ರೋಣ

ಕೊಲೂರು ಕಲಾ ತಂಡದಿಂದ ರಸಮಂಜರಿ ಕಾರ್ಯಕ್ರಮ

ಕೊಲೂರು ಕಲಾ ತಂಡದಿಂದ ರಸಮಂಜರಿ ಕಾರ್ಯಕ್ರಮ

ರೋಣ 19:  ತಾಲೂಕಿನ ಮುದೇನಗುಡಿ ಗ್ರಾಮದಲ್ಲಿ ಶ್ರೀಕತ್ರಿ ಮಾರುತೇಶ್ವರ  ಜಾತ್ರಾ ಮಹೋತ್ಸವದ ಅಂಗವಾಗಿ ಕೃಷ್ಣ ಮೇಲೋಡಿಸ್ ಆರ್ಕೆಸ್ಟ್ರಾ ಕೊಲೂರು ಹಾಗೂ ಪರಶು ಕೊಲೂರು ಕಲಾ ತಂಡದಿಂದ ರಸಮಂಜರಿ ಕಾರ್ಯಕ್ರಮ ನೆರವೇರಿತು. ಈ ಕಾರ್ಯಕ್ರಮದ ಉದ್ಘಾಟನೆಯನ್ನು  ಬಸವಂತಪ್ಪ ಹೆಚ್ ತಳವಾರ ಮಾಜಿ ಅಧ್ಯಕ್ಷರು ಗದಗ ಜಿಲ್ಲಾ ಬಿಜೆಪಿ ಎಸ್‌/ಟಿ ಮೊರ್ಚಾ ಇವರು ನೆರವೆರಿಸಿ ಮಾತನಾಡಿ ಗ್ರಾಮೀಣ ಪ್ರದೇಶದಲ್ಲಿ ರಸಮಂಜರಿ ಕಾರ್ಯಕ್ರಮದಂತಹ ಕಲೆಯೂ ನಶಿಸಿ ಹೋಗಿದೆ ಪುನಶ್ಚೇತನ ಮಾಡಲಿಕ್ಕೆ ಇಂತಹ ಕಾರ್ಯಕ್ರಮಗಳನ್ನು ಮೇಲಿಂದ ಮೇಲೆ ಯುವಕರು ಆಯೋಜಿಸುತ್ತಾರೆ ಎಂದರು.  

ಗ್ರಾಮೀಣ ಪ್ರದೇಶದಲ್ಲಿ  ಅಂತಿಪದ, ಲಾವಣಿಪದ, ಸೊಬಾನಪದ, ಬಿಸುಕಲ್ಲುಪದ,ಇಂತಹ ಕಲೆಯೂ ನಶಿಸಿ ಹೋಗಿದೆ. ಇವತ್ತಿನ ದಿವಸ ರಸಮಂಜರಿ ಕಾರ್ಯಕ್ರಮ ನೇರವೆರಿಸಿದ್ದು ಬಹಳ ಸಂತಸ ತಂದಿದೆ. ಮನುಷ್ಯನಿಗೆ ಸಂಗೀತ ಕಲೆ ಅತಿ ಅವಶ್ಯವಾಗಿದೆ ಇಂತಹ ಕಾರ್ಯಕ್ರಮಗಳನ್ನು ತತ್ವಪದಗಳನ್ನು ತಿಳಿದುಕೊಂಡು ಸಮಾಜದಲ್ಲಿ ಉತ್ತಮರಾಗಿ ಬದುಕಬೇಕೆಂದು ಯುವಕ-ಯುವತಿಯರಿಗೆ ಕರೆ ನೀಡಿದರು.  

ಈ ಸಭೆಯ ಅಧ್ಯಕ್ಷತೆಯನ್ನು ನವೀನಗೌಡ ಪಾಟೀಲ ಗ್ರಾಮಪಂಚಾಯತಿ ಅಧ್ಯಕ್ಷರು ಭಾಗಿಯಾಗಿದ್ದರು.ಮಾಜಿ ತಾಲೂಕ ಪಂಚಾಯತ ಸದಸ್ಯರಾದ ಎಸ್ ಆರ್ ಚನ್ನಪ್ಪಗೌಡ್ರ, ಗುತ್ತಿಗೆದಾರ ಸುರೇಶ ಮುದಿಬಸನಗೌಡ,ಮಾಜಿ ಅಧ್ಯಕ್ಷರಾದ ಬಸನಗೌಡ ಕ್ಯಾತನಗೌಡ್ರ, ಉಮೇಶಗೌಡ ಪಾಟೀಲ, ಬಸವರಾಜ ವಡ್ಡಟ್ಟಿ, ಹೇಮಂತಗಗೌಡ ಕ್ಯಾತನಗೌಡ, ಎಸ್‌.ಜಿ. ಹಡಗಲಿ, ಬಸನಗೌಡ ನಿ ಕ್ಯಾತನಗೌಡ  ವಾಯ್‌. ಹೆಚ್‌.ಕ್ಯಾತನಗೌಡ್ರ,ರಾಜು ಚನ್ನಪ್ಪಗೌಡ  ಇದ್ದು, ಈ ಕಾರ್ಯಕ್ರಮದ ನಿರೂಪಣೆಯನ್ನು ಸಿ,ಬಿ,ಬಾಲನಗೌಡ್ರ ನೇರವರಿಸಿದರು.ಕೊನೆಯಲ್ಲಿ ವಂದನಾರೆ​‍್ಣಯೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು. 


ಸುದ್ದಿ ಓದಿ