ರೋಣ

ರಮಾಭಾಯಿ ಅಂಬೇಡ್ಕರವರ ಜಯಂತ್ಯೋತ್ಸವ

ರಮಾಭಾಯಿ ಅಂಬೇಡ್ಕರವರ ಜಯಂತ್ಯೋತ್ಸವ


ಲೋಕದರ್ಶನ ವರದಿ  

ರೋಣ 25:  ದಲಿತ ಪ್ರಗತಿಪರ ಚಿಂತಕರ ವೇದಿಕೆ ರೋಣ, ಇವರ ಸಂಯುಕ್ತ ಆಶ್ರಯದಲ್ಲಿ ವಿಶ್ವರತ್ನ ಮಹಾನ್ ಮಾನವತಾವಾದಿ ಡಾ. ಬಿ ಆರ್ ಅಂಬೇಡ್ಕರವರ ಧರ್ಮ ಪತ್ನಿಯಾದ ಮಾತೋಶ್ರೀ ರಮಾಭಾಯಿ ಅಂಬೇಡ್ಕರವರ 124 ನೇ ಜಯಂತೋತ್ಸವ ಕಾರ್ಯಕ್ರಮದ  ಅಂಗವಾಗಿ ತಾಲೂಕಿನ ಗ್ರಾಮ ಪಂಚಾಯತಗೆ ನೂತನ ಆಯ್ಕೆಯಾದ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಸದಸ್ಯರುಗಳಿಗೆ ಸನ್ಮಾನ ಸಮಾರಂಭ ನೇರೆವೇರಿತು. ಈ ಕಾರ್ಯಕ್ರಮದ ಉದ್ಘಾಟಣೆಯನ್ನು ಮಾಜಿ ಶಾಸಕರಾದ ಜಿ.ಎಸ್‌. ಪಾಟೀಲ, ನೇರೆವೇರಿಸಿ ಮಾತನಾಡಿ ಅಂಬೇಡ್ಕರವರು ಮಹಾನ್ ವ್ಯಕ್ತಿಯಂತ ಇವರನ್ನ ಸಂವಿಧಾನ ಶಿಲ್ಪಿ ಇಡೀ ಭಾರತ ದೇಶದಲ್ಲಿ ಅಮರವಾಗಿದೆ. ಇಂತಹ ಮಹಾನ್ ವ್ಯಕ್ತಿಗಳ ಅವರ ಧರ್ಮಪತ್ನಿಯಾದ ಮಾತೋಶ್ರೀ ರಮಾಭಾಯಿ ಅಂಬೇಡ್ಕರವರ 124 ನೇ ಜಯಂತೋತ್ಸವ ಕಾರ್ಯಕ್ರಮವನ್ನು ನೇರೆವೇರಿಸಿದ್ದೀರಿ.ನಮಗೆ ಬಹಳ ಸಂತಸವಾಗಿದೆ.ರಮಾಭಾಯಿ ಇವರ  ಚಿಕ್ಕಂದಿನಲ್ಲಿ ಬಹಳ ಕಷ್ಟಪಟ್ಟು ಅಂಬೇಡ್ಕರಂತೆ ಕೆಲಸಗಳನ್ನು ಮಾಡಿದ್ದಾರೆ.ಇಂತಹ ಮಹಾನ್ ವ್ಯಕ್ತಿಗಳನ್ನು ಇವತ್ತಿನ ದಿವಸ ನೆನಸಬೇಕಾಗುತ್ತದೆಂದು ಯುವಕ ಯುವತಿಯರಿಗೆ ಕರೆ ನೀಡಿದರು. ಇದೇ ಸಂದರ್ಭದಲ್ಲಿ  ಬಸವಂತಪ್ಪ ಎಚ್‌. ತಳವಾರ ರೋಣ ತಾಲೂಕ ಮಹರ್ಷಿ ವಾಲ್ಮೀಕಿ ನಾಯಕ ಸಂಘದ ಅಧ್ಯಕ್ಷ ಮಾತನಾಡಿ ಡಾ.ಅಂಬೇಡ್ಕರ ಅವರ ತತ್ವಗಳು ಹಾಗೂ ಸಂವಿಧಾನ ಬರೆದ ಶಿಲ್ಪಿ ಇಂತಹ ಮಹಾನ್ ವ್ಯಕ್ತಿಗಳನ್ನು ಇಡೀ ಭಾರತ ದೇಶದಲ್ಲಿ ಇವರ ಹೆಸರು ಅಜರಾಮರವಾಗಿದೆ.  

ಸಂವಿಧಾನವನ್ನು ಬರೆದ ಮಹಾನ್ ವ್ಯಕ್ತಿ ಇದೇ ಸಂದರ್ಭದಲ್ಲಿ ಮಾತೋಶ್ರೀ ರಮಾಭಾಯಿ ಅಂಬೇಡ್ಕರವರ 124 ನೇ ಜಯಂತೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ. ಬಹಳ ಸಂತಸವಾಗಿದೆ ರಮಾಭಾಯಿಯವರು ತಮ್ಮ ಜೀವನದಲ್ಲಿ ಎಷ್ಟೋ ಕಷ್ಟಗಳು ಬಂದರೂ ಸಹಿಸಿಕೊಂಡು ಅಂಬೇಡ್ಕರವರ  ತತ್ವಗಳನ್ನು ಪಾಲಿಸಿದರು.ಇವತ್ತಿನ ಸಂದರ್ಭದಲ್ಲಿ ಎಷ್ಟು ಹೋಗಳಿದರೂ ಸಾಲದು ಎಂದರು.      ಇದೇ ಸಂದರ್ಭದಲ್ಲಿ ನೂತನವಾಗಿ ಆಯ್ಕೆಯಾದ ಗ್ರಾಮ ಪಂಚಾಯತ ಸದಸ್ಯರುಗಳಿಗೆ ಸನ್ಮಾನ ಮಾಡಿದ್ದೀರಿ, ಸನ್ಮಾನವನ್ನು ಸ್ವೀಕರಿಸಿಕೊಂಡು ತಮ್ಮ ತಮ್ಮ ಗ್ರಾಮದಲ್ಲಿ ಬಡಜನರ ಕೆಲಸಗಳನ್ನು ಪ್ರಾಮಾಣಿಕವಾಗಿ ಮಾಡಿಕೊಡಬೇಕೆಂದು ಯುವಕ ಯುವತಿಯರಿಗೆ ಕರೆ ನೀಡಿದರು. ಗ್ರಾಮ ಪಂಚಾಯಿತಿಗೆ ಆಯ್ಕೆಯಾದ ಮಹಿಳೆಯರು ಸಾರ್ವಜನಿಕರ ಕುಂದು ಕೋರತೆಗಳನ್ನು ಬಗೆಹರಿಸಿ ಸರ್ಕಾರದಿಂದ ಅನುದಾನ ತಂದು ಅಭಿವೃದ್ದಿ ಮಾಡಬೇಕೆಂದು ಕರೆ ನೀಡಿದರು.  

ಶರಣು ಎಂ. ಪೂಜಾರ ಮಾತನಾಡಿ ಡಾ. ಅಂಬೇಡ್ಕರ ಸಂವಿಧಾನವನ್ನು ಬರೆದ ಶಿಲ್ಪಿ ಇಂತಹ ಮಹಾನ್ ವ್ಯಕ್ತಿಗಳನ್ನು ಎಷ್ಟು ಹೊಗಳಿದರು ಸಾಲದು.ಇವರ ಧರ್ಮಪತ್ನಿಯ ಮಾತೋಶ್ರೀ ರಮಾಭಾಯಿ ಅಂಬೇಡ್ಕರವರ 124 ನೇ ಜಯಂತೋತ್ಸವ ಕಾರ್ಯಕ್ರಮವನ್ನು ಯಶ್ವಸ್ವಿಯಾಗಿ ಮಾಡಿದ್ದೀರಿ ಇವರ ತತ್ವಗಳು ಅಂಬೇಡ್ಕರಂತೆ ನೆಡದಿಕೊಂಡಿರುತ್ತಾರೆ.ಇವರ ಜಯಂತೋತ್ಸವ ಶುಭವಾಗಲಿ ಎಂದು ಹಾರೈಸಿದರು. ಈ ಸಭೆಯಲ್ಲಿ ಸಾನೀಧ್ಯವಹಿಸಿದ ಶಿವಶರಣ ಗದಿಗೆಪ್ಪಜ್ಜನವರು, ಮರುಳ ಶಿದ್ದೇಶ್ವರ ಮಹಾಸ್ವಾಮಿಗಳು,ಬಸವರಾಜ ಮಹಾಸ್ವಾಮಿಗಳು, ಸದ್ಗುರು ಹಜರತ್ ಸಯ್ಯದ ರಾಜಷಾಹ ಲಿಂಗ ಮಾನವ ಧರ್ಮ ಪೀಠ,ಉದ್ಘಾಟಕರಾಗಿ ಜಿ.ಎಸ್‌. ಪಾಟೀಲ ಮಾಜಿ ಶಾಸಕರು, ಮುಖ್ಯ ಅತಿಥಿಗಳಾಗಿ, ಬಸವಂತಪ್ಪ ಎಚ್‌. ತಳವಾರ, ರೋಣ ತಾಲೂಕ ಮಹರ್ಷಿ ವಾಲ್ಮೀಕಿ ನಾಯಕ ಸಂಘದ ಅಧ್ಯಕ್ಷರು,ಅಧ್ಯಕ್ಷತೆ: ಪ್ರಕಾಶ ಹೊಸಳ್ಳಿ, ಅಥಿತಿಗಳಾಗಿ ಶರಣಪ್ಪ ದೊಡ್ಡಮನಿ, ಶರಣು ಪೂಜಾರ,ವಾಸುದೇವ ಹಿಂದಿನಮನಿ, ಸೋಮ ನಾಗರಾಜ,ಈಶ್ವರ ಹಲಗಿ,ಮೌನೇಶ ಹಾದಿಮನಿ,ಈರ​‍್ಪ ತೇಗ್ಗಿನಮನಿ,ಸಂತೋಷ ಕಡಿವಾಳ,ಚಂದ್ರಶೇಖರ ಬಡಿಗೇರ ಸೇರಿದಂತೆ ಮುಂತಾದ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ರೋಣ ಹಾಗೂ ಗ್ರಾಮೀಣ ಪ್ರದೇಶದಿಂದ ಬಂದ ಹಿರಿಯರು,ಯುವಕರು, ಯುವತಿಯರು, ಸಭೆಯಲ್ಲಿ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಶ್ರೀ ಸದ್ಗುರು ಹಜರತ ಸಯ್ಯದ ರಾಜಷಾಹ ಲಿಂಗ ಮಾನವ ಧರ್ಮಪೀಠ,ಎಲ್ಲಾ ಗ್ರಾಮ ಪಂಚಾಯತ ಸದಸ್ಯರಿಗೆ ಸನ್ಮಾನ ಮಾಡಿ ಆರ್ಶಿವಚನ ನೀಡಿದರು.ನೂತನವಾಗಿ ಆಯ್ಕೆಯಾದ ಗ್ರಾಮ ಪಂಚಾಯತ ಸದಸ್ಯರು ನಿಮ್ಮೆಲ್ಲರಿಗೂ ಸನ್ಮಾನ ಮಾಡಿದ್ದೇವೆ ಎಲ್ಲರೂ ಒಳ್ಳೆಯ ರೀತಿಯಿಂದ ಅಭಿವೃದ್ದಿ ಕೆಲಸಗಳನ್ನು ಮಾಡಬೇಕೆಂದು ಆರ್ಶಿವಚನ ನೀಡಿದರು. 


ಸುದ್ದಿ ಓದಿ