ಹಗರಿಬೊಮ್ಮನಹಳ್ಳಿ

ಚುನಾವಣೆಯಲ್ಲಿ ರಾಮ ಜಪ, ನಂತರ ರಾವಣನ ರೂಪ: ಶಾಸಕ ಭೀಮಾನಾಯ್ಕ್

ಚುನಾವಣೆಯಲ್ಲಿ ರಾಮ ಜಪ, ನಂತರ ರಾವಣನ ರೂಪ: ಶಾಸಕ ಭೀಮಾನಾಯ್ಕ್


ಹಗರಿಬೊಮ್ಮನಹಳ್ಳಿ 14: ವಿಕಲ ಚೇತನರಿಗೆ ನೀಡುತ್ತಿರುವ 1400 ಮಾಶಾಸನದಿಂದ ಜೀವನ ನಡೆಸುವುದು ಕಷ್ಟಕರವಾಗಿದ್ದು, ಅಧಿವೇಶನದಲ್ಲಿ 2500ರೂಗಳಿಗೆ ಏರಿಕೆ ಮಾಡುವಂತೆ ವಿಕಲ ಚೇತನರ ವಿಧಾನ ಸೌಧದಲ್ಲಿ ಧ್ವನಿಯಾಗುವೆ ಎಂದು ಶಾಸಕ ಎಸ. ಭೀಮಾನಾಯ್ಕ್ ಹೇಳಿದರು.

ಪಟ್ಟಣದ ಗಂ.ಭೀ.ಪದವಿ ಪೂರ್ವ ಕಾಲೇಜು ಅವರಣದಲ್ಲಿ ಜಿಲ್ಲಾ ಖನಿಜ ನಿಧಿ ಅನುದಾನದಿಂದ ವಿಕಲ ಚೇತನರಿಗೆ ತ್ರಿಚಕ್ರ ವಾಹನಗಳ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ವಿಕಲ ಚೇತನರ ಬದುಕು ದುಸ್ತರವಾಗದಂತೆ ನೀಡುವ ಮಾಶಾಸನವನ್ನು 2500ರುಗಲಿಕೆ ಏರಿಕೆ ಮಾಡಲು ವಿಧಾನ ಸೌಧದಲ್ಲಿ ಧ್ವನಿ ಎತ್ತುವೆ, ಹಗರಿಬೊಮ್ಮನಹಳ್ಳಿ ವಿಧಾನ ಸಭಾ ಕ್ಷೇತ್ರದಲ್ಲಿನ 143 ಹಳ್ಳಿ,3 ಪಟ್ಟಣಗಳ ಅರ್ಹ ವಿಕಲ ಚೇತನರಿಗೆ ತ್ರಿಚಕ್ರ ವಾಹನಗಳ ಸೌಲಭ್ಯಕ್ಕೂ ಅನುಮೋದನೆ ನೀಡುವಂತೆ ಸಂಭಂಧಿಸಿದ ಇಲಾಖೆಗಳ ಗಮನಕ್ಕೆ ತಂದು ದೈವಾಂಶ ಸಂಭೂತ ರೂಪದಲ್ಲಿರುವ ವಿಕಲ ಚೇತನರ ಬದುಕನ್ನು ಹಸನಗೊಳಿಸುವಲ್ಲಿ ಪ್ರಮಾಣಿಕ ಪ್ರಯತ್ನ ಮಾಡವೆ ಎಂದರು.

ವಿಕಲ ಚೇತನರನ್ನು ಮುಂದಿಟ್ಟು ರಾಜಕೀಯ ಮಾಡುವುದನ್ನು ಬಿಟ್ಟು ಕ್ಷೇತ್ರದ ಅಭಿವೃಧ್ಧಿಗೆ ಮುಂದಾಗಬೇಕೆ ಹೊರತು ಅವರನ್ನು ಮುಂದಿಟ್ಟುಕೊಂಡು ರಾಜಕೀಯ ಮಾಡಬಾರದು, ಚುನಾವಣೆಗಳು ಹತ್ತಿರವಾದಾಗ ರಾಮನ ಜಪ ಮಾಡಿ, ಅಧಿಕಾರದ ಚುಕ್ಕಾಣಿ ಕೈಗೆ ಸಿಕ್ಕ ತಕ್ಷಣ ರಾವಣಸ ಸ್ವರೂಪ ಪಡೆಯುವ ಸಂಸ್ಕೃತಿ ಬಿಜೆಪಿಯವರದು,  ರಾಜ್ಯದಲ್ಲಿ ಕಾಂಗ್ರೇಸ್ ಹಾಗೂ ಜೆಡಿಎಸ್ ಪಕ್ಷಗಳ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಕಾಣೆಯಾಗಿದ್ದ ಮಾಜಿ ಶಾಸಕ ,ಸಮ್ಮಿಶ್ರ ಸರ್ಕಾರ ಪತನವಾದ ಕೂಡಲೇ ಪ್ರತ್ಯಕ್ಷವಾಗಿ ಅಧಿüಕಾರಿಗಳ ಮೇಲೆ ದರ್ಪ ತೋರುತ್ತಿರುವುದು ಸಮಂಜಸವಲ್ಲ, ತಾವು ಶಾಸಕರದಾಗ ಶಾಸಕರ ಅನುದಾನದಲ್ಲಿ ಜನಪರ ಕಾಳಜಿ ಇದ್ದಿದ್ದರೆ ಜನ ತಿರಸ್ಕರಿಸುತ್ತಿರಲಿಲ್ಲ ,ತಮ್ಮ ಅಧಿಕಾರ ಅವಧಿಯಲ್ಲಿ ಮಣ್ಣಿನ ರಸ್ತೆಗಳಿಗೆ 10ಲಕ್ಷದವರೆಗೆ ಬಿಲ್ ಪಾವತಿ ಮಾಡಿಕೊಂಡಿರುವುದು,ಗಂಗಾ ಕಲ್ಯಾಣ ಸೇರಿದಂತೆ ಬಸವ ವಸತಿ ಯೋಜನೆಗಳಲ್ಲಿಯೋ ಹಣ ಲೂಟಿ ಹೊಡೆದಿರುವುದು ಸರ್ವರಿಗೂ ತಿಳಿದ ಸಂಗತಿಯಾಗಿದೆ.ಎಂದು ಮಾಜಿ ಶಾಸಕರ ವಿರುಧ್ಧ ಚಾಟಿ ಬೀಸಿದರು. ತ್ರಿಚಕ್ರ ವಾಹನಗಳ ವಿತರಣೆಯಲ್ಲಿ ವಿಳಂಬಕ್ಕೆ ಕ್ಷೇತ್ರದ ಶಾಸಕರನ್ನು ಗಣನೆಗೆ ತೆಗೆದುಕೊಳ್ಳದೇ ಜಿಲ್ಲಾ ಕಛೇರಿಗೆ ವಿಕಲ ಚೇತನರನ್ನು ಕರೆಯಿಸಿ ಪರೀಕ್ಷೆ ಮಾಡಿಸಿದ್ದು ಒಂದೆಡೆಯಾದರೆ ಇನ್ನು ಅಂಗವಿಕಲರಿಗೆ 100ಕಿ.ಮಿ.ಒಡಾಟದಲ್ಲಿ ಅಗುವ ಅನೇಕ ರೀತಿಯ ತೊಂದರೆಗಳನ್ನು ಗಮನದಲ್ಲಿಟ್ಟುಕೊಂಡು ವಿತರಣೆ ತಡವಾಗಿದೆ ಹೊರತು ಯಾವುದೇ ದುರುದ್ದೇಶವಿಲ್ಲವೆಂದು ಸ್ಟಷ್ಟೀಕರಣ ನೀಡಿದರು.

ವಿಕಲ ಚೇತನರ ಮುಖಂಡ ರಂಗಪ್ಪ ದಾಸರ ಮಾತನಾಡಿ ವಿಕಲ ಚೇತನರಿಗೆ ನೀಡಿರುವ ತ್ರಿಚಕ್ರ ವಾಹನಗಳ ವಿಳಂಬಕ್ಕೆ ವಿರುಧ್ಧವಾಗಿ ಧರಣಿ ಮಾಡಿದ್ದೇವೆ ಯಾವುದೇ ರಾಜಕೀಯ ಉದ್ದೇಶಕ್ಕಲ್ಲ, ತ್ರಿಚಕ್ರ ವಾಹನಗಳು ವಿತರಣೆಯಗದೇ ತಿಂಗಳುಗಟ್ಟಲೆ ಧೂಳು ಹಿಡಿಯುತ್ತಿದ್ದವು ಅದಕ್ಕಾಗಿ ಕೂಡಲೇ ಅವುಗಳನ್ನು ವಿತರಿಸುವಂತೆ ಧರಣಿ ಮಾಡಿದೆವು ಧರಣಿ ಸ್ಥಳಕ್ಕೆ ಶಾಸಕ ಭೀಮಾನಾಯ್ಕ್ ಬಂದು ವಿತರಣಾ ದಿನಾಂಕ ಪ್ರಕಟಿಸಿದ ಕೂಡಲೇ ಧರಣಿಯನ್ನು ಕೈ ಬಿಟ್ಟೆವು ಎಂದರು, ಇನ್ನು ಅಂಗವಿಕಲರ ಹತ್ತು ಹಲವು ಸಮಸ್ಯೆಗಳಿಗೆ ಸ್ಫಂದಿಸುವಂತೆ ಮನವಿಯನ್ನು ಮಾಡಿದರು. ಇದೇ ಸಂಧರ್ಭದಲ್ಲಿ ವಿಕಲ ಚೇತನರು ಶಾಸಕರನ್ನು ಸನ್ಮಾನಿಸಿ ಗೌರವಿಸಿದರು.

ತಾಲೂಕು ಪಂಚಾಯತಿ ಅಧ್ಯಕ್ಷೆ ನಾಗಮ್ಮ ಗೋಣಿ ಬಸಪ್ಪ, ತಾ.ಪಂ. ಸ್ಥಾಯಿ ಸಮಿತಿ ಅಧ್ಯಕ್ಷ ಬುಡ್ಡಿ ಬಸವರಜ್, ಮುಟುಗನಹಳ್ಳಿ ಕೊಟ್ರೇಶ್,ಅಕ್ಕಿ ತೋಟೇಶ ಮಾತನಾಡಿದರು. ತಾ.ಪಂ ಸದಸ್ಯ ಅನಿಲ್ ಜಾಣ,ಹಾಲ್ದಾಳ್ ವಿಜಯಕುಮಾರ,ಕನ್ನಿಹಳ್ಳಿ ಚಂದ್ರಶೇಖರ್, ಪವಾಡಿ ಹನುಮಂತಪ್ಪ,ಹೆಗ್ಡಾಳ್ ರಾಮಣ್ಣ,ಚಿಲಕನ ಹಟ್ಟ ಗ್ರಾಮ.ಪಂ.ಸದಸ್ಯೆ ಲಕ್ಷೀ,ಚಾಂದೀಬಾಯಿ,ಗುತ್ತಿಗೆದಾರ ಕೇಶವರೆಡ್ಡಿ, ಹುಡೇದ ಗುರುಬಸವರಾಜ, ಹನ್ಸಿದೇವರಾಜ, ಜಂದೀಸಾಬ್, ಅಜಿಜುಲ್ಲಾ, ಬಾಲಕೃಷ್ಣಬಾಬು,ಹುಚ್ಚಪ್ಪ,ಸಿಡಿಪಿಒ ಚನ್ನಪ್ಪ,ಬಿಇಒ ಶೇಖರಪ್ಪ ಹೊರಪೇಟೆ ಸೇರಿದಂತೆ ಇನ್ನಿತರರು ಇದ್ದರು. ಡಿಶ್ ಮಂಜುನಾಥ್ ಸ್ವಾಗತಿಸಿದರೆ,ಕಸಾಪ ಮಾಜಿ ತಾಲೂಕಾಧ್ಯಕ್ಷ ಎಂ.ಪಿ.ಎಂ.ಮಂಜುನಾಥ್ ಸ್ವಾಗತಿಸಿದರು.

ಸುದ್ದಿ ಓದಿ