ಸಿಡಿ ಕೇಸ್‍ನಲ್ಲಿ ನನ್ನ ಸಿಲುಕಿಸಲು ಮಹಾನಾಯಕ ಡಿಕೆಶಿ 40 ಕೋಟಿ ಖರ್ಚು : ಗುತ್ತಿಗೆದಾರ ಸಂತೋಷ ಆತ್ಮಹತ್ಯೆಯಲ್ಲೂ ಕೈವಾಡ? : ತನಿಖೆಗೆ ಸಿಬಿಐಗೆ ಕೋರುವೆ ರಮೇಶ ಜಾರಕಿಹೊಳಿ

ಸಿಡಿ ಕೇಸ್‍ನಲ್ಲಿ ನನ್ನ ಸಿಲುಕಿಸಲು ಮಹಾನಾಯಕ ಡಿಕೆಶಿ 40 ಕೋಟಿ ಖರ್ಚು : ಗುತ್ತಿಗೆದಾರ ಸಂತೋಷ ಆತ್ಮಹತ್ಯೆಯಲ್ಲೂ ಕೈವಾಡ? : ತನಿಖೆಗೆ ಸಿಬಿಐಗೆ ಕೋರುವೆ ರಮೇಶ ಜಾರಕಿಹೊಳಿ

ಬೆಳಗಾವಿ : 40 ಕೋಟಿ ಹಣ ಖರ್ಚು ಮಾಡಿ ನನ್ನ ಸಿಡಿ ಕೇಸ್ ನಲ್ಲಿ ಸಿಲುಕಿಸಿ ನನ್ನ ವೈಯಕ್ತಿಕ ಜೀವನವನ್ನು ಮಹಾನಾಯಕ ಡಿಕೆಶಿ ಹಾಳು ಮಾಡಿದ್ದಾನೆ. ಈ ಕುರಿತು ನನ್ನ ಬಳಿ ಸಾಕ್ಷಿ ಇವೆ. ಅಲ್ಲದೆ ಬೆಳಗಾವಿಯ ಗುತ್ತಿಗೆದಾರ ಸಂತೋಷ ಪಾಟೀಲ ಅವರ ಆತ್ಮಹತ್ಯೆ ಹಿಂದೆ ಡಿಕೆಶಿ ಅವರ ಕೈ ಇರುವದು ಸಂಶಯ ಇದೆ. ಇವೇಲ್ಲದರ ಕುರಿತು ಸಿಬಿಐ ತನಿಖೆಯಾದರೆ ಸತ್ಯಾಸತ್ಯತೆ ಹೊರಬರಲಿದೆ. ನನ್ನ ಸಿಡಿ ಪ್ರಕರಣ ಸಿಬಿಐಗೆ ನೀಡುವಂತೆ ಕೇಂದ್ರಕ್ಕೆ ಕೋರುವದಾಗಿ ಮಾಜಿ ಸಚಿವ ರಮೇಶ ಜಾರಕಿಹೊಳಿ ಅವರು ಇಂದಿಲ್ಲಿ ಹೇಳಿದರು.

      ಬೆಳಗಾವಿಯಲ್ಲಿ ಬುಧವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮಹಾನಾಯಕ ಡಿ.ಕೆ.ಶಿವಕುಮಾರ ನನ್ನನ್ನು ಸಿಡಿ ಪ್ರಕರಣದಲ್ಲಿ ಸಿಲುಕಿಸಲು ಕುತಂತ್ರ ಮಾಡಿ ಇದಕ್ಕೆ 40 ಕೋಟಿ ಹಣ ಖರ್ಚು ಮಾಡುವ ಮೂಲಕ ನನ್ನ ವೈಯಕ್ತಿಕ ಜೀವನ ಹಾಳು ಮಾಡಿದ್ದಾನೆ. ಈ ಪ್ರಕರಣವನ್ನು ಎದುರಿಸಿ ಹೊರಗೆ ಬಂದಿದ್ದೇನೆ. ನನ್ನ ಸಿಡಿ ಕೇಸ್ ಸಿಬಿಐಗೆ ಕೊಡಿಸುತ್ತೇನೆ. ಈ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಜೊತೆ ಮಾತಾಡಿದ್ದೇನೆ. ಈ ಸಿಡಿ ಪ್ರಕರಣದಲ್ಲಿ ಮಹಾನಾಯಕನ ಕೈವಾಡ ಇರುವುದಕ್ಕೆ ನನ್ನ ಬಳಿ ಸಾಕ್ಷಿ ಇದೆ. 40 ಕೋಟಿ ಖರ್ಚು ಮಾಡಿ ರಮೇಶ್ ಜಾರಕಿಹೊಳಿಯನ್ನ ಅದರಲ್ಲಿ ಸಿಕ್ಕಿಹಾಕಿಸಿದ್ದೇನೆ ಅನ್ನೋ ಸಾಕ್ಷಿ ಇದೆ. ಸ್ವತಃ ಮಹಾನಾಯಕನೆ ಮಾತಾಡಿರುವ ಬಗ್ಗೆ ಪುರಾವೆಗಳು ನನ್ನ ಬಳಿ ಇವೆ. ಇನ್ನು ಮುಂದೆ ಎನಾದರು ನನ್ನ ವಿಷಯಕ್ಕೆ ಬಂದರೆ ಅವರ ವೈಯಕ್ತಿಕ ವಿಚಾರ ಮಾತನಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.  

    ನನ್ನ ಮಿತ್ರ ರಮೇಶ್ ಜಾರಕಿಹೊಳಿ ಅವನಿಗೆ ಮಾಡಿದ್ದೇನೆ. ಸಿಡಿ ಇಟ್ಟು ಕೆಲಸ ಮಾಡುತ್ತೇನೆ ಎಂದು ಆತ ಮಾತಾಡಿರುವ ಸಂಭಾಷಣೆ ಇದೆ. ಈ ಕುರಿತು ರಾಜ್ಯ ಸರಕಾರಕ್ಕೂ ಮನವಿ ಮಾಡಿದ್ದೇನೆ ಎಂದರು. ಸಿಡಿ ಕೇಸ್ ಸಿಬಿಐಗೆ ಒಪ್ಪಿಸಬೇಕು ಎಂದು ಪಕ್ಷದ ವರಿಷ್ಠರಿಗೆ ಹೇಳಿದ್ದೇನೆ. ಸಿಡಿ ಕೇಸ್‍ನ ಇಬ್ಬರು ಪ್ರಮುಖ ಆರೋಪಿಗಳಾದ ಶಿರಾ ಹಾಗೂ ದೇವನಹಳ್ಳಿ ಮೂಲದವರು. ಇದರಲ್ಲಿ ದೇವನಹಳ್ಳಿ ಮೂಲದವನ ಮನೆ ಮೇಲೆ ದಾಳಿಯಾದಾಗ. 90-110ಸಿಡಿ ಆತನ ಮನೆಯಲ್ಲಿ ಸಿಕ್ಕಿವೆ.

      ಇಡೀ ರಾಜ್ಯದ ಜನರ ಸಿಡಿ ಸಿಕ್ಕಿವೆ ಮಹಾನಾಯಕನ ಕುತಂತ್ರದಿಂದ ಆಗಿವೆ. ಅವು ಎಲ್ಲಾ ಸಿಬಿಐ ವಿಚಾರಣೆ ಆದರೆ ಎಲ್ಲ ಸತ್ಯಾಸತ್ಯತೆ ಹೊರಗೆ ಬರುತ್ತದೆ. ಅಲ್ಲಿ ದಾಳಿಗೆ ಹೋದ ಅಧಿಕಾರಿಯದೇ ಒಂದು ಸಿಡಿ ಸಿಕ್ಕಿದೆ. ಅದನ್ನ ಮುಚ್ಚಿಟ್ಟಿದ್ದಾರೆ ಹೀಗಾಗಿ ಇದನ್ನ ಸಿಬಿಐಗೆ ಕೊಡಬೇಕು. ಮುಂದಿನ ವಾರ ದೆಹಲಿಗೆ ಹೋಗಿ ಕೇಂದ್ರ ಸಚಿವ ಅಮಿತ್ ಶಾ ಅವರನ್ನ ಭೇಟಿಯಾಗುತ್ತೇನೆ. ಈ ಪ್ರಕರಣ ಸಿಬಿಐ ವಿಚಾರಣೆಗೆ ಕೊಟ್ಟು ಮಹಾನಾಯಕನ ಮುಖಚಾಡ ಕಳಚಬೇಕು, ಅವನಿಗೆ ಬುದ್ದಿ ಕಲಿಸಬೇಕು. ನಾನು ಒಬ್ಬನೇ ಸಂಕಷ್ಟ ಅನುಭವಿಸಿದ್ದು, ಬೇರೆಯವರು ಸಂಕಷ್ಟಕ್ಕೆ ಸಿಲುಕಬಾರದು. ಬಹಳಷ್ಟು ಜನರನ್ನು ಬ್ಲ್ಯಕ್‍ಮೇಲ್ ಮಾಡಲು ರೆಡಿಯಾಗಿದ್ದಾನೆ ಎಂದು ವಾಗ್ದಾಳಿ ನಡೆಸಿದರು.

   ಅದರಂತೆ ಬೆಳಗಾವಿ ಗುತ್ತಿಗೆದಾರ ಸಂತೋಷ ಪಾಟೀಲ್ ಕೇಸ್ ಕೂಡ ಸಿಬಿಐಗೆ ಕೊಡಬೇಕು. ಸಂತೋಷ ಪಾಟೀಲ್ ಹಗರಣದಲ್ಲಿ ಯಾರಿದ್ದಾರೆ ಅನ್ನೋದು ಹೊರಗೆ ಬರಬೇಕು. ಸಂತೋಷ್ ಪಾಟೀಲ್ ಉಡುಪಿಗೆ ಬರುವ ಮುನ್ನ ಚಿಕ್ಕಮಗಳೂರು ಹೋಗಿದ್ದ. ಒಂದೇ ರೂಮ್‍ನಲ್ಲಿ ಅಂದು ಎಲ್ಲರೂ ಇದ್ದರು. ಉಡುಪಿಗೆ ಬಂದ ಬಳಿಕ ಎರಡು ರೂಮ್ ಯಾಕೆ ಮಾಡಿದರು ? ಬಹಳ ಮುಖ್ಯವಾದ ಅಂಶ ಇದೆ ಇದು. ಸಿಬಿಐಗೆ ಕೊಟ್ಟರೆ ಎಲ್ಲವೂ ಹೊರಗೆ ಬರುತ್ತೆ. ನಮ್ಮ ಸರಕಾರಕ್ಕೆ ಮುಜುಗರ ಆಗಬಾರದು ಎನ್ನುವ ಕಾರಣಕ್ಕಾಗಿ ಸುಮ್ಮನೆ ಇದ್ದೇವೆ. ಸಂತೋಷ ಪಾಟೀಲ್ ಆತ್ಮಹತ್ಯೆ ಹಿಂದೆ ಮಹಾನಾಯಕನ ಇರಬಹುದು. ಇದನ್ನು ಸಿಬಿಐಗೆ ಕೊಡುವಂತೆ ಈಗಾಗಲೇ ಸಿಎಂ ಹಾಗೂ ಕೇಂದ್ರ ಗೃಹ ಸಚಿವರಿಗೆ ಹೇಳಿದ್ದೇನೆ ಎಂದರು.

    ಡಿಕೆ ಶಿವಕುಮಾರ್‍ಗೆ ರಮೇಶ್ ಜಾರಕಿಹೊಳಿ ಟಾರ್ಗೆಟ್ ವಿಚಾರಕ್ಕೆ ಉತ್ತರಿಸಿದ ಅವರು, ಡಿಕೆಶಿಗೆ ನನ್ನ ಒಬ್ಬನದ್ದೇ ಹೆದರಿಕೆ ಇದೆ, ಅವನನ್ನ ಮುಗಿಸುತ್ತೇನೆ ಅಂತಾ ಹೆದರಿಕೆ ಇದೆ. ನಾನೊಬ್ಬನೇ ಅವನನ್ನ ಎದುರಿಸುವನು. ಇಂತಹ ನೂರು ಸಿಡಿ ಬರಲಿ ನಾನು ಗಟ್ಟಿ ಇದ್ದೇನೆ ಎಂದರು. ಸ್ಥಳೀಯ ನಾಯಕರ ಪಾತ್ರ ಇದೆಯಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ರಮೇಶ, ಅವರು ಏಜೆಂಟ್‍ರು ನಾನು ಅವರ ಬಗ್ಗೆ ಮಾತನಾಡವುದರಲ್ಲಿ ಅರ್ಥ ಇಲ್ಲ. ಎನಿದ್ದರೂ ಡಿಕೆಶಿ ಆ್ಯಂಡ್ ಕಂಪನಿ ನೋಡೋಣ ಎಂದು ನುಡಿದರು.

     ರಮೇಶ ಜಾರಕಿಹೊಳಿ ಸಂಸ್ಕೃತಿ ಬಗ್ಗೆ ಹೆಬ್ಬಾಳಕರ್ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಅವರು ದೊಡ್ಡ ಮನೆತನದಿಂದ ಬಂದಂತವರು, ಸಂಸ್ಕೃತಿ ಮನೆತನ ಅವರದ್ದು. ಅವರ ಮುಂದೆ ಯಾರು ಇಲ್ಲಾ ಬಹಳ ಸಂಸ್ಕೃತದಿಂದ ಬಂದವರು. ಅವರು ನಡೆದರೇನೆ ದೊಡ್ಡ ದಾರಿ ಎಂದು ಶಾಸಕಿ ಹೆಬ್ಬಾಳ್ವರ್‍ಗೆ ತಿರುಗೇಟು ನೀಡಿದರು. ಪಂಚಮಸಾಲಿ ಹೋರಾಟಕ್ಕೆ ಸಂಪೂರ್ಣ ಬೆಂಬಲ ಇದೆ. ಆದರೆ, ಕೆಲವು ನಾಯಿಗಳನ್ನ ಬಿಟ್ಟರೆ ಒಳ್ಳೆಯದು ಎಂದು ಪರೋಕ್ಷವಾಗಿ ಶಾಸಕಿ ಲಕ್ಷ್ಮೀ ಹೆಬ್ಬಾಳರ್‍ನ ನಾಯಿಗೆ ಹೋಲಿಸಿದರು.

    ಕಾಂಗ್ರೆಸ್‍ನಿಂದ ಮಾಜಿ ಸಚಿವ ರಮೇಶ್ ಜಾರಕಿಹೊಳಿ ವಿರುದ್ಧ ಕೇಸ್ ವಿಚಾರದ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ನಾನು ಆರನೇ ಅವಧಿ ಶಾಸಕ ನನಗೆ ಕಾನೂನು ಅರಿವು ಇದೆ. ಯಾವ ಅಭ್ಯರ್ಥಿ ಪರವಾಗಿ ನಾನು ಹೇಳಿಲ್ಲ. ಗ್ರಾಮೀಣ ಶಾಸಕರು ಸಾರ್ವಜನಿಕವಾಗಿ ಕಾಣಿಕೆ ಹಂಚುತ್ತಿದ್ದಾರೆ, ಅದು ಆಮಿಷ ಅಲ್ವಾ? ಅಂತಹ ಸಣ್ಣ ರಾಜಕಾರಣ ಮಾಡಬಾರದು. ನಾನು ಗ್ರಾಮೀಣ ಕ್ಷೇತ್ರದಲ್ಲಿ ಯಾರಗೆ ಆಮಿಷ ನೀಡಿಲ್ಲ ಅಭಿವೃದ್ದಿಗೆ 10 ಕೋಟಿ ಹಣ ಖರ್ಚು ಮಾಡುದಾಗಿ ಹೇಳಿದ್ದೇನೆ ಎಂದು ನುಡಿದರು.

ಸುದ್ದಿ ಓದಿ