ಮಹಲಿಂಗಪುರ

ಸಿದ್ದು ಕೊಣ್ಣೂರ್ ಅನಾವಶ್ಯಕ ಊರೂರು ಸುತ್ತುತ್ತಿದ್ದಾರೆ ರಂಗನಗೌಡ ವ್ಯಂಗ್ಯ

ಸಿದ್ದು ಕೊಣ್ಣೂರ್ ಅನಾವಶ್ಯಕ ಊರೂರು ಸುತ್ತುತ್ತಿದ್ದಾರೆ ರಂಗನಗೌಡ ವ್ಯಂಗ್ಯ

ಮಹಾಲಿಂಗಪುರ 28: ಕೊರೊನಾ ರೋಗಿಗಳಿಗೆ ಪರಿಹಾರ ಕಂಡುಕೊಳ್ಳುವ ಬದಲು ಕಾರಿನ ಮೇಲೆ ಮೈಕ್ ಕಟ್ಟಿಕೊಂಡು ಸಿನ್ನರ್ ಬೀಡಿ ಜಾಹಿರಾತು ಮಾಡುವವರಂತೆ ಅನಾವಶ್ಯಕವಾಗಿ ಊರೂರು ಸುತ್ತುತ್ತಿದ್ದಾರೆ ಎಂದು ಕೆಎಂಎಫ್ ಮಾಜಿ ಅಧ್ಯಕ್ಷ ರಂಗನಗೌಡ ಪಾಟೀಲ ವ್ಯಂಗ್ಯವಾಡಿದರು. 

ಸಿದ್ದು ಕೊಣ್ಣೂರ್ ಅವರ ಉಚಿತ ಆಂಬುಲೆನ್ಸ್‌ ಸೇವೆಗೆ ಗುರುವಾರ ಬಸವೇಶ್ವರ ವೃತ್ತದಲ್ಲಿ ಚಾಲನೆ ನೀಡಿ ಮಾತನಾಡಿದ ಅವರು, ಶಾಸಕ ಸಿದ್ದು ಸವದಿ ಕಷ್ಟದಲ್ಲಿರುವ ಕೊರೋನಾ ರೋಗಿಗಳ ಅನುಕೂಲಕ್ಕಾಗಿ ಸರ್ಕಾರಿ ಆಸ್ಪತ್ರೆಗಳಲ್ಲಿ ಅಂಬ್ಯುಲೆನ್ಸ್‌, ಆಮ್ಲಜನಕ, ಓಷಧಿ, ವೆಂಟಿಲೇಟರ್, ವ್ಯವಸ್ಥೆ ಮಾಡದೆ ಮೊಂಡ ಬೊಗಳೆ ಬಿಡುತ್ತ, ಯಾರಿಗೋ ಒಂದು ಬೆಡ್ ವ್ಯವಸ್ಥೆ ಮಾಡಿ ಮಾಧ್ಯಮಗಳಲ್ಲಿ ಕೀಳು ದರ್ಜೆಯ ಪ್ರಚಾರ ಗಿಟ್ಟಿಸುತ್ತಿದ್ದಾರೆಂದು ಕಿಡಿಕಾರಿದರು. ನಾನು ಮತ್ತು ನಮ್ಮ ನಾಯಕರು ಕೊರೋನಾ ರೋಗಿಗಳಿಗೆ ಹಲವಾರು ಬೆಡ್ಡ್‌ ಗಳ ವ್ಯವಸ್ಥೆ ಮಾಡಿ ಅನೇಕ ಜೀವಗಳು ಉಳಿಯಲು ಕಾರಣರಾಗಿದ್ದೇವೆ. ಅಲ್ಲದೇ ಮಾಜಿ ಶಾಸಕಿ ಉಮಾಶ್ರೀ ಅವರು ಸರ್ಕಾರಕ್ಕೆ ಪತ್ರ ಬರೆದು 10 ಆಕ್ಸಿಜನ್ ಬೆಡ್ಡ್‌ ಗಳನ್ನು ಬನಹಟ್ಟಿ ಸರ್ಕಾರಿ ಆಸ್ಪತ್ರೆಯಲ್ಲಿ ನಿಯುಕ್ತಿಗೊಳ್ಳುವಂತೆ ಮಾಡಿದ್ದಾರೆ ಸ್ಥಳೀಯ ಮಹಾಲಿಂಗಪುರ ಆಸ್ಪತ್ರೆಯಲ್ಲಿ ಶಾಸಕರು ಏನು ಮಾಡಿದ್ದಾರೆ ಹೇಳಲಿ ಎಂದು ಉಮಾಶ್ರೀಯವರ ಕಳಕಳಿಯನ್ನು ಒತ್ತಿ ಹೇಳಿದರು. 

ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ನಂದು ಪಾಟೀಲ ಮಾತನಾಡಿ, ಕೊರೋನಾ ಸಂಕಷ್ಟದಲ್ಲಿರುವವರಿಗೆ ಉಚಿತ ಆಹಾರ ಮತ್ತು ಅಂಬ್ಯುಲೆನ್ಸ್‌ ಸೇವೆ ಒದಗಿಸಿರುವ ಸಿದ್ದು ಕೊಣ್ಣೂರ ಅವರಿಗೆ ಕೆಪಿಸಿಸಿ ವತಿಯಿಂದ ಧನ್ಯವಾದಗಳನ್ನು ತಿಳಿಸಿದರು. 

ಕಿಸಾನ್ ಕಾಂಗ್ರೆಸ್ ರಾಜ್ಯ ಸಂಚಾಲಕ ಜಿ.ಆರ್‌.ಪಾಟೀಲ, ಜಿಲ್ಲಾ ಕಾರ್ಯದರ್ಶಿ ಗೀರೀಶ್ ಅಂಕಲಗಿ, ಕೆಪಿಸಿಸಿ ಹಿಂದುಳಿದ ವರ್ಗಗಳ ಉಪಾಧ್ಯಕ್ಷ ಬಸವರಾಜ ಕೊಕಟನೂರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಲ್ಲಪ್ಪ ಸಿಂಗಾಡಿ,ಸ್ಥಳೀಯ ಪುರಸಭಾ ಸದಸ್ಯ ಯಲ್ಲನಗೌಡ ಪಾಟೀಲ, ಪುರಸಭಾ ಮಾಜಿ ಅಧ್ಯಕ್ಷ ಬಸವರಾಜ ರಾಯರ, ರಾಜು ಗೌಡಪ್ಪಗೋಳ, ಸುನೀಲಗೌಡ ಪಾಟೀಲ, ಬಲವಂತಗೌಡ ಪಾಟೀಲ, ಈರ​‍್ಪ ಕಿತ್ತೂರ, ಪ್ರವೀಣ ಪಾಟೀಲ,ಭೀಮಪ್ಪ ಸಸಾಲಟ್ಟಿ, ದುಂಡಪ್ಪ ಜಾಧವ, ಲಕ್ಷ್ಮಣ ಮಾಂಗ, ದುಂಡಪ್ಪ ಪಟ್ಟಣಶೆಟ್ಟಿ, ದೇವರೇಶ ಉಳ್ಳಾಗಡ್ಡಿ,ಆನಂದ ಪಾಟೀಲ, ರವಿ ಬಿದರಿ, ಮಹೇಶ ಹುಬ್ಬಳ್ಳಿ, ವೀರಣ್ಣ ಅಥಣಿ, ಚನ್ನಯ್ಯ ಸಾಲಿಮಠ, ಸುರೇಶ ಜೋಗನ್ನವರ, ಅಶೋಕ ತಳವಾರ, ವಿನೋದ ಸಿಂಪಿ, ಮಹಾಲಿಂಗ ಚಿಕ್ಕನ್ನವರ ಇತರರು ಇದ್ದರು. 

ಅನಾರೋಗ್ಯಕ್ಕೀಡಾದ ಜನರು ಈ ಪ್ರಸ್ತುತ ಕೊರೋನಾ ಸನ್ನಿವೇಶದಲ್ಲಿ ದುಬಾರಿ ಬಾಡಿಗೆಗೆ ವಾಹನ ಪಡೆಯಲು ನಿಸ್ಸಹಾಯಕರಾಗಿ ನಾನಾ ರೀತಿಯಲ್ಲಿ ಸಂಕಷ್ಟಕ್ಕೀಡಾಗುತ್ತಿದ್ದಾರೆ. ಅಲ್ಲದೆ ಸ್ವಲ್ಪ ಹೆಚ್ಚು ಕಡಿಮೆಯಾದರಂತೂ ಮುಗೀತು ಬಡವರು ತಮ್ಮ ಪ್ರಾಣವನ್ನೇ ಕಳೆದುಕೊಳ್ಳಬೇಕು. ಆಸ್ಪತ್ರೆಯಲ್ಲಿರುವ ರೋಗಿಗಳಿಗೆ ಆಹಾರ ಪೂರೈಸುವ ಸಂದರ್ಭ ಅವರ ಸಂಬಂಧಿಕರು ಕೆಲವೊಮ್ಮೆ ಪೋಲೀಸರಿಂದ ಲಾಠಿ ಏಟು ಸಹ ತಿನ್ನಬೇಕಾಗಿ ಬಂದಿದೆ, ಆದ್ದರಿಂದ ಈ ಎಲ್ಲ ಸಮಸ್ಯೆಗಳನ್ನರಿತಿರುವ ನನಗೆ ಕೈಲಾದ ಸಹಾಯ ಮಾಡುವ ದೃಷ್ಟಿಯಿಂದ ಲಾಕ್ ಡೌನ್ ಮುಗಿಯುವವರೆಗೂ ಉಚಿತ ಅಂಬ್ಯುಲೆನ್ಸ್‌ ಹಾಗೂ ಕೊರೋನಾ ಚಿಕಿತ್ಸಾ ಕೇಂದ್ರಗಳಿಗೆ ಉಚಿತ ಆಹಾರ ವಿತರಣೆ ಕಾರ್ಯ ಪ್ರಾರಂಭಿಸಿದ್ದೇನೆ. ದೂರವಾಣಿ ಸಂಖ್ಯೆ 9886727033 ಇದಕ್ಕೆ ಸಂಪರ್ಕಿಸಿ.? 

ಕಿಸಾನ್ ಕಾಂಗ್ರೆಸ್ ರಾಜ್ಯ ಸಂಚಾಲಕ ಸಿದ್ದು ಕೊಣ್ಣೂರ. 



ಸುದ್ದಿ ಓದಿ