ಬಳ್ಳಾರಿ

ರಾಮಾಯಣ ಪೌರಾಣಿಕ ಬಯಲಾಟ ಪ್ರದರ್ಶನ

ರಾಮಾಯಣ ಪೌರಾಣಿಕ ಬಯಲಾಟ ಪ್ರದರ್ಶನ

ಬಳ್ಳಾರಿ, ಅ.30: ದೇವಿಶ್ರೀ ಸಾಂಸ್ಕೃತಿಕ ಬಯಲಾಟ ಕಲಾ ಟ್ರಸ್ಟ್‌ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬಳ್ಳಾರಿ ಇವರ ಸಂಯುಕ್ತ್ತಾಶ್ರಯದಲ್ಲಿ ರಾಮಾಯಣ ಪೌರಾಣಿಕ ಬಯಲಾಟ ಪ್ರದರ್ಶನವು ದಿನಾಂಕ 29 ರಂದು ಸಂಜೆ ಬಳ್ಳಾರಿ ತಾಲ್ಲೂಕಿನ ಎಂ.ಗೋನಾಳ್ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅತ್ಯಂತ ಅದ್ದೂರಿಯಾಗಿ ನಡೆಯಿತು.  

ಊರಿನ ಹಿರಿಯ ಮುಖಂಡ ಗೋನಾಳ್ ಎಂ. ವಿರುಪಾಕ್ಷಗೌಡ ಮತ್ತು ಗ್ರಾಮ ಪಂಚಾಯಿತಿ ಸದಸ್ಯರು ಉದ್ಘಾಟಿಸಿದರು.  

ನಶಿಸುತ್ತಿರುವ ಬಯಲಾಟ ಕಲೆಯನ್ನು ಇಂದಿನ ದಿನಗಳಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ನಡೆಸುತ್ತಿರುವ ಮೂಲಕ ಕಲೆಯನ್ನು ಜೀವಂತವಾಗಿರಿಸುವ ಕಾರ್ಯವನ್ನು ಕಲಾವಿದರು ಮಾಡುತ್ತಿರುವುದು ಅತ್ಯಂತ ಹರ್ಷದಾಯಕ ಎಂದರು.  

ಬಳ್ಳಾರಿಯ ಹಿರಿಯ ಕಲಾವಿದರಾದ ಸುಜಾತಮ್ಮ ಅವರ ಕಲಾಸೇವೆಯನ್ನು ಗುರುತಿಸಿ ಕರ್ನಾಟಕ ರಾಜ್ಯ ಸರ್ಕಾರವು ಶ್ರೀ ಮಹರ್ಷಿ ವಾಲ್ಮೀಕಿ ಪ್ರಶಸ್ತಿಯನ್ನು ನೀಡಿರುವುದು ತುಂಬಾ ಹರ್ಷದಾಯಕ ಸಂಗತಿ ಎಂದರು. ಪ್ರಾರ್ಥನೆ ಗೀತೆ ಆಲಾಪಿಸಿ, ಕಾರ್ಯಕ್ರಮದ ಅಧ್ಯಕ್ಷತೆಯನ್ನು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತೆ ಸುಜಾತಮ್ಮ ಅವರು ವಹಿಸಿದ್ದರು. ನಂತರ ಬಿ.ಲಕ್ಷ್ಮಿನಾರಾಯಣ ಮತ್ತು ತಂಡದವರಿಂದ ರಾಮಾಯಣ ಪೌರಾಣಿಕ ಬಯಲಾಟ ಪ್ರದರ್ಶನ ನಡೆಯಿತು.  

 ರಂಗಭೂಮಿ ಕಲಾವಿದೆ ಯರ‌್ರಮ್ಮ, ಪ್ರಾಧ್ಯಾಪಕರಾದ ಚಕ್ರಧರ್, ಗ್ರಾಮ ಪಂಚಾಯಿತಿ ಸದಸ್ಯರಾದ ಮಂಜು ಗೋನಾಳ್ ಮತ್ತಿತರರು ಉಪಸ್ಥಿತರಿದ್ದರು. ಕುಸುಮಾ ನಿರೂಪಣೆಯೊಂದಿಗೆ ಸ್ವಾಗತ ಮಾಡಿದರು. ಜಿ. ರಾಜೇಂದ್ರ ಪ್ರಸಾದ್ ವಂದಿಸಿದರು. 


ಸುದ್ದಿ ಓದಿ