ರಮೇಶ ಹರಕಂಗಿಗೆ ಪಿಎಚ್‌ಡಿ ಪದವಿ
ಮಹಾಲಿಂಗಪುರ 26: ಪಟ್ಟಣದ ನಿವಾಸಿ ರಮೇಶ ಹರಕಂಗಿ ಅರ್ಥಶಾಸ್ತ್ರವನ್ನು ಸಂಶೋಧನಾ ವಿಷಯವನ್ನಾಗಿಸಿಕೊಂಡು "ಹಾರ್ಟಿಕಲ್ಚರ್ ಮಾರ್ಕೆಟಿಂಗ್: ಎ ಕಂಪ್ಯಾರೇಟಿವ್ ಸ್ಟಡಿ ಆಫ್ ಗ್ರೇಪ್ಸ್ ಆ್ಯಂಡ್ ಪೊಮೆಗ್ರೆನೆಟ್ ಕ್ರಾಪ್ಸ್ ಇನ್ ಬಾಗಲಕೋಟ ಡಿಸ್ಟ್ರಿಕ್ಟ್ ಆಫ್ ಕರ್ನಾಟಕ ಸ್ಟೇಟ್"ಎಂಬ ಮಹಾಪ್ರಬಂಧದ ಶೀರ್ಷಿಕೆಯನ್ನು ಅಧ್ಯಯನ ಮಾಡಿದ್ದಾರೆ. ನಿವೃತ್ತ ಪ್ರಾಧ್ಯಾಪಕ ಡಾ. ವಿ ಬಿ ಅಣ್ಣಿಗೇರಿ ಮಾರ್ಗದರ್ಶನ ನೀಡಿದ್ದು, ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯವು ಪಿ ಎಚ್ ಡಿ ಪದವಿ ಪಡೆಯಲು ಅರ್ಹರೆಂದು ಘೋಷಿಸಿದೆ.