ರಾಮಮಂದಿರ ನಿರ್ಮಾಣ ನಿಧಿಸಂಗ್ರಹ ಅಭಿಯಾನ
ಸಿಂದಗಿ ೧೯: ತಾಲೂಕಿನ ಗೋಲಗೇರಿ ಮತ್ತು ಹಂದಿಗನೂರು ಗ್ರಾಮಗಳಲ್ಲಿ ಗೋಲಗೇರಿ ಭಂಡಾರಿ ದೇವಿ ಶಕ್ತಿ ಪೀಠದ ಸ್ವಾಮೀಜಿ ಮುನಿಂದ್ರ ಮಹಾ ಸ್ವಾಮಿಗಳು ಚಾಲನೆ ನೀಡಿದ ರಾಮಮಂದಿರ ನಿರ್ಮಾಣ ನಿಧಿಸಂಗ್ರಹ ಅಭಿಯಾನದಲ್ಲಿ ಪ್ರತಿ ಒಂದು ಮನೆ ಮನೆಗೆ ಹೋಗಿ ನಿಧಿ ಸಂಗ್ರಹಿಸಲಾಯಿತು.
ಸಂತೋಷ ಪಾಟೀಲ ಡಂಬಳ, ಶೇಖರಗೌಡ ಹರನಾಳ, ಫ್ರಭುಗೌಡ ಪಾಟೀಲ, ಓಂ ಪ್ರಕಾಶ್ ಬಿರಾದಾರ ,ಶಿವು ತಳವಾರ, ಮಹಾಂತೇಶ ಸಾತಿಹಾಳ ,ಭಾಗಣ್ಣ ಕೋಟೇಗೋಳ, ಗುರು ಹುರಕಡ್ಲಿ ಇನ್ನಿತರರು ಇದ್ದರು.