ರಾಜ್ಯ

ಶೀಘ್ರ ಸಂಪುಟ ವಿಸ್ತರಣೆ, ಕಾಂಗ್ರೆಸ್ ನಾಯಕರ ಪಾಠ ಅನಗತ್ಯ : ಬಿಎಸ್ ವೈ

ಶೀಘ್ರ ಸಂಪುಟ ವಿಸ್ತರಣೆ, ಕಾಂಗ್ರೆಸ್ ನಾಯಕರ ಪಾಠ ಅನಗತ್ಯ : ಬಿಎಸ್ ವೈ

 ಬೆಂಗಳೂರು, ಆಗಸ್ಟ್ 5  ಸಚಿವ ಸಂಪುಟ ವಿಸ್ತರಣೆ ವಿಚಾರದಲ್ಲಿ ಕಾಂಗ್ರೆಸ್ ನಾಯಕರಿಂದ ಪಾಠ ಕಲಿಯುವ ಅಗತ್ಯವಿಲ್ಲ ಎಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ  ತಿರುಗೇಟು ನೀಡಿದ್ದಾರೆ.    ಉತ್ತರ ಕರ್ನಾಟಕ ಪ್ರದೇಶದ ಐದು ಜಿಲ್ಲೆಗಳ  ಪ್ರವಾಹ ಪೀಡಿತ ಪ್ರದೇಶಗಳ ವೈಮಾನಿಕ ಸಮೀಕ್ಷೆಗೆ ತೆರಳುವ ಮೊದಲು ಸೋಮವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಮುಂದಿನ ಎರಡು ದಿನಗಳಲ್ಲಿ ದೆಹಲಿಗೆ ಭೇಟಿ ನೀಡಿ, ಬಿಜೆಪಿ ನಾಯಕರ ಜೊತೆ ಸಮಾಲೋಚನೆ ಮಾಡಿ ಶೀಘ್ರ ಸಂಪುಟ ವಿಸ್ತರಣೆ ಮಾಡುವುದಾಗಿ ಹೇಳಿದರು. ಯುಡಿಯೂರಪ್ಪ  ಅವರಿಗೆ ಸಂಪುಟ  ವಿಸ್ತರಣೆ  ಬೇಕಿಲ್ಲ   ಸುಖಾಸಮ್ಮನೆ ಕಾಲಹರಣ ಮಾಡುತ್ತಿದ್ದಾರೆ  ಎಂಬ  ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ , ಮಾಜಿ ಸಚಿವ ಎಂ. ಬಿ ಪಾಟೀಲ್ ಅವರು ಹೇಳಿಕೆ ಸರಿಯಲ್ಲ , ಇದು ಸತ್ಯಕ್ಕೆ ದೂರ ಎಂದು ತಳ್ಳಿಹಾಕಿದರು.    ತಮ್ಮದು ರಾಷ್ಟ್ರಿಯ ಪಕ್ಷವಾಗಿದ್ದು  ಪ್ರಧಾನಿ ನರೇಂದ್ರ ಮೋದಿ ಮತ್ತು ಪಕ್ಷದ ರಾಷ್ಟ್ರೀಯ ಅಧ್ಯಕ್ಷ    ಅಮಿತ್ ಶಾ ಅವರ ಒಪ್ಪಿಗೆ  ದೊರೆತ ನಂತರ ಒಂದು ನಿಮಿಷವೂ ವ್ಯರ್ಥ ಮಾಡದೆ   ಸಂಪುಟ ವಿಸ್ತರಣೆ ಮಾಡುವುದಾಗಿ ಅವರು ಹೇಳಿದರು.  ಉತ್ತರ ಕರ್ನಾಟಕದ ಪ್ರವಾಹ ಪರಿಸ್ಥಿತಿ ಬಹಳ ಗಂಭೀರವಾಗಿದೆ ಎಂದ ಅವರು  ತೊಂದರೆಗೆ ಒಳಗಾದ ಜನರಿಗೆ ಜನರಿಗೆ ಸಹಾಯ ಮಾಡಲು ಸಾಧ್ಯವಿರುವ ಎಲ್ಲ ಕ್ರಮ  ತೆಗೆದುಕೊಳ್ಳುವಂತೆ ಈಗಾಗಲೇ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ  ನೀಡಿರುವುದಾಗಿ ತಿಳಿಸಿದರು. ದೆಹಲಿ ಭೇಟಿಯ ಸಮಯದಲ್ಲಿ, ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ   ಪ್ರವಾಹ ಪರಿಸ್ಥಿತಿ  ನಿಭಾಯಿಸಲು ರಾಜ್ಯಕ್ಕೆ ವಿಶೇಷ ಹಣಕಾಸು ನೆರವು ನೀಡುವಂತೆ  ಮನವಿ ಮಾಡುವುದಾಗಿ  ಯಡಿಯೂರಪ್ಪ ಹೇಳಿದರು.  

ಸುದ್ದಿ ಓದಿ