಯ ಗುರುಗಳಾದ ಶ್ರೀಮತಿ ನಾಗರತ್ನ ಪಾಟೀಲ್ ಉಪಸ್ಥಿತರಿದ್ದರು. ಕಲಾಸಂಗಮ ಸಂಸ್ಥಾಪಕ ಅಧ್ಯಕ್ಷರಾದ ಎಂ.ವಿನೋದ್ ಅವರು ಸ್ವಾಗತಿಸಿ ಕಾರ್ಯಕ್ರಮ ನಿರೂಫಿಸಿದರು. ಕಾರ್ಯದರ್ಶಿಗಳಾದ ಬಿ.ಎಂ.ಸಿದ್ದೇಶ್, ಉಪಾಧ್ಯಕ್ಷರಾದ ಹರ್ಧಗೇರಿ ರಘು, ಪದಾಧಿಕಾರಿಗಳಾದ ಮುರಳಿ, ನವೀನ್ ಸೌದ್ರಿ ಹಾಜರಿದ್ದರು. 


ಸುದ್ದಿ ಓದಿ