ಪರಂಪರೆ, ಸಂಸ್ಕೃತಿಯ ಪ್ರತೀಕ ರಕ್ಷಾ ಬಂದನ
ಮುಧೋಳ: ಮಮತೆ, ವಾತ್ಸಲ್ಯ, ಸಂಪ್ರದಾಯ, ಪರಂಪರೆಯ ಪ್ರತೀಕವಾದ ರಕ್ಷಾ ಬಂದನದಿಂದ ಬಾಂಧವ್ಯಗಳ ಕೊಂಡಿ ಮತ್ತಷ್ಟು ಬಿಗಿಯಾಗುತ್ತದೆ ಎಂದು ಲೋಕಾಪೂರ ಹಿರೇಮಠದ ಡಾ.ಚಂದ್ರಶೇಖರ ಮಹಾಸ್ವಾಮೀಜಿ ಹೇಳಿದರು.
ಗುರುವಾರ ನಗರದ ತ್ರಿವೇಣಿ ಶಿಕ್ಷಣ ಸಂಸ್ಥೆಯ ಶ್ರೀ ಸಂಗಮನಾಥ ಶಾಲಾ ಆವರಣದಲ್ಲಿ ನಡೆದ ವಿಶೇಷ ರಕ್ಷಾ ಬಂಧನ, ಉಪನ್ಯಾಸ ಕಾರ್ಯಕ್ರಮ ನಿಮಿತ್ಯ ನಡೆದ ರಕ್ಷಾ ಬಂದನದ ವಿಶೇಷ ಕಾರ್ಯಕ್ರಮ"ಬಾಂಧವ್ಯದ ಬೆಸುಗೆ" ಕಾರ್ಯಕ್ರಮಕ್ಕೆ ಸಸಿಗೆ ನೀರು ಹಾಕಿ ಉದ್ಘಾಟಿಸಿ ಮಾತನಾಡಿದರು.
ತಂಗಿಯೂ ತನ್ನ ಅಣ್ಣ ಅಥವಾ ತಮ್ಮನಿಗೆ ರಾಕಿ ನೂಲು ಕಟ್ಟುವುದು ಸೋದರತ್ವದ ಭಾಂಧವ್ಯದ ಸಂಕೇತ ಸೋದರ-ಸೋದರಿಯರ ನಡುವಿನ ಬಾಂಧ್ಯವ್ಯ ನೂರ್ಕಾಲ ಬಾಳಲಿ ಎಂಬುದೆ ಇದರ ಆಶಯವಾಗಿದೆ.
ಅಳಿಸಿ ಹೋಗುತ್ತಿರುವ ಭಾರತೀಯ ಪರಂಪರಾಗತ ಹಬ್ಬಗಳಿಗೆ ಮರು ಜೀವ ತುಂಬುವ ಇಂತಹ ಶಿಕ್ಷಣ ಸಂಸ್ಥೆಯ ಮುಖ್ಯಸ್ಥರ ಕಾರ್ಯ ನಿಜಕ್ಕೂ ಶ್ಲಾಘನೀಯವಾದುದು.ಇಂದು ಸ್ರ್ತಿಯರ ಮೇಲೆ ನಡೆಯುತ್ತಿರುವ ನಾನಾ ವಿಧವಾದ ದೌರ್ಜನ್ಯಗಳುನ್ನು ನೋಡೊದರೆ ಸೋದರಿ ಎಂಬ ಶಬ್ದದ ಅರ್ಥವೇ ಗೋತ್ತಲ್ಲವೇನೋ ಎನಿಸುತ್ತದೆ.ಇದು ಎಲ್ಲ ಕಡೆ ನಡೆದು ವಿಕೃತ ಭಾವನೆಗಳಿಗೆ ಕಢಿವಾಣ ಹಾಕಲು ಸೂಕ್ತ ಸಾಧನವಾಗಿದ್ದು ಇಂತಹ ಕಾರ್ಯಕ್ರಮಗಳು ಎಲ್ಲೆಡೆ ಮೂಡಿ ಬರಬೇಕು ,ಎಂದು ಹೇಳಿದರು.
ಪತ್ರಕರ್ತ ವೆಂಕಟೇಶ ಗುಡೆಪ್ಪನವರ ಮಾತನಾಡಿ ಅಣ್ಣ-ತಂಗಿಯರ ಬಂಧವ್ಯಯದ ದ್ಯೂತಕವಾಗಿರುವ ರಕ್ಷಾ ಬಂದನ ಆಚರಣೆಗೆ ಭಾರತೀಯ ಸಂಸ್ಕೃತಿಯಲ್ಲಿ ತನ್ನದೆಯಾದ ಮಹತ್ವವಿದ್ದು ಅದನ್ನು ಅರಿತು ಎಲ್ಲೆಡೆ ಇಂತಹ ಕಾರ್ಯಕ್ರಮಗಳು ಮೂಡಿ ಬರಲಿ ಮಕ್ಕಳ ಮನಸ್ಸು ಸ್ವಚ್ಚವಾಗಿಟ್ಟು ಭವಿಷ್ಯದ ಭಾವಿ ನಾಯಕರಾಗಲಿ,ಐತಿಹಾಸಿಕ ಹಾಗೂ ಪುರಾಣ ಕಾಲದ ಹಲವಾರು ಘಟನೆಗಳಲ್ಲಿ ಒಂದು ನೂಲಿನ ಎಳೆಯಾದ ರಾಕಿಯು ಹಲವಾರು ದುಷ್ಟ ಶಕ್ತಿಗಳ ಹೃದಯದಲ್ಲಿ ಮಾನವೀಯ ಮನಸ್ಸನ್ನು ತುಂಬುವಂತಹ ಕಾರ್ಯಗಳನ್ನು ಮಾಡಿದೆ ಎಂದು ಹೇಳಿದರು
ಕು.ಬಾಗ್ಯಶ್ರೀ ಹಾಗೂ ಪ್ರತಿಭಾ ಚವ್ಹಾಣ ಮಾತನಾಡಿ ಅಣ್ಣ-ತಂಗಿಯ ಪವಿತ್ರ ಸಂಬಂದಕ್ಕೆ ಇದೊಂದು ಉತ್ತಮ ಕೊಡುಗೆಯಾಗಿದೆ ಎಂದು ಹೇಳಿದರು.
ಅಧ್ಯಕ್ಷತೆಯನ್ನು ತ್ರಿವೇಣಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ನಿರ್ಮಲಾ ಶಿವಕುಮಾರ ಮಲಘಾಣ ವಹಿಸಿದ್ದರುಆಡಳಿತಾಧಿಕಾರಿ ಮಲ್ಲು ಕಳ್ಳೆನ್ನವರ,ಪ್ರಾಚಾರ್ಯ ಡಾ.ಎಸ್.ಖಾನ್,ಮುಖ್ಯೋಪಾಧ್ಯಾಯ ವೆಂಕಟೇಶ ಗುಡೆಪ್ಪನವರ,ಮಾಲಾ ಪಾಟೀಲ ಇದ್ದರು
ಮೈಧಾನದಲ್ಲಿ ಏಕಕಾಲಕ್ಕೆ ಒಟ್ಟು 549 ವಿದ್ಯಾರ್ಥಿಗಳು ವಿದ್ಯಾರ್ಥಿಗಳಿಗೆ ರಾಕಿ ಕಟ್ಟಿದ್ದು ಮತ್ತೊಂದು ವಿಶೇಷ.
ವಿದ್ಯಾರ್ಥಿನಿಯರು ವಿದ್ಯಾರ್ಥಿಗಳು ಹಾಗೂ ಅತಿಥಿಗಳಿಗೆ ರಾಕಿ ಕಟ್ಟುವ ಮೂಲಕ ವಿಶೇಷವಾಗಿ ಉದ್ಘಾಟನೆ ಮಾಡಲಾಯಿತು.ನಂತರ ರೂಪಕ,ಗೀತ ನಾಟಕ,ನೃತ್ಯಗಳು ಜರುಗಿದವು.ವಿಜೇತ ತಂಡಗಳಿಗೆ ಬಹುಮಾನ ನೀಡಿ ಗೌರವಿಸಲಾಯಿತು.