ಅಪರೂಪ ಸಾಹಿತ್ಯ ಬಹುಮುಖದ ವ್ಯಕ್ತಿ ಡಾ. ಎಂ.ಎಂ ಕಲಬುರ್ಗಿ
ಕಲಬುರ್ಗಿ 13: ಡಾ. ಎಂ.ಎಂ. ಕಲಬುರ್ಗಿಯವರು ಸಾಹಿತ್ಯದ ಮೂಲಕ ನಾಡು, ನುಡಿ ಸೇವೆ ಗೈದುದೇಶ-ವಿದೇಶದಲ್ಲಿ ದಟ್ಟವಾದ ಪ್ರಭಾವವನ್ನು ಬೀರಿದ ವ್ಯಕ್ತಿ.20ನೇ ಶತಮಾನದ ಉತ್ತರಾರ್ಧದಲ್ಲಿ 21ನೇ ಶತಮಾನದ ಪೂರ್ವಾರ್ಧದ ಹೊಸ್ತಿಲಲ್ಲಿ ನಿಂತು ಸಾಹಿತ್ಯ ವಾರಸುದಾರರಿಗೆ ಮಾರ್ಗತೋರಿದ ಮಹಾನ್ ವಿದ್ವಾಂಸ, ಸಂಶೋಧಕ, ವಿಮರ್ಶಕ, ಚಿಂತಕ ಹಾಗೂ ಸಾಹಿತ್ಯದ ಆರಾಧಕ.
ಇಂಥಅಪರೂಪದ ವ್ಯಕ್ತಿಯ ವ್ಯಕ್ತಿತ್ವದ ಬಹುಮುಖಗಳನ್ನು ಒಂದೆಡೆ ಸೇರಿಸಿ ಇಡಿಯಾಗಿ ಸಮಗ್ರ ವ್ಯಕ್ತಿತ್ವವನ್ನು ಅಕ್ಷರ, ದೃಶ್ಯ, ಧ್ವನಿ, ಚಿತ್ರ ಮಾಧ್ಯಮಗಳ ಮೂಲಕ ಪರಿಚಯಿಸುವುದು.ಅಕ್ಷರ ಮಾಧ್ಯಮದಲ್ಲಿ ಬಂದಅವರ ಸಮಗ್ರ ಸಾಹಿತ್ಯವನ್ನು ವಿಷಯವಾರು ವಿಂಗಡಿಸಿ ಸಂಪುಟಗಳಲ್ಲಿ ಪ್ರಕಟಿಸುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ.
ಹೀಗೆ 40 ಸಂಪುಟಗಳಲ್ಲಿ ಅವರ ಸಮಗ್ರ ಸಾಹಿತ್ಯವನ್ನು ಸುಮಾರು 28000 ಪುಟಗಳಲ್ಲಿ ಪ್ರಕಟಿಸಿದೆ. ಹಳಕಟ್ಟಿ ಸಂಶೋಧನ ಕೇಂದ್ರವು ಕಳೆದ ಸುಮಾರು 2 ದಶಕಗಳ ಸಂಶೋಧನ ಕ್ಷೇತ್ರದಲ್ಲಿ ಅಪರೂಪದ ಕೆಲಸವನ್ನು ಮಾಡುತ್ತಿದೆ. ಡಾ. ಫ.ಗು.ಹಳಕಟ್ಟಿ ಸಮಗ್ರ ಸಾಹಿತ್ಯವನ್ನು 15 ಸಂಪುಟಗಳಲ್ಲಿ ಆದಿಲಶಾಹಿ ಕಾಲದ ಸಾಹಿತ್ಯವನ್ನು 18 ಸಂಪುಟಗಳಲ್ಲಿ ಅನುವಾದಿಸಿ ಪ್ರಕಟಿಸಿದೆ. 18 ವಿದ್ಯಾರ್ಥಿಗಳು ವಿವಿಧ ವಿಷಯದಲ್ಲಿ ಪಿಎಚ್.ಡಿ.ಪದವಿಯನ್ನು ಪಡೆದಿದ್ದಾರೆ. ಇನ್ನು ಕೆಲವರು ಪದವಿಯನ್ನು ಪಡೆಯುವದಾರಿಯಲ್ಲಿ ಇದ್ದಾರೆ. ಇದಕ್ಕೆಲ್ಲ ಬಿ.ಎಲ್.ಡಿ.ಇ.ಸಂಸ್ಥೆಯ ಅಧ್ಯಕ್ಷರಾದ ಡಾ. ಎಂ.ಬಿ.ಪಾಟೀಲ ಅವರ ನಿರಂತರ ಬೆಂಬಲವೇ ಕಾರಣವಾಗಿದೆ. ಈ ಯೋಜನೆಯಕರಡು ಪ್ರತಿಯನ್ನುಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಕಳುಹಿಸಿತು.ಈ ಯೋಜನೆಗೆ ಅನುದಾನ ನೀಡುವಲ್ಲಿ ತೀವ್ರ ಆಸಕ್ತಿ ವಹಿಸಿದವರು ಈ ಹಿಂದೆ ಕರ್ನಾಟಕ ರಾಜ್ಯದ ಮುಖ್ಯ ಮಂತ್ರಿಗಳಾಗಿದ್ದ ಸಿದ್ದರಾಮಯ್ಯನವರು ಮತ್ತು ಕನ್ನಡ ಮತ್ತು ಸಂಸ್ಕೃತಿಇಲಾಖೆಯ ನಿರ್ದೇಶಕರು ಮತ್ತು ಅಧಿಕಾರಿಗಳು.ಇವರಿಗೆಲ್ಲ ನಮ್ಮ ಕೃತಜ್ಞತೆಗಳು ಸಲ್ಲುತ್ತವೆ.
ಯೋಜನೆಯಲ್ಲಿ ಬಿ.ಎಲ್.ಡಿ.ಇ. ಸಂಸ್ಥೆಯ ಅಧ್ಯಕ್ಷರು, ನಾಡಿನ ಹಿರಿಯ ರಾಜಕಾರಣಿಗಳು ಆದಡಾ. ಎಂ.ಬಿ.ಪಾಟೀಲ ಗೌರವ ಅಧ್ಯಕ್ಷರಾಗಿ ಜಿ.ಕೆ.ಪಾಟೀಲರುಅಧ್ಯಕ್ಷರು, ಡಾ. ಎಂ.ಎಸ್. ಮದಭಾವಿ ಕಾರ್ಯದರ್ಶಿಗಳು, ಡಾ. ವೀರಣ್ಣರಾಜೂರ ಪ್ರಧಾನ ಸಂಪಾದಕರು, ಡಾ.ಕೃಷ್ಣ ಕೊಲ್ಹಾರಕುಲಕರ್ಣಿ ಸಂಯೋಜಕರು ಹಾಗೂ ಡಾ.ಗುರುಲಿಂಗ ಕಾಪಸೆ, ವಿಜಯ ಕಲಬುರ್ಗಿ, ಡಾ. ವಿ.ಡಿ.ಐಹೊಳ್ಳಿ ಮತ್ತುಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕರು, ಸಲಹಾ ಸಮಿತಿಯ ಸದಸ್ಯರಾಗಿ ಕಾರ‌್ಯನಿರ್ವಹಿಸುತ್ತಿರುವರು.
ಈ ಯೋಜನೆಯ ಸಮಿತಿಯ ಗೌರವಾಧ್ಯಕ್ಷರಾದ ಡಾ. ಎಂ.ಬಿ.ಪಾಟೀಲ, ಅಧ್ಯಕ್ಷರಾದ ಜಿ.ಕೆ.ಪಾಟೀಲ ಮತ್ತುಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕರನ್ನು ಹಾಗೂ ಪ್ರಧಾನ ಸಂಪಾದಕರಾದ ಡಾ. ವೀರಣ್ಣ ರಾಜೂರ, ಬಿ.ಎಲ್.ಡಿ.ಇ. ಸಂಸ್ಥೆಯ ವಚನಪಿತಾಮಹಡಾ. ಫ.ಗು.ಹಳಕಟ್ಟಿ ಸಂಶೋಧನಕೇಂದ್ರದ ಕಾರ್ಯದರ್ಶಿಗಳಾದ ಡಾ. ಎಂ.ಎಸ್. ಮದಭಾವಿ ಮತ್ತು ಸಂಯೋಜಕರಾದ ಡಾ. ವಿ.ಡಿ.ಐಹೊಳ್ಳಿಯವರನ್ನು ಪ್ರೀತಿಯಿಂದ ನೆನೆಯುತ್ತೇವೆ.
ಇಂದು ಪತ್ರಿಕಾ ಗೋಷ್ಠಿ ನಡೆಯಿತು.ವಚನ ಪಿತಾ.ಹ ಡಾ. ಫ.ಗು. ಹಳಕಟ್ಟಿ ಸಂಶೋಧನ ಕೇಂದ್ರದ ನಿರ್ದೇಶಕ ಡಾ. ಕೃಷ್ಣಕೊಲ್ಹಾರ ಕುಲಕರ್ಣಿ, ಡಾ.ಎಂ.ಎಸ್. ಮದಭಾವಿ, ಡಾ.ಎಸ್. ಕೆ. ಕೊಪ್ಪಾ, ಡಾ. ಗುರುಪಾದ ಮರೆಗುದ್ದಿ ಮತ್ತುಡಾ ಮಹಾಂತೇಶ ಬಿರಾದಾರ ಈ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದವರು.