ರಾಣಿ ಚನ್ನಮ್ಮ ವಿವಿ ಏಕವಲಯ ಶಟಲ್ ಬ್ಯಾಡ್ಮಿಂಟನ್ ಸ್ಪರ್ಧೆ : ಬೆಳಗಾವಿಯ ಕಾಲೇಜುಗಳಿಗೆ ಪ್ರಥಮ, ದ್ವಿತೀಯ ಬಹುಮಾನ
ಮಹಾಲಿಂಗಪುರ: ಸ್ಥಳೀಯ ಕೆಎಲ್ಇ ಸಂಸ್ಥೆಯ ಎಸ್ಸಿಪಿ ಕಲಾ, ವಿಜ್ಞಾನ ಹಾಗೂ ಡಿಡಿಎಸ್ ವಾಣಿಜ್ಯ ಮ.ವಿದ್ಯಾಲಯದಲ್ಲಿ ಜರುಗಿದ, ರಾಣಿ ಚನ್ನಮ್ಮ ವಿವಿ ಏಕವಲಯ ಪುರುಷ ಹಾಗೂ ಮಹಿಳೆಯರ ಶಟಲ್ ಬ್ಯಾಡ್ಮಿಂಟನ್ ಸ್ಪರ್ಧೆಗಳಲ್ಲಿ ಬೆಳಗಾವಿ ಮಹಾನಗರ ಕಾಲೇಜುಗಳು ಪ್ರಥಮ ಸ್ಥಾನಗಳನ್ನು ಪಡೆದುಕೊಂಡವು.
ಈ ಸ್ಪರ್ಧೆಯಲ್ಲಿ 32 ಪುರುಷ ಹಾಗೂ 16 ಮಹಿಳಾ ತಂಡಗಳು ಭಾಗವಹಿಸಿ, ಬೆಳಗಾವಿಯ ಪುರುಷರ ಜೈನ ಮತ್ತು ಮಹಿಳಾ ವಿಭಾಗದ ಕೆ.ಎಲ್.ಇ ಸಂಸ್ಥೆಯ ಲಿಂಗರಾಜ ಕಾಲೇಜುಗಳು ಪ್ರಥಮ ಸ್ಥಾನ ಪಡೆದುಕ್ಕೊಂಡರೆ ನಂತರದ ದ್ವಿತೀಯ ಸ್ಥಾನಗಳನ್ನು ಪುರುಷರ ಬೆಳಗಾವಿಯ ಆರ್ಪಿಡಿ ಮತ್ತು ಮಹಿಳೆಯರ ಕೆಎಲ್ಇ ಸಂಸ್ಥೆಯ ಆರ್ಎಲ್ಎಸ್ ಕಾಲೇಜುಗಳು ಪಡೆದುಕೊಂಡವು.
ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಪುರುಷರ ತಂಡಕ್ಕೆ ಮುದ್ದೇಬಿಹಾಳದ ಎಂ.ಜಿ.ವಿ.ಸಿ ಕಾಲೇಜಿನ ಸಚಿನ್ ರಾಠೋಡ, ಬೆಳಗಾವಿಯ ಕೆ.ಎಲ್.ಇ ಸಂಸ್ಥೆಯ ಲಿಂಗರಾಜ ಕಾಲೇಜಿನ ಎನ್.ಹೆಲಿಕ್ಷ್ ಸಿಂಗ್, ಗೋಕಾಕ ಎಸ್.ಎಲ್.ಜೆ ಕಾಲೇಜಿನ ರಾಹುಲ್ ದೇವರಮನಿ, ಮಹಾಲಿಂಗಪುರದ ಕೆ.ಎಲ್.ಇ ಸಂಸ್ಥೆಯ ಎಸ್.ಸಿ.ಪಿ ಕಾಲೇಜಿನ ಬಸವರಾಜ ಕೋಳಿಗುಡ್ಡ, ಬೆಳಗಾವಿಯ ಜೈನ್ ಕಾಲೇಜಿನ ಸುಜಯ ನಂದೆನ್ನವರ ಹಾಗೂ ವಿಜಯಪುರದ ದರಬಾರ್ ಕಾಲೇಜಿನ ಎಂ.ಡಿ.ಜಾಗಿ ಮುಜಾವರ ಆಯ್ಕೆಯಾಗಿದ್ದಾರೆ.
ಕಾಯ್ದಿರಿಸಿದ ಆಟಗಾರರಾಗಿ ವಿಜಯಪುರ ಬಂಜಾರ ಕಲಾ ಕಾಲೇಜಿನ ಗಣೇಶ ರಾಠೋಡ, ಬೆಳಗಾವಿ ಜೈನ್ ಬಿಬಿಎ ಕಾಲೇಜಿನ ರಾಹುಲ್ ರೇವಣಕರ ಆಯ್ಕೆಯಾಗಿದ್ದು, ಇವರು ಅಂತರ ವಿಶ್ವವಿದ್ಯಾಲಯದ ಸ್ಪರ್ಧೆಯಲ್ಲಿ ಭಾಗವಹಿಸಲು ಅರ್ಹತೆ ಪಡೆದಿದ್ದಾರೆ.
ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಮಹಿಳಾ ತಂಡಕ್ಕೆ ಬೆಳಗಾವಿ ಕೆಎಲ್ಇ ಸಂಸ್ಥೆಯ ಆರ್ಎಲ್ಎಸ್ ರೆಹಾ ಮೌಂಟೆರೋ, ಕೆಎಲ್ಇ ಸಂಸ್ಥೆಯ ಲಿಂಗರಾಜ್ ಕಾಲೇಜಿನ ನಮ್ರತಾ ಪಾಟೀಲ, ವಿಜಯಪುರದ ಎಂಕೆಬಿಪಿ ಕಾಲೇಜಿನ ಆರತಿ ಭಜಂತ್ರಿ, ಬೆಳಗಾವಿಯ ಜೈನ್ ಕಾಲೇಜಿನ ವಿಬಾ ಕಟಿಗೆ, ಬೆಳಗಾವಿಯ ಕೆ.ಎಲ್.ಇ ಸಂಸ್ಥೆಯ ಲಿಂಗರಾಜ ಕಾಲೇಜಿನ ಪದ್ಮಶ್ರೀ ತಿನೈಕರ ಆಯ್ಕೆಯಾಗಿದ್ದಾರೆ.
ಕಾಯ್ದಿರಿಸಿದ ಆಟಗಾರರಾಗಿ ಬೆಳಗಾವಿಯ ಲಿಂಗರಾಜ ಕಾಲೇಜಿನ ಸ್ವಾತಿ ಶಿರಬೂರ, ಕಾಗವಾಡ ಶಿವಾನಂದ ಕಾಲೇಜಿನ ಸುದರ್ಶಿನಿ ಮಗದುಮ, ಮಹಾಲಿಂಗಪುರದ ಕೆಎಲ್ಇ ಸಂಸ್ಥೆಯ ಎಸ್.ಸಿ.ಪಿ ಕಾಲೇಜಿನ ವಿದ್ಯಾಶ್ರೀ ಪಳಾರಿಮಠ ಆಯ್ಕೆಯಾಗಿ, ಅಂತರ ವಿಶ್ವವಿದ್ಯಾಲಯದ ಸ್ಪರ್ಧೆಯಲ್ಲಿ ಭಾಗವಹಿಸಲು ಅರ್ಹತೆ ಪಡೆದಿದ್ದಾರೆ.
ಆಯ್ಕೆಯ ಸಮಿತಿಯ ಚೇರಮನ್ನರಾಗಿ ಪ್ರೊ.ಎಂ.ಎಂ.ನಿಂಬರಗಿ, ಸದಸ್ಯರಾಗಿ ಚಿಕ್ಕೋಡಿಯ ಚೌಸನ ಬಿ.ಎಡ್ ಕಾಲೇಜಿನ ಬಸವರಾಜ ಮುತ್ನಾಳ, ಮುದ್ದೇಬಿಹಾಳದ ಸರ್ಕಾರಿ ಪದವಿ ಕಾಲೇಜಿನ ಎಂ.ಎಂ.ಲಕ್ಷ್ಮೀಶ್ ಹಾಗೂ ಮಹಾಲಿಂಗಪುರದ ಕೆಎಲ್ಇ ಸಂಸ್ಥೆಯ ಎಸ್ಸಿಪಿ ಪದವಿ ಕಾಲೇಜಿನ ದೈಹಿಕ ನಿರ್ದೇಶಕ ವಿ.ಎಸ್.ಅಂಗಡಿ ಕನ್ವೀನರ್ ಆಗಿ ಕಾರ್ಯನಿರ್ವಹಿಸಿದರು.
ನಿರ್ಣಾಯಕರಾಗಿ ಡಾ.ಎಂ.ಪಿ.ಚಕ್ರವರ್ತಿ, ಗಣೇಶ ಕೇಶವಶೆಟ್ಟಿ, ಎಚ್.ಕೆ.ನಾಯಕ, ದೀಪಕ ಪತ್ತಾರ, ಎಂ.ಎಂ.ಕೊಣ್ಣೂರ, ಎಂ.ಜಿ.ಬುರಕಲೆ, ಪಿ.ಪಿ.ಬಾಗಿ, ಚನ್ನಗಿರಿ ಪೂಜೇರಿ, ಉಮರ, ರಾಜು ಮುಂತಾದವರು ಕಾರ್ಯನಿರ್ವಹಿಸಿದರು.
ಕಾರ್ಯಕ್ರಮದ ಬಹುಮಾನ ವಿತರಣೆಯಲ್ಲಿ ದೈಹಿಕ ನಿರ್ದೇಶಕರಾದ ವಿ.ಎಸ್.ಅಂಗಡಿ, ಎ.ಎಂ.ಉಗಾರೆ, ವಿ.ಎ.ಅಡಹಳ್ಳಿ, ಆರ್.ಎಸ್.ಪೂಜಾರಿ, ಸಲೀಂ ಹಳಿಂಗಳಿ, ಸಿ.ರಾಮರಾವ, ಶಿವಾನಂದ ಬುಲಬುಲಿ ಹಾಗೂ ಸ್ಪರ್ಧೆಯಲ್ಲಿ ವಿವಿಧ ಮಹಾವಿದ್ಯಾಲಯಗಳಿಂದ ದೈಹಿಕ ಶಿಕ್ಷಣ ನಿರ್ದೇಶಕರು ಹಾಗೂ ತಂಡದ ನಿರ್ವಾಹಕರು ಭಾಗವಹಿಸಿದ್ದರು.