ರಾಮನಾಮ ಪರಿವರ್ತನೆಯ ರಹದಾರಿ
ಮಹಾಲೀಂಗಪುರ 30: ಶ್ರೀರಾಮ ನಾಮ ಜಪದಿಂದ ದರೋಡೆಕೋರೆ ರತ್ನಾಕರ ವಾಲ್ಮಿಕಿ ಮಹರ್ಷಿಯಾಗಿ ಪರಿವರ್ತನೆಯಾಗಿ ದೇಶಕ್ಕೆ ಅಗ್ರಗಣ್ಯ ಮಹಾಕಾವ್ಯ ನೀಡಿದರು, ಅಂತಹ ಶಕ್ತಿ ರಾಮನಾಮಕ್ಕಿದೆ ಎಂದು ಶಿಕ್ಷಕಿ ರೂಪಾ ಜಾಡಗೌಡರ ಹೇಳಿದರು.
ಶನಿವಾರ ಸ್ಥಳೀಯ ಜೆಸಿ ಆಂಗ್ಲಮಾಧ್ಯಮ ಶಾಲೆಯಲ್ಲಿ ಹಮ್ಮಿಕೊಂಡಿದ್ದ ವಾಲ್ಮಿಕಿ ಜಯಂತಿಯಲ್ಲಿ ಮಾತನಾಡಿದರು. ಶಿಕ್ಷಕಿ ಸುಧಾ ಕೊಂಗವಾಡ ಮಾತನಾಡಿದರು. ಕು.ಮಹಾಲಕ್ಷ್ಮಿ ಗುಳದಳ್ಳಿ ಪ್ರಾರ್ಥಿಸಿ, ಕು.ವರ್ಷಿಣಿ ಸಗರಿ, ಪ್ರತೀಕ್ಷಾ ಮ್ಯಾಗಾಡಿ ನಿರೂಪಿಸಿದರು.
ಮುಖ್ಯೋಪಾಧ್ಯಾಯ ಎಸ್.ಜಿ.ಕೌಜಲಗಿ, ಶಿಕ್ಷಕರಾದ ಎನ್.ಎಮ್.ನಾಡಗೌಡ, ಎಂ.ಎಸ್.ಕೊಪ್ಪ, ಆರ್.ಜಿ.ಹುದ್ದಾರ, ಗುರುವೃಂದ ಹಾಗೂ ಮಕ್ಕಳು ಇದ್ದರು.