ಮಾಜಿ ಶಾಸಕ ಹೆಚ್‌.ಎಂ. ಚಂದ್ರಶೇಖರ​‍್ಪ ನಿಧನಕ್ಕೆ ರಂಭಾಪುರಿ ಶ್ರೀಗಳ ಸಂತಾಪ

ಮಾಜಿ ಶಾಸಕ ಹೆಚ್‌.ಎಂ. ಚಂದ್ರಶೇಖರ​‍್ಪ ನಿಧನಕ್ಕೆ ರಂಭಾಪುರಿ ಶ್ರೀಗಳ ಸಂತಾಪ

ಲೋಕದರ್ಶನ ವರದಿ 

ಶಿವಮೊಗ್ಗ 27: ಮಾಜಿ ಶಾಸಕ ಹೆಚ್‌.ಎಂ. ಚಂದ್ರಶೇಖರ​‍್ಪ ಅವರ ನಿಧನಕ್ಕೆ ಬಾಳೆಹೊನ್ನೂರು ರಂಭಾಪುರಿ ಪೀಠದ ಡಾ. ವೀರಸೋಮೇಶ್ವರ ಜಗದ್ಗುರುಗಳು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.  ಚಂದ್ರಶೇಖರ​‍್ಪ ಅವರು ಕ್ರಿಯಾಶೀಲ, ನೇರ ನಿಷ್ಠುರ ವ್ಯಕ್ತಿತ್ವ ಹೊಂದಿದ್ದ ನಾಯಕರಾಗಿದ್ದು, ವೀರಶೈವ-ಲಿಂಗಾಯತ ಸಮಾಜದ ಹಿತಕ್ಕಾಗಿ ಶ್ರಮಿಸಿದವರು ಎಂದು ಶ್ರೀಗಳು ಸ್ಮರಿಸಿದ್ದಾರೆ.  

ಶಿವಮೊಗ್ಗ ನಗರದಲ್ಲಿ 34 ವರ್ಷಗಳ ಹಿಂದೆ ನಡೆದ  ಜಗದ್ಗುರು ಪಂಚಾಚಾರ್ಯ ಅಡ್ಡಪಲ್ಲಕ್ಕಿ ಮಹೋತ್ಸವವನ್ನು ಯಶಸ್ವಿಯಾಗಿ ನಡೆಸುವಲ್ಲಿ ಚಂದ್ರಶೇಖರ​‍್ಪ ಅವರ ಸೇವೆ ಮತ್ತು ಸಮರೆ​‍್ಣಯನ್ನು ನೆನಪಿಸಿಕೊಂಡಿದ್ದಾರೆ. ಆ ಕಾರ್ಯಕ್ರಮದ ಬಳಿಕ ಅವರು ಶಿವಮೊಗ್ಗ ಕ್ಷೇತ್ರದ ಶಾಸಕರಾಗಿ ಆಯ್ಕೆಯಾಗಿದ್ದು, ಅದನ್ನು ಗುರುಸೇವೆಯ ಫಲವೆಂದು ಅವರು ಭಾವಿಸುತ್ತಿದ್ದರು ಎಂದು ತಿಳಿಸಿದ್ದಾರೆ.  ದಿವಂಗತ ಚಂದ್ರಶೇಖರ​‍್ಪ ಅವರ ಪವಿತ್ರ ಆತ್ಮಕ್ಕೆ ಚಿರಶಾಂತಿ ಲಭಿಸಲಿ. ಅವರ ಅಗಲಿಕೆಯ ದುಃಖವನ್ನು ಭರಿಸುವ ಶಕ್ತಿಯನ್ನು ಭಗವಂತರು ಕುಟುಂಬದ ಸದಸ್ಯರಿಗೆ ನೀಡಲಿ ಎಂದು ತಮ್ಮ ಸಂತಾಪ ಸಂದೇಶದಲ್ಲಿ ಪ್ರಾರ್ಥಿಸಿದ್ದಾರೆ. 


ಸುದ್ದಿ ಓದಿ