ಮತದಾರರಿಗೆ ಹಣದ ಆಮಿಷ : ರಮೇಶ ಜಾರಕಿಹೊಳಿ ಚುನಾವಣೆ ಸ್ಪರ್ಧೆಗೆ ನಿರ್ಭಂಧ ಹಾಕುವಂತೆ ಚುನಾವಣಾ ಆಯೋಗಕ್ಕೆ ದೂರು : ಗಡಾದ
ಲೋಕದರ್ಶನ ವರದಿ ನವೀಕರಿಸಲಾಗಿದೆ:
ಬೆಳಗಾವಿ 25: ಸುಳೇಭಾವಿಯಲ್ಲಿ ಮೊನ್ನೆ ನಡೆದ ಸಮಾವೇಶದಲ್ಲಿ ಮತದಾರರಿಗೆ ಆಮೀಷ ನೀಡುವ ಮೂಲಕ ಪ್ರಜಾ ಪ್ರಭುತ್ವದ ಕಗ್ಗೊಲೆ ಮಾಡಲು ಹೋರಟಿರುವ ಗೋಕಾಕ ಶಾಸಕ ರಮೇಶ ಜಾರಕಿಹೊಳಿ ಅವರಿಗೆ ಈ ಬಾರಿ ಚುನಾವಣೆಗೆ ಸ್ಪಧರ್ೆ ಮಾಡಲು ನಿರ್ಭಂಧ ಹಾಕುವಂತೆ ರಾಜ್ಯದ ಮುಖ್ಯ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದು, ಒಂದು ವೇಳೆ ಆಯೋಗ ದೂರು ಕ್ರಮಕೈಗೊಳ್ಳದಿದ್ದಲ್ಲಿ ಇದರ ವಿರುದ್ದ ನ್ಯಾಯಾಲಯದ ಮೆಟ್ಟಿಲು ಹತ್ತುವದಾಗಿ ಮೂಡಲಗಿ ಮಾಹಿತಿ ಹಕ್ಕು ಕಾರ್ಯಕರ್ತ ಭೀಮಪ್ಪ ಗಡಾದ ಅವರು ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಗಡಾದ ಅವರು, ಮೊನ್ನೆ ಸುಳೇಭಾವಿಯಲ್ಲಿ ರಮೇಶ ಜಾರಕಿಹೊಳಿ ಅವರ ಅಭಿಮಾನಿಗಳು ಆಯೋಜಿಸಿದ್ದ ಸಮಾವೇಶದಲ್ಲಿ ಹೇಳಿಕೆ ನೀಡಿರುವ ರಮೇಶ ಜಾರಕಿಹೊಳಿ ಅವರು ಬರುವ ವಿಧಾನಸಭೆ ಚುನಾವಣೆಯಲ್ಲಿ ಗ್ರಾಮೀಣ ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ಅವರನ್ನು ಸೋಲಿಸಲು 10 ಕೋಟಿಗಿಂತಲೂ ಹೆಚ್ಚಿನ ಹಣ ಖಚರ್ು ಮಾಡುವದಾಗಿ ಸಾರ್ವಜನಿಕವಾಗಿ ಹೇಳಿಕೊಂಡಿದ್ದಾರೆ. ಅಲ್ಲದೇ ಪ್ರತಿಯೊಬ್ಬ ಮತದಾರರಿಗೆ 6 ಸಾವಿರ ಹಣ ಕೊಡುತ್ತೇವೆ ನೀವು ನಮಗೆ ಮತ ಹಾಕಿ ಗೆಲ್ಲಿಸಬೇಕು ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡಿದ್ದರು.
ಗೋಕಾಕ ಕ್ಷೇತ್ರದ ಹಾಲಿ ಶಾಸಕರು ನೀಡಿರುವ ಈ ಹೇಳಿಕೆಯನ್ನು ಮತ್ತು ಸಕರ್ಾರಗಳನ್ನೇ ಅಸ್ಥಿರಗೊಳಿಸುವ ಸಲುವಾಗಿ ಇವರು ತೆಗೆದುಕೊಂಡಿದ್ದ ಮೊದಲಿನ ಕೆಲವು ಪ್ರಮುಖ ಪಾತ್ರ, ಘಟನಾವಳಿಗಳನ್ನು ಗಮನಿಸಿದಾಗ, ಸತತವಾಗಿ ಇವರು ಪ್ರಜಾಪ್ರಭುತ್ವಕ್ಕೆ ಆಧಾರ ಸ್ತಂಭವಾಗಿರುವ ಪ್ರಜೆಗಳ ಹಕ್ಕನ್ನು ಕಸಿಯುವ ಹಾಗೂ ಆಮಿಷವೊಡ್ಡುವ ಕಾರ್ಯಗಳನ್ನೇ ಮಾಡುತ್ತ ಕೇವಲ ಹಣ ಬಲ ಮತ್ತು ತೋಳ ಬಲದ ಮೇಲೆಯೆ ಚುನಾಯಿತರಾಗುತ್ತಾ ಬಂದಿರುವರು ಎಂಬುದು ಸ್ಪಷ್ಟವಾಗುತ್ತದೆ ಎಂದು ದೂರಿನಲ್ಲಿ ಕಾಣಿಸಲಾಗಿದೆ. ಇವರಿಂದ ಜನರಿಗೆ ಸಾಮಾಜಿಕ ನ್ಯಾಯ ಸಿಗುವದಿಲ್ಲ ಎಂಬ ಆತಂಕ ಈ ಭಾಗದ ಜನರಲ್ಲಿ ಮೂಡಿದೆ. ಈ ಹಿನ್ನೆಯಲ್ಲಿ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ರಮೇಶ ಜಾರಕಿಹೊಳಿ ಅವರು ಸ್ಪಧರ್ೆ ಮಾಡದಂತೆ ನಿರ್ಭಂಧ ಹಾಕಿ ಕ್ರಮಕೈಗೊಳ್ಳುವಂತೆ ದೂರು ನೀಡಿದ್ದೇನೆ ಎಂದು ಹೇಳಿದ್ದಾರೆ.
ಪ್ರಜಾ ಪ್ರತಿನಿಧಿ ಕಾಯ್ದೆ 1951 ರ ಕಲಂ 123 (1) ಹಾಗೂ ಭಾರತೀಯ ದಂಡಸಂಹಿತೆ ಕಲಂ 171 (ಃ) (ಇ) ಇವುಗಳ ಪ್ರಕಾರ ಯಾವುದೇ ಚುನಾವಣೆಯ ಸಮಯದಲ್ಲಿ ಹಣದ ಆಮಿಷ ಒಡ್ಡುವುದು ಹಾಗೂ ಹಣ ನೀಡುವುದಾಗಲಿ ಅಕ್ಷಮ್ಯ ಅಪರಾಧ ಎಂದು ಹೇಳಲಾಗಿದೆ. ಅಲ್ಲದೇ ಒಂದು ವೇಳೆ ಹಣ ಹಂಚಿದ್ದು ಸಾಬೀತಾದರೆ ಅಂತವರು ಶಿಕ್ಷಾರ್ಹರು ಎಂದೂ ಕೂಡಾ ಕಾನೂನಿನಲ್ಲಿ ಹೇಳದ್ದನ್ನು ಸದರಿ ದೂರಿನಲ್ಲಿ ವಿವರಿಸಲಾಗಿದೆ.
ಬರಲಿರುವ ವಿಧಾನಸಭಾ ಚುನಾವಣೆಯ ಸಮಯದಲ್ಲಿ ಒಬ್ಬ ಅಭ್ಯಥರ್ಿಯನ್ನು ಸೋಲಿಸಲು 10 ಕೋಟಿಗೂ ಹೆಚ್ಚು ಹಣವನ್ನು ಮೀಸಲಿಡುವದಾಗಿ ಮತ್ತು ಪ್ರತಿಯೊಬ್ಬ ಮತದಾರನಿಗೂ 6 ಸಾವಿರ ರೂ. ಗಳನ್ನು ನೀಡುತ್ತೇನೆ ಎಂದು ಸಾರ್ವಜನಿಕ ಸಭೆಯಲ್ಲಿ ಬಹಿರಂಗವಾಗಿ ಘೋಷಣೆ ಮಾಡಿರುವುದು ಪ್ರಜಾ ಪ್ರಭುತ್ವದ ಮೂಲತತ್ವಕ್ಕೆ ಕೊಡಲಿ ಪೆಟ್ಟನ್ನು ಕೊಟ್ಟಂತಾಗಿದೆ. ಕೇವಲ ಹಣದ ಬಲದಿಂದಲೇ ಚುನಾವಣೆ ಗೆದ್ದು ಬರುತ್ತೇವೆ ಮತ್ತು ಚುನಾವಣೆಗಳನ್ನು ತಮಗೆ ಹೇಗೆ ಬೇಕಾದ ಹಾಗೆ ನಡೆಸಿ ಜಯಶೀಲರಾಗುತ್ತೇವೆ ಎಂಬ ಭ್ರಮೆಯಲ್ಲಿರುವ ಇವರಿಂದ ಸಾಮಾಜಿಕ ನ್ಯಾಯ ಹಾಗೂ ಸಿದ್ಧಾಂತದ ರಾಜಕೀಯವನ್ನು ನಿರೀಕ್ಷಿಸಲಾದಿತೇ? ಎಂಬ ಬಹುದೊಡ್ಡ ಪ್ರಶ್ನೆ ಈ ಭಾಗದ ಜನರ ಮನಸ್ಸಿನಲ್ಲಿ ಮೂಡಿದ್ದರಿಂದ ಬರಲಿರುವ ಚುನಾವಣೆಯಲ್ಲಿ ರಮೇಶ ಜಾರಕಿಹೊಳಿ ಇವರ ಸ್ಪಧರ್ೆಗೆ ನಿರ್ಭಂದ ಹೇರಲು ಮುಖ್ಯ ಚುನಾವಣಾಧಿಕಾರಿಗಳಲ್ಲಿ ವಿನಂತಿಸಲಾಗಿದೆ ಎಂದು ವಿವರಿಸಿದ್ದಾರೆ.